ಕೆಸರಿನಲ್ಲಿ ಹೂತು ಹೋದ ಲಾರಿ; ಮುಂದೆ ತಳ್ಳಿದ ಆನೆ

ಪಂಜಾಬ್: ಕೆಸರು ತುಂಬಿದ ರಸ್ತೆಯಲ್ಲಿ ವಾಹನಗಳು ಹುಗಿಯುವುದು ಸಾಮಾನ್ಯ. ಹೀಗಾದಾಗ ಕ್ರೇನ್​ ಬಳಸಿ ವಾಹನವನ್ನು ಮೇಲೆತ್ತಲಾಗುತ್ತದೆ. ಆದರೆ ಅಮೃತ್​​ಸರ ಸಮೀಪದ ಹಳ್ಳಿಯೊಂದರಲ್ಲಿ ಜನರು ಆನೆಯನ್ನು ಬಳಸಿ, ಕೆಸರಿನಲ್ಲಿ ಹೂತು ಹೋಗಿದ್ದ ಲಾರಿಯನ್ನು ಚಲಿಸುವಂತೆ ಮಾಡಿದ್ದಾರೆ. ಬಲಶಾಲಿ ಆನೆ ದೊಡ್ಡ ಗಾತ್ರದ ಲಾರಿಯನ್ನು ತಳ್ಳುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಸರಿನ ರಸ್ತೆಯಲ್ಲಿ ಲಾರಿಯೊಂದು ಹೂತು ನಿಂತಿತ್ತು. ಮುಂದೆ ಚಲಿಸುವಂತೆ ಮಾಡಲು ಜನರು ಲಾರಿಯನ್ನು ತಳ್ಳಿದ್ದಾರೆ. ಆದರೆ ಲಾರಿಯನ್ನು ಮುಂದೆ ತಳ್ಳಲು ಜನರಿಂದ ಮಾತ್ರ ಸಾಧ್ಯವಾಗಿಲ್ಲ. … Continue reading ಕೆಸರಿನಲ್ಲಿ ಹೂತು ಹೋದ ಲಾರಿ; ಮುಂದೆ ತಳ್ಳಿದ ಆನೆ