ಇಂದು ವಿಶ್ವ ಗಜ ದಿನ: ಆನೆ, ಮಾನವ ಸಂಘರ್ಷ ತಾರಕಕ್ಕೆ

| ಅವಿನಾಶ್ ಜೈನಹಳ್ಳಿ. ಮೈಸೂರು

ಕರ್ನಾಟಕದಲ್ಲಿ ಪ್ರಸ್ತುತ 6395 ಆನೆಗಳಿದ್ದು, ಕಾಡುಗಳ್ಳ ವೀರಪ್ಪನ್ ಅಟ್ಟಹಾಸಕ್ಕೆ ತೆರೆ ಬಿದ್ದ ನಂತರ ಅರಣ್ಯ ಇಲಾಖೆಯ ಸಂರಕ್ಷಣಾ ಕ್ರಮಗಳ ಫಲವಾಗಿ ದಶಕದಿಂದ ರಾಜ್ಯದಲ್ಲಿ ಆನೆಗಳ ಸಾವಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಇತ್ತೀಚೆಗೆ ಕಾಡುಗಳಲ್ಲಿ ಬಿದಿರು ಒಣಗುತ್ತಿದ್ದು, ಬರದಿಂದ ಮೇವು ಮತ್ತು ನೀರಿಗಾಗಿ ಗಜಪಡೆ ಅರಣ್ಯದಿಂದ ಆಚೆ ಬಂದು ಜೀವ ಕಳೆದುಕೊಳ್ಳುತ್ತಿವೆ.

ಕಳೆದ ಐದು ವರ್ಷದಲ್ಲಿ ರಾಜ್ಯದಲ್ಲಿ ವಿವಿಧ ಕಾರಣಗಳಿಂದ ನೂರಕ್ಕೂ ಹೆಚ್ಚು ಆನೆಗಳು ಮೃತಪಟ್ಟಿದ್ದು, ಬಹುತೇಕ ಆನೆಗಳು ಸಹಜ ರೀತಿಯಲ್ಲಿ ಮೃತಪಟ್ಟಿವೆ. ಆದರೂ, ಕೆಲ ಆನೆಗಳು ಗುಂಡೇಟಿನಿಂದ ಮೃತಪಟ್ಟಿದ್ದರೆ, ಇನ್ನು ಕೆಲ ಆನೆಗಳು ವಿದ್ಯುತ್ ತಗುಲಿ ಪ್ರಾಣ ಬಿಟ್ಟಿವೆ. ಆನೆ ಮತ್ತು ಮಾನವ ಸಂಘರ್ಷ ಹೆಚ್ಚಿರುವುದರಿಂದ ಆನೆಗಳ ಅಸಹಜ ಸಾವು ಹೆಚ್ಚಾಗುತ್ತಿವೆ.

2018-19ರಲ್ಲಿ 13 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದರೆ, 2019-20ರಲ್ಲಿ 30, 2020-21ರಲ್ಲಿ 26, 2021-22ರಲ್ಲಿ 28, 2022-23ರಲ್ಲಿ 30 ಹಾಗೂ 3.09.2023ರವರೆಗೆ 21 ಜೀವಹಾನಿ ಆಗಿದೆ. ದಕ್ಷಿಣ ಭಾರತದಲ್ಲೇ ಹೆಚ್ಚು ಆನೆಗಳು: ದೇಶದಲ್ಲಿ 27,312ಕ್ಕೂ ಹೆಚ್ಚು ಆನೆಗಳಿದ್ದು, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲೇ ಹೆಚ್ಚು ಆನೆ ಇವೆ. ಈ ಮೂರು ರಾಜ್ಯಗಳಲ್ಲೇ 12,210 ಆನೆಗಳಿದ್ದು, ಈ ಪೈಕಿ ಕರ್ನಾಟಕದಲ್ಲಿ ಹೆಚ್ಚು, 6,395 ಆನೆಗಳು ಇವೆ. ತಮಿಳುನಾಡಿನಲ್ಲಿ 2,761, ಕೇರಳದಲ್ಲಿ 3,054, ಅಸ್ಸಾಂನಲ್ಲಿ 5,719, ಒಡಿಶಾದಲ್ಲಿ 1,966 ಆನೆಗಳಿವೆ. 2023ನೇ ಸಾಲಿನ ಆನೆ ಗಣತಿ ಪ್ರಕಾರ ರಾಜ್ಯದ 23 ವನ್ಯಜೀವಿ ವಿಭಾಗಗಳಲ್ಲಿ ಆನೆಗಳು ಇರುವುದು ದೃಢಪಟ್ಟಿದೆ. 2017ರಲ್ಲಿ ರಾಜ್ಯದಲ್ಲಿ ಸುಮಾರು 6049 ಆನೆಗಳಿದ್ದವು. 2023ರ ಗಣತಿಯ ಪ್ರಕಾರ ಕರ್ನಾಟಕದಲ್ಲಿ 6,395 ಆನೆಗಳಿವೆ ಎಂದು ಅಂದಾಜು ಮಾಡಲಾಗಿದ್ದು, 350 ಆನೆಗಳು ಹೆಚ್ಚಳವಾಗಿರುವುದು ಕಂಡುಬಂದಿದೆ.

1,116 ಆನೆಗಳೊಂದಿಗೆ ಬಂಡೀಪುರ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಆನೆಗಳಿರುವ ತಾಣವಾಗಿದೆ. ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 831, ಮಹದೇಶ್ವರ ವನ್ಯಧಾಮದಲ್ಲಿ 706, ಹಾಗೂ ಬಿಆರ್​ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ 619, ಕಾವೇರಿ ವೈಡ್​ಲೈಫ್​ನಲ್ಲಿ 236, ಮಡಿಕೇರಿ ವಿಭಾಗದಲ್ಲಿ 214, ಮಡಿಕೇರಿ ವೈಡ್​ಲೈಫ್​ನಲ್ಲಿ 113, ಮೈಸೂರು ವಿಭಾಗದಲ್ಲಿ 59, ವಿರಾಜಪೇಟೆ ವಿಭಾಗದಲ್ಲಿ 58 ಆನೆಗಳಿವೆ. ಯಲ್ಲಾಪುರ ವಿಭಾಗವು ಕೇವಲ 2 ಆನೆಗಳಿರುವುದರಿಂದ ಅತಿ ಕಡಿಮೆ ಆನೆಗಳಿರುವ ತಾಣವಾಗಿದೆ.

ದೇಶದಲ್ಲೆ ಅತೀ ಹೆಚ್ಚು ಆನೆಗಳನ್ನು ಹೊಂದಿರುವ ಕರ್ನಾಟಕದಲ್ಲಿ ಆನೆ ಮತ್ತು ಮಾನವ ಸಂಘರ್ಷ ತಾರಕಕ್ಕೇರಿದ್ದು, ಆನೆಗಳ ಹಾಗೂ ಸಾರ್ವಜನಿಕರ ಸಾವಿನ ಸರಣಿ ಮುಂದುವರಿಯುತ್ತಿದೆ. ದಿನದಿಂದ ದಿನಕ್ಕೆ ಎಲಿಫೆಂಟ್ (ಆನೆ) ಕಾರಿಡಾರ್ ಛಿದ್ರಗೊಳ್ಳುತ್ತಿರುವುದೇ ಇದಕ್ಕೆ ಪ್ರಮುಖ ಕಾರಣ. ಸರ್ಕಾರ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕಿದೆ. ಆನೆ ಕಾರಿಡಾರ್​ಗಳ ಸಂರಕ್ಷಣೆಗೆ ಕಟ್ಟುನಿಟ್ಟಿನ ಯೋಜನೆಗಳನ್ನು ರೂಪಿಸಬೇಕಿದೆ.

ರಕ್ಷಿಸಬೇಕಿದೆ ಆನೆ ಕಾರಿಡಾರ್

ಆನೆ ಕಾರಿಡಾರ್ ಎಂಬುದು ಕಿರುದಾದ ದಾರಿಯಾಗಿದ್ದು, ಆನೆಗಳು ಒಂದು ಆವಾಸಸ್ಥಾನದ ಸ್ಥಳದಿಂದ ಇನ್ನೊಂದಕ್ಕೆ ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡುತ್ತದೆ. ಮನುಷ್ಯರಿಗೆ ತೊಂದರೆಯಾಗದಂತೆ ಆನೆಗಳು ಚಲಿಸಲು ಸಹಾಯಕವಾಗುತ್ತದೆ. ಆನೆ ಕಾರಿಡಾರ್​ಗಳು ಆನೆಗಳ ಎರಡು ದೊಡ್ಡ ಆವಾಸಸ್ಥಾನಗಳನ್ನು ಸಂರ್ಪಸುವ ಭೂಮಿಯ ಕಿರಿದಾದ ಪಟ್ಟಿಗಳಾಗಿವೆ. ಅಪಘಾತ, ಇತರ ಕಾರಣಗಳಿಂದ ಪ್ರಾಣಿಗಳ ಸಾವು-ನೋವುಗಳನ್ನು ಕಡಿಮೆ ಮಾಡಲು ಆನೆ ಕಾರಿಡಾರ್ ಅವಶ್ಯ.

ಬನ್ನೇರುಘಟ್ಟದಿಂದ ಮೈಸೂರು ಮಾರ್ಗವಾಗಿ ಕೇರಳಕ್ಕಿದ್ದ ಆನೆಪಥ ಬಹುತೇಕ ಒತ್ತುವರಿಯಾಗಿರುವುದರಿಂದ ಆನೆಗಳ ಓಡಾಟಕ್ಕೆ ಆಡಚಣೆಯಾಗಿದೆ. ಇದರಿಂದ ಗ್ರಾಮಗಳತ್ತ ಆನೆಗಳು ದಾಳಿಯಿಡುತ್ತವೆ. ಅಲ್ಲದೆ ಕಾಡಿನಲ್ಲಿ ಬಿದಿರು ಸೇರಿ ಆಹಾರ ಲಭ್ಯತೆಗೆ ಪರಿಣಾಮಕಾರಿಯಾಗಿ ಯೋಜನೆ ರೂಪಿಸದೆ ಇರುವುದರಿಂದ ಗಜಪಡೆ ರೈತರ ಜಮೀನಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ.

ಏನು ಮಾಡಬಹುದು?

  • ಆನೆ ಕಾರಿಡಾರ್​ನಲ್ಲಿ ಒತ್ತುವರಿ ತೆರವು ಮಾಡಬೇಕಿದೆ.
  • ಪಕ್ಕದ ಜಮೀನುಗಳನ್ನು ಖರೀದಿಸಿ ಅದನ್ನು ಕಾರಿಡಾರ್​ಗೆ ಸೇರಿಸಬೇಕು.
  • ಸಮೀಪದಲ್ಲಿ ಯಾವುದೇ ರೀತಿಯ ಮೈನಿಂಗ್​ಗೆ ಅವಕಾಶ ನೀಡಬಾರದು.

ಕಾರಿಡಾರ್​ಗಳಿಗೆ ಅನಾನುಕೂಲ ಆಗುವ ಯಾವುದೇ ಯೋಜನೆಯನ್ನು ಜಾರಿ ಮಾಡಬಾರದು. ಅಲ್ಲದೆ, ಸಂಘರ್ಷ ತಡೆಗೆ ಅರಣ್ಯ ಇಲಾಖೆ ಆನೆ ಕಂದಕ ನಿರ್ವಿುಸುವುದು, ಸೌರಶಕ್ತಿ ಬೇಲಿ ನಿರ್ವಣ, ಆಹಾರ ಕೊರತೆ ನೀಗಿಸಲು ಅರಣ್ಯ ಪ್ರದೇಶದಲ್ಲಿ ಸಸ್ಯ ಮತ್ತು ಬಿದಿರು ಬೀಜಗಳ ಬಿತ್ತನೆ, ಕೆರೆಕಟ್ಟೆ ನೀರು ತುಂಬಿಸುವುದು ಅಗತ್ಯ. ಕಾಡಂಚಿನಲ್ಲಿ ರೈಲ್ವೆ ಕಂಬಿಯ ತಡೆಗೋಡೆ ನಿರ್ವಿುಸುತ್ತಿರುವುದು ಸ್ವಲ್ಪ ಮಟ್ಟಿಗೆ ಯಶ ಕಂಡಿದೆ.

ಸಂಘರ್ಷ ಎಲ್ಲಿ, ಏತಕ್ಕೆ?

ರಾಜ್ಯಾದ್ಯಂತ 60 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಆನೆ-ಮಾನವ ಸಂಘರ್ಷ ಹಳೇ ಮೈಸೂರು ಭಾಗದ ಹಾಸನ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಬೆಂಗಳೂರು ಗ್ರಾಮಂತರ, ಕನಕಪುರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿದೆ. ಮುಖ್ಯವಾಗಿ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಆಲೂರು ತಾಲೂಕಿನಲ್ಲಿ ನಿರಂತವಾಗಿ ನಡೆಯುತ್ತಲೇ ಇದೆ. ಆನೆ ಕಾರಿಡಾರ್ ನಾಶವಾಗಿರುವುದರಿಂದ ಗಜಪಡೆ ನಾಡಿನತ್ತ ನುಗ್ಗುತ್ತಿವೆ. ಸಂಘರ್ಷ ಏರ್ಪಟ್ಟು ಮನುಷ್ಯ ಪ್ರಾಣ ಬಿಡುತ್ತಿದ್ದರೆ, ಆನೆಗಳು ಸಹ ಜೀವ ಕಳೆದುಕೊಳ್ಳುತ್ತಿವೆ. ಕೊಡಗು, ಹಾಸನದ ಸಕಲೇಶಪುರ ಹಾಗೂ ಆಲೂರು ತಾಲೂಕಿನ ಕಾಫಿ ತೋಟಗಳಲ್ಲಿ ಆನೆಗಳ ಹಾವಳಿ ಮಿತಿ ಮೀರಿದ್ದು, ನೂರಕ್ಕೂ ಹೆಚ್ಚು ಆನೆಗಳು ಕಾಫಿ ತೋಟದಲ್ಲೇ ಬೀಡುಬಿಟ್ಟಿವೆ. ಬೆಳೆಹಾನಿ, ಪ್ರಾಣಹಾನಿ ಮಾಡುತ್ತಿವೆ. ಈ ಮೊದಲು ತೋಟಗಳಿಗೆ ನುಗ್ಗಿ ಬೆಳೆಗಳನ್ನು ಮಾತ್ರ ಹಾನಿ ಮಾಡುತ್ತಿದ್ದ ಆನೆಗಳು ಈಗ ತೋಟದಲ್ಲಿ ಕೆಲಸ ಮಾಡುತ್ತಿರುವ ಕಾರ್ವಿುಕರ ಪ್ರಾಣ ತೆಗೆಯುತ್ತಿವೆ. ಆನೆ ದಾಳಿಯಿಂದಾಗಿ ಕಾಫಿ ತೋಟಗಳಲ್ಲಿ ವಾರದಲ್ಲಿ ಸರಾಸರಿ ಒಂದು ಸಾವು ಸಂಭವಿಸುತ್ತಿದೆ. ಆನೆಗಳ ಹಾವಳಿ ಕಾಫಿ ಬೆಳೆಗಾರರಿಗೆ ದೊಡ್ಡ ಸಮಸ್ಯೆಯಾಗಿದೆ. ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎನ್ನುವುದು ಕಾಫಿ ಬೆಳೆಗಾರರ ಒತ್ತಾಯ.

ಪಾರಂಪರಿಕ ಪ್ರಾಣಿ

1879ರಲ್ಲಿ ಆನೆಗಳ ಸಂರಕ್ಷಣೆಗೆಂದು ಅಧಿನಿಯಮ ಹೊರಡಿಸಲಾಗಿದ್ದು, ವಿಶೇಷ ಪರವಾನಗಿ ಹೊಂದದ ಹೊರತು ಕಾಡಾನೆಗಳನ್ನು ಕೊಲ್ಲುವುದು, ಗಾಯಗೊಳಿಸುವುದು, ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ. 2010ರಲ್ಲಿ ಭಾರತ ಸರ್ಕಾರ ಆನೆಗಳನ್ನು ಪಾರಂಪರಿಕ ಪ್ರಾಣಿ ಎಂದು ಘೊಷಿಸಿದೆ.

ಗಜ ದಿನದ ಹಿನ್ನೆಲೆ

ಆನೆಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಅಂತಾರಾಷ್ಟ್ರೀಯ ಎಲಿಫೆಂಟ್ ಫೌಂಡೇಶನ್ ವನ್ಯಜೀವಿ ಸಂಸ್ಥೆಯು 2012 ರಿಂದ ಆಗಸ್ಟ್ 12 ರಂದು ವಿಶ್ವ ಗಜ ದಿನ ಎಂದು ಆಚರಿಸುತ್ತ ಬಂದಿದೆ. 2016ರಿಂದ ಭಾರತದಲ್ಲೂ ಆನೆ ದಿನ ಆಚರಿಸಲಾಗುತ್ತಿದೆ.

ಕಾರಿಡಾರ್​ಗಳು ಜನರಿಗೆ ಮತ್ತು ಆನೆಗಳಿಬ್ಬರಿಗೂ ಲಾಭದಾಯಕ. ಏಕೆಂದರೆ ಆನೆ ಹಿಂಡು ಆ ಪ್ರದೇಶಗಳಿಂದ ಹಾದು ಹೋದಾಗ ಅವುಗಳು ಸುರಕ್ಷಿತವಾಗಿರುತ್ತವೆ ಮತ್ತು ಬೇರೆ ದಾರಿಯಲ್ಲಿ ಬರುವುದಿಲ್ಲ. ಅದರಿಂದ ಕೃಷಿ ಉತ್ಪನ್ನಗಳು ನಾಶವಾಗುವುದಿಲ್ಲ. ಇದು ಆನೆ ಬೇಟೆಯಾಡುವ ಸಮಸ್ಯೆಯನ್ನು ಪರಿಹರಿಸಬಹುದು. ಮೊದಲ ಆನೆ ಕಾರಿಡಾರ್​ಗಳನ್ನು ಸಂರಕ್ಷಿಸುವ ಮತ್ತು ಅವುಗಳನ್ನು ಆನೆಯ ಅನುಕೂಲಕ್ಕೆ ತಕ್ಕಂತೆ ಅಭಿವೃದ್ಧಿಪಡಿಸುವ ಕೆಲಸವಾಗಬೇಕಿದೆ.

| ಕೆ.ಎಸ್.ಸುಧೀರ್ ವನ್ಯಜೀವಿ ತಜ್ಞ

ರಾಜ್ಯದಲ್ಲಿ 11 ಕಾರಿಡಾರ್​ಗಳು

ಭಾರತದಲ್ಲಿ 101 ಆನೆ ಕಾರಿಡಾರ್​ಗಳನ್ನು ಗುರುತಿಸಲಾಗಿದೆ. ಈ ಪೈಕಿ ರಾಜ್ಯದಲ್ಲಿ 11 ಕಾರಿಡಾರ್​ಗಳಿವೆ. ಕರಡಿಕಲ್-ಮಾದೇಶ್ವರ (ರಾಗಿಹಳ್ಳಿ ಕಾರಿಡಾರ್), ತಾಳಿ-ಬಿಳಿಕ್ಕನ್, ಬಿಳಿಕಲ್-ಜವಳಗಿರಿ, ಎಡಯಹಳ್ಳಿ- ಗುತ್ತಿಯಾಲತ್ತೂರು, ಎಡೆಯಹಳ್ಳಿ-ದೊಡ್ಡಸಮಳ್ಳಿ, ಚಾಮರಾಜನಗರ-ತಲಮಲೈ ಪುಂಜೂರಿನಲ್ಲಿ, ಚಾಮ ರಾಜನಗರ-ತಲಮಲೈ ಕಾರಿಡಾರ್ ಪ್ರಮುಖವಾಗಿವೆ.

ಪ್ರೀತಿ ಹೆಸರಲ್ಲಿ ನಂಬಿಕೆ ದ್ರೋಹ; ರಾಜ್​ ತರುಣ್​-ಲಾವಣ್ಯ ಕೇಸ್​ ಅಂತ್ಯಕ್ಕೆ ಇದೊಂದೇ ಪರಿಹಾರ: ಆರ್​ಜಿವಿ

ವಿನೇಶ್ ಫೋಗಟ್​ ಬೆಳ್ಳಿ ಪದಕಕ್ಕೆ ಅರ್ಹ: ಒಲಿಂಪಿಕ್​ ಕುಸ್ತಿಪಟು ಪರ ಧ್ವನಿ ಎತ್ತಿದ ‘ದಾದ’

Share This Article

ನಿಮ್ಮ ಅಂಗೈನಲ್ಲಿ ಈ ಚಿಹ್ನೆ ಇದೆಯಾ ಚೆಕ್​ ಮಾಡಿ ನೋಡಿ… ಇದ್ರೆ ನೀವು ರಾಜಯೋಗ ಅನುಭವಿಸುತ್ತೀರಿ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…

ನಿಮ್ಮ ಮನೆಯಲ್ಲಿ ಮರಿ ಹಲ್ಲಿ ಇದ್ರೆ ಈ ಒಂದು ತಪ್ಪು ಮಾತ್ರ ಮಾಡ್ಬೇಡಿ: ಮಾಡಿದ್ರೆ ಈ ಗಂಡಾಂತರ ಫಿಕ್ಸ್!

ಸಾಮಾನ್ಯವಾಗಿ ಹಿಂದು ಪುರಾಣದಲ್ಲಿ ಹಲ್ಲಿಗಳನ್ನು ಅದೃಷ್ಟದ ಸಂಕೇತ ಎಂದು ಕರೆಯಲಾಗಿದೆ. ಹಲ್ಲಿಗಳು ಲೊಚಗುಡುವುದು ಶುಭ ಸೂಚನೆ…

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…