ವಿಡಿಯೋ| ಆನೆ ದಾಳಿಗೆ ತಮಿಳುನಾಡು ಫಾರೆಸ್ಟ್ ವಾಚರ್ ಸಾವು

ಆನೆಕಲ್​: ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕಾಡಂಚಿನ ಗ್ರಾಮಗಳಿಗೆ ನುಗ್ಗಿದ್ದ ಆನೆಯನ್ನು ಕಾಡಿನತ್ತ ಓಡಿಸಲು ಮುಂದಾದ ಫಾರೆಸ್ಟ್ ವಾಚರ್​ನನ್ನು ಆನೆ ತುಳಿದು ಸಾಯಿಸಿರುವ ಘಟನೆ ತಮಿಳುನಾಡಿನ ಡೆಂಕನಿಕೋಟೆಯಲ್ಲಿ ನಡೆದಿದೆ.

ಮಾರಪ್ಪನ್(48) ಆನೆ ದಾಳಿಗೆ ಮೃತಪಟ್ಟವ. ನಿನ್ನೆ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಡೆಂಕನಿಕೋಟೆ ಬಳಿಯ ಗ್ರಾಮವೊಂದಕ್ಕೆ ಆನೆಗಳ ಹಿಂಡು ನುಗ್ಗಿದ್ದು ಅವುಗಳನ್ನು ಕಾಡಿನತ್ತ ಓಡಿಸಲು ಮುಂದಾದಾಗ ಕೆರಳಿದ ಆನೆಯೊಂದು ಮಾರಪ್ಪನ್ ಮೇಲೆ ಎರಗಿ ತುಳಿದು ಸಾಯಿಸಿದೆ.

ಇದೇ ಗ್ರಾಮದಲ್ಲಿ ನಿನ್ನೆ ಬೆಳಿಗ್ಗೆ ಯುವಕನೋರ್ವ ಆನೆಯನ್ನು ಕೆರಳಿಸಲು ಕಲ್ಲಿನಿಂದ ಹೊಡೆಯುವುದು ಮತ್ತು ಚೇಷ್ಟೆ ಮಾಡುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿತ್ತು. ಆನೆಯನ್ನು ಕಲ್ಲಿನಿಂದ ಹೊಡೆಯುವ ಯುವಕ ಆನೆ ಆತನ ಹತ್ತಿರ ಬರುತ್ತಿದ್ದಂತೆ ಓಡುವುದು ಮತ್ತೆ ಆನೆ ಹಿಂತಿರುಗುವಾಗ ಕೂಗಿ ಕಲ್ಲಿನಿಂದ ಹೊಡೆದು ಕೆರಳಿಸುವ ಕೆಲಸದಲ್ಲಿ ನಿರತನಾಗಿದ್ದ.

ಯುವಕನ ಚೇಷ್ಟೆಯಿಂದ ಕೆರಳಿದ್ದ ಆನೆ ಫಾರೆಸ್ಟ್ ವಾಚರ್ ಆನೆ ಓಡಿಸಲು ಮುಂದಾದಾಗ ಕೆರಳಿ ಆತನನ್ನು ತುಳಿದು ಸಾಯಿಸಿದೆ ಎನ್ನಲಾಗುತ್ತಿದೆ. (ದಿಗ್ವಿಜಯ ನ್ಯೂಸ್​)

ವಿಡಿಯೋ| ಆನೆ ದಾಳಿಗೆ ತುತ್ತಾಗಿದ್ದ ತಮಿಳುನಾಡು ಫಾರೆಸ್ಟ್ ವಾಚರ್ ಸಾವು

ಆನೆಕಲ್​: ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕಾಡಂಚಿನ ಗ್ರಾಮಗಳಿಗೆ ನುಗ್ಗಿದ್ದ ಆನೆಯನ್ನು ಕಾಡಿನತ್ತ ಓಡಿಸಲು ಮುಂದಾದ ಫಾರೆಸ್ಟ್ ವಾಚರ್​ನನ್ನು ಆನೆ ತುಳಿದು ಸಾಯಿಸಿರುವ ಘಟನೆ ತಮಿಳುನಾಡಿನ ಡೆಂಕನಿಕೋಟೆಯಲ್ಲಿ ನಡೆದಿದೆ. #Elephant #ForestWatcher #Attack #Death #AnimalAttack

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಭಾನುವಾರ, ಜನವರಿ 6, 2019