ಲದ್ದಿ ಆಧಾರದಲ್ಲಿ ಆನೆ ಗಣತಿ

1 Min Read
ಲದ್ದಿ ಆಧಾರದಲ್ಲಿ ಆನೆ ಗಣತಿ
ಅಮ್ಮತ್ತಿಯಲ್ಲಿ ಗುರುವಾರ ಕಂಡು ಬಂದ 12 ಆನೆಗಳ ಹಿಂಡು.

ಸಿದ್ದಾಪುರ: ಕೊಡಗು ಜಿಲ್ಲೆಯಲ್ಲಿ ಆನೆ ಗಣತಿ ಎರಡನೇ ದಿನವೂ ಮುಂದುವರಿಯಿತು.


ವಿರಾಜಪೇಟೆ ವಿಭಾಗದಲ್ಲಿನ ಮುನ್ರೋಟು, ತಿತಿಮತಿ, ಪೊನ್ನಂಪೇಟೆ, ವಿರಾಜಪೇಟೆ ಹಾಗೂ ಮಾಕುಟ್ಟ ವ್ಯಾಪ್ತಿಯಲ್ಲಿ ಗಜ ಗಣತಿ ನಡೆಯಿತು. ಮೊದಲ ದಿನ 15 ಕಿ.ಮೀ.ವ್ಯಾಪ್ತಿಯಲ್ಲಿ ಆನೆಗಳ ಗುಂಪು, ಒಂಟಿ ಆನೆಗಳನ್ನು ನೇರವಾಗಿ ಕಂಡು ಗಣತಿ ನಡೆದಿದ್ದು, ಎರಡನೇ ದಿನವಾದ ಶುಕ್ರವಾರ ಲದ್ದಿ ಮೂಲಕ ಆನೆ ಲೆಕ್ಕಾಚಾರ ಮಾಡಲಾಯಿತು.


ವಿರಾಜಪೇಟೆ ವಿಭಾಗದಲ್ಲಿ ಐದು ವಲಯದ 23 ತಂಡಗಳು 68 ಸಿಬ್ಬಂದಿ ಗಣತಿ ಕಾರ್ಯ ನಡೆಸಿದರು. ಶನಿವಾರ ಅಂತ್ಯವಾಗಲಿದೆ.


ಡಿಸಿಎಫ್ ಜಗನ್ನಾಥ್ ಪ್ರತಿಕ್ರಿಯಿಸಿ, ವಿರಾಜಪೇಟೆ ವಿಭಾಗದಲ್ಲಿ ಮೊದಲ ದಿನ 109 ಆನೆಗಳು ಸಿಬ್ಬಂದಿಯ ಕಣ್ಣಿಗೆ ಬಿದ್ದಿವೆ. ಶುಕ್ರವಾರ ಪ್ರತಿ ಗಸ್ತಿನಲ್ಲಿ ಕಂಡು ಬಂದ ಆನೆಯ ಲದ್ದಿಯ ಆಧಾರದಲ್ಲಿ ಆನೆಗಳ ವಿವರ ದಾಖಲಿಸಲಾಗಿದೆ. ಕೊನೆಯ ದಿನವಾದ ಶನಿವಾರ ಜಲಮೂಲಗಳ ಬಳಿ ನೀರು ಕುಡಿಯಲು ಹಿಂಡು ಹಿಂಡಾಗಿ ಬರುವ ಗಂಡು, ಹೆಣ್ಣು, ಮರಿ ಆನೆಗಳನ್ನು ಲೆಕ್ಕ ಹಾಕಲಾಗುತ್ತದೆ ಎಂದು ವಿಜಯವಾಣಿಗೆ ತಿಳಿಸಿದರು.

See also  ಬಂದೂಕಿನಿಂದ ಪತ್ನಿ, ಆಕೆಯ ಸೋದರ ಸಂಬಂಧಿ ಮೇಲೆ ಗುಂಡು ಹಾರಿಸಿ ಕೆರೆಗೆ ಹಾರಿದ ವ್ಯಕ್ತಿ
Share This Article