More

    ಮಿತಿಮೀರುತ್ತಿದೆ ಕಾಡಾನೆಗಳ ಹಾವಳಿ: ಕನಕಪುರ ತಾಲೂಕಿನ ಹೊರಳಗಲ್ಲು ಸಮೀಪ ಫಸಲು ನಾಶ

    ಕನಕಪುರ: ಕಸಬಾ ಹೋಬಳಿ ಹೊರಳಗಲ್ಲು ಸಮೀಪದ ಬಿ.ಎಸ್.ದೊಡ್ಡಿ ಹಾಗು ಹೊಸದೊಡ್ಡಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಅಪಾರ ಪ್ರಮಾಣದ ಕೃಷಿ ಫಸಲು ನಾಶವಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

    ಬುಧವಾರ ರಾತ್ರಿ 8ರಿಂದ 10ರಷ್ಟಿದ್ದ ಆನೆಗಳ ಹಿಂಡು ರೈತರ ಜಮೀನಿನಲ್ಲಿದ್ದ ಬೆಳೆಗಳನ್ನು ಹಾಳುಮಾಡಿವೆ. ನರಸೇಗೌಡ ಮತ್ತು ಮರಿಗೌಡರಿಗೆ ಸೇರಿದ ರಾಗಿ ಮೆದೆಯನ್ನು ಸಂಪೂರ್ಣ ನಾಶಪಡಿಸಿವೆ. ರಾಜು ಎಂಬುವವರ ಮಾವಿನ ಗಿಡಗಳು, ನಾಗರಾಜು ಮತ್ತು ವೈರಮುಡಿಗೌಡರ ತೊಗರಿ ನಾಶ ಮಾಡಿರುವುದಲ್ಲದೆ ಸನಿಹದಲ್ಲಿಯೇ ಇದ್ದ ಬಾಳೆತೋಟಕ್ಕೂ ಹಾನಿಯುಂಟುಮಾಡಿವೆ. ವಿಷಯ ತಿಳಿದು ಸ್ಥಳ ಪರಿಶೀಲನೆ ನಡೆಸಿರುವ ಸಾತನೂರು ವಲಯ ಉಪ ಅರಣ್ಯಾಧಿಕಾರಿ ರಾಜು ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.

    ಪರಿಹಾರಕ್ಕೆ ಒತ್ತಾಯ: ಸ್ಥಳೀಯ ಗ್ರಾಪಂ ಸದಸ್ಯೆ ಚಂದ್ರಕಲಾ ಶಿವಕುಮಾರ್ ಮಾತನಾಡಿ, ಈ ಭಾಗದ ರೈತರಿಗೆ ಕಾಡಾನೆಗಳ ಹಾವಳಿಯಿಂದ ತೀವ್ರ ನಷ್ಟವಾಗಿದೆ. ಆನೆಗಳ ಹಾವಳಿ ತಡೆಯಲು ಶಾಶ್ವತ ಪರಿಹಾರ ಕಲ್ಪಿಸಬೇಕು ಹಾಗೂ ಆನೆಗಳನ್ನು ಕೂಡಲೇ ಕಾಡಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

     

    ಕಾವೇರಿ ವನ್ಯಜೀವಿ ಅರಣ್ಯ ಪ್ರದೇಶದಿಂದ ಬಂದಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅಗತ್ಯ ಕ್ರಮ ಕೈಗೊಳ್ಳಲಾಗಿತ್ತು. ಆದರೂ ಆನೆಗಳು ಅತ್ತಿಂದಿತ್ತ ಓಡಾಡುತ್ತಿರುವುದರಿಂದ ಅವುಗಳನ್ನು ಸೆರೆ ಹಿಡಿಯುವ ಕಾರ್ಯಕ್ಕೆ ಹಿನ್ನಡೆಯಾಗುತ್ತಿದೆ. ಗ್ರಾಮಸ್ಥರ ಸಹಕಾರದಿಂದ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಶೀಘ್ರದಲ್ಲಿಯೇ ಆನೆಗಳನ್ನು ಕಾಡಿಗೆ ಸೇರಿಸಲಾಗುವುದು.
    ರಾಜು ಉಪ ಅರಣ್ಯಾಧಿಕಾರಿ, ಸಾತನೂರು ವಲಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts