More

    ಸಫಾರಿ ರಸ್ತೆ ದುರಸ್ತಿಗೆ ತೆರಳಿದ್ದ ಕಾರ್ಮಿಕರ ಲಾರಿಯ ಮೇಲೆ ಕಾಡಾನೆ ದಾಳಿ; ಸ್ವಲ್ಪದರಲ್ಲೇ ತಪ್ಪಿದ ಭಾರಿ ಅನಾಹುತ

    ಚಿಕ್ಕಮಗಳೂರು: ಫಾರೆಸ್ಟ್​ ಲಾರಿ ಮೇಲೆ ಆನೆ ದಾಳಿ ಮಾಡಿದ್ದು ಅರಣ್ಯ ಸಿಬ್ಬಂದಿ ಸೇರಿ ಕೂಲಿ ಕಾರ್ಮಿಕರು ಬಹುದೊಡ್ಡ ಅನಾಹುತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ.

    ತರೀಕೆರೆ ತಾಲೂಕಿನ ಲಕ್ಕವಳ್ಳಿ ಭದ್ರಾ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸಫಾರಿ ರಸ್ತೆ ದುರಸ್ತಿ ಮಾಡಲು ಕಾರ್ಮಿಕರನ್ನು ಫಾರೆಸ್ಟ್​ ಲಾರಿಯಲ್ಲಿ ಕರೆದೊಯ್ಯಲಾಗಿತ್ತು. ಈ ವಾಹನದ ಮೇಲೆ ಕಾಡಾನೆ ದಾಳಿ ನಡೆಸಿದೆ. ಲಾರಿಯ ಮುಂಭಾಗ ಸಂಪೂರ್ಣ ಹಾನಿಯಾಗಿದೆ.

    ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts