ಹುಕ್ಕೇರಿ: ಸಹಕಾರಿ ತತ್ತ್ವದಡಿ ಗ್ರಾಹಕರಿಗೆ ವಿದ್ಯುತ್ ಸರಬರಾಜು ಮಾಡುತ್ತಿರುವ ದೇಶದ ಏಕೈಕ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘ ಹುಕ್ಕೇರಿಯಲ್ಲಿದೆ. ಸಂಘ ಉಳಿಸಿ-ಬೆಳೆಸುವಲ್ಲಿ ಗ್ರಾಹಕರ ಮತ್ತು ಸದಸ್ಯರ ಸಹಕಾರ ಅವಶ್ಯ ಎಂದು ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕ ಪೃಥ್ವಿ ಕತ್ತಿ ಹೇಳಿದರು.
ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಹಟ್ಟಿ ಐ.ಪಿ.ಟಿಸಿ ಮೇಲೆ ಹೊಸದಾಗಿ ಅಳವಡಿಸಿದ 63 ಕೆವಿ ಹೆಚ್ಚುವರಿ ವಿದ್ಯುತ್ ಪರಿವರ್ತಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ರೈತರು ಅನಧಿಕೃತವಾಗಿ ವಿದ್ಯುತ್ ಬಳಕೆ ಮಾಡುವುದರಿಂದ ಟಿಸಿ ಹಾಳಾಗಿ ಸಂಘಕ್ಕೆ ಹಾನಿಯಾಗುತ್ತಿದೆ. ಜತೆಗೆ ರೈತರಿಗೂ ಸಮರ್ಪಕ ವಿದ್ಯುತ್ ಸರಬರಾಜು ಮಾಡಲು ಆಗುವುದಿಲ್ಲ. ರೈತರು ಅಧಿಕೃತ ಜೋಡಣೆ ಮಾಡಿಕೊಂಡಲ್ಲಿ ಬೇಡಿಕೆ ಆಧರಿಸಿ ಹೊಸ ಟಿಸಿ ಅಳವಡಿಸಲಾಗುವುದು. ರೈತರು ಮತ್ತು ಗ್ರಾಹಕರು ಸಹಕರಿಸಬೇಕು.ಹಲವಾರು ವರ್ಷಗಳಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಗ್ರಾಹಕರು ಬೇಗ ಸಂದಾಯ ಮಾಡಬೇಕೆಂದು ವಿನಂತಿಸಿದರು.
ಸಂಘದ ಸ್ಥಾನಿಕ ಅಭಿಯಂತ ನೇಮಿನಾಥ ಖೇಮಲಾಪುರೆ, ಶಾಖಾಧಿಕಾರಿ ಬಿ.ಎಂ.ಮಗದುಮ್ಮ, ಅಪ್ಪಯ್ಯ ಕಿಚಡಿ, ಮೌನೇಶ ಬಡಿಗೇರ, ರಾಮಪ್ಪ ಕಿಚಡಿ, ಭರತೇಶ ಬಡಿಗೇರ, ಆಕಾಶ ಬಡಿಗೇರ, ರಾಮಪ್ಪ ಬಡಿಗೇರ ಇತರರು ಇದ್ದರು.