ವಿದ್ಯುತ್ ದರ 1-1.45 ರೂ. ತುಟ್ಟಿ?

ಬೆಂಗಳೂರು: 2019-20ನೇ ಸಾಲಿನಲ್ಲಿ ವಿದ್ಯುತ್ ದರ ಹೆಚ್ಚಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್​ಸಿ) ವಿದ್ಯುತ್ ಪೂರೈಕೆ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್​ಗೆ 1 ರೂ. ಹೆಚ್ಚಳ ಮಾಡುವಂತೆ ಬೆಸ್ಕಾಂ, 1.65 ರೂ. ಏರಿಸುವಂತೆ ಜೆಸ್ಕಾಂ ಪ್ರಸ್ತಾವನೆ ಸಲ್ಲಿಸಿವೆ. ಉಳಿದಂತೆ ಚೆಸ್ಕಾಂ, ಮೆಸ್ಕಾಂ ಹಾಗೂ ಹೆಸ್ಕಾಂಗಳು ಯೂನಿಟ್​ಗೆ 1.30 ರೂ.ನಿಂದ 1.45 ರೂ. ಹೆಚ್ಚಿಸಲು ಮನವಿ ಮಾಡಿವೆ. ಈಗ ನಿಗದಿಪಡಿಸಿರುವ ದರದಿಂದ ವಿದ್ಯುತ್ ಖರೀದಿ, ಪೂರೈಕೆ ವೆಚ್ಚ ಸರಿದೂಗಿಸಲು ಆಗುತ್ತಿಲ್ಲ. ಹೀಗಾಗಿ ಬೆಲೆ ಏರಿಕೆ ಆಗಲೇಬೇಕೆಂದು ಸಂಸ್ಥೆಗಳು ಮನವಿ ಮಾಡಿವೆ.