ಜಾಗತಿಕ ಮಾಧ್ಯಮದಲ್ಲೂ ಮೋದಿ ಮೋಡಿ: ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಹೊಗಳಿದ ಅಮೆರಿಕ, ಬ್ರಿಟನ್ ಮಾಧ್ಯಮಗಳು

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿರುವುದು ವಿದೇಶಿ ಮಾಧ್ಯಮಗಳ ಗಮನವನ್ನೂ ಸೆಳೆದಿದೆ.

ಅಮೆರಿಕದ ಪ್ರಮುಖ ಸುದ್ದಿ ಸಂಸ್ಥೆ ಸಿಎನ್​ಎನ್ ಈ ಬಗ್ಗೆ ವರದಿ ಪ್ರಕಟಿಸಿ, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನಿರೀಕ್ಷೆಗೂ ಮೀರಿ ಜಯ ಸಾಧಿಸಿದೆ ಎಂದಿದೆ. ರಾಷ್ಟ್ರೀಯ ಭದ್ರತೆ ವಿಚಾರ ಬಿಜೆಪಿಯ ಜಯಭೇರಿಗೆ ಕಾರಣ ಎಂದು ನ್ಯೂಯಾರ್ಕ್ ಟೈಮ್್ಸ ಬಣ್ಣಿಸಿದೆ. ಜನರು ಭಾರತದ ಅರ್ಥ ವ್ಯವಸ್ಥೆಯಿಂದ ಅಸಂತುಷ್ಟರಾಗಿದ್ದು, ಬಿಜೆಪಿ ಸೋಲಲಿದೆ ಎಂದು ಮೊದಲು ವಿಶ್ಲೇಷಿಸಲಾಗುತ್ತಿತ್ತು. ಆದರೆ ಭಾರತ- ಪಾಕ್ ನಡುವೆ ಹುಟ್ಟಿಕೊಂಡ ವೈಮನಸ್ಸು, ಇದಕ್ಕೆ ಸರ್ಕಾರ ಕೈಗೊಂಡ ದಿಟ್ಟ ಕ್ರಮದಿಂದ ಮತದಾರರು ಪ್ರಭಾವಿತರಾದರು. ಇದು ಫಲಿತಾಂಶದ ಮೇಲೆ ಪರಿಣಾಮ ಬೀರಿತು ಎಂದು ವರದಿ ಮಾಡಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಬಲವರ್ಧನೆಯಿಂದ ಹೆಚ್ಚಿನ ಸೀಟುಗಳನ್ನು ಗೆಲ್ಲಲು ಸಾಧ್ಯವಾಯಿತು. ಒಂದು ಕಡೆ ಕಾಂಗ್ರೆಸ್ ಬಗ್ಗೆ ಜನರಿಗೆ ಒಲವು ಇಲ್ಲದಿರುವುದು, ಉಳಿದ ಪ್ರಾದೇಶಿಕ ಪಕ್ಷಗಳು ಮೋದಿಗೆ ಸಮನಾದ ಸ್ಪರ್ಧೆಯೊಡ್ಡದಿರುವುದು ಗೆಲುವಿಗೆ ಪ್ರಮುಖ ಕಾರಣ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ. ಅಲ್ಲದೆ ಉತ್ತರಪ್ರದೇಶದಲ್ಲಿ ಬಿಜೆಪಿ ಎಸ್ಪಿ-ಬಿಎಸ್ಪಿಯನ್ನು ಎದುರಿಸಿದ ರೀತಿ ಪಕ್ಷದ ಬಲವರ್ಧನೆಗೆ ಸಹಾಯ ಮಾಡಿತು. ಹೀಗಾಗಿ ಬಹುಮತವನ್ನು ಸಾಧಿಸಿತು ಎಂದು ವರದಿ ಮಾಡಲಾಗಿದೆ. ‘ಇದು ಮೋದಿ ವಿಜಯ’ ಎಂದು ದಿ ಗಾರ್ಡಿಯನ್ ಬಣ್ಣಿಸಿದೆ. ಕಳೆದ ಐದು ವರ್ಷಗಳಲ್ಲಿ ಮೋದಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಗೆಲುವಿಗೆ ಕಾರಣವಾಯಿತು. ರಾಷ್ಟ್ರವಾದವನ್ನು ಜನರಿಗೆ ತಲುಪಿಸಿದ ರೀತಿಯೂ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ವರದಿ ಮಾಡಿದೆ.

ಸಮಸ್ಯೆಗಳನ್ನೇ ಬಿಂಬಿಸಿದ ಪಾಕ್ ಮಾಧ್ಯಮ: ಪಾಕಿಸ್ತಾನದ ಡಾನ್ ಪತ್ರಿಕೆ ‘ಇಂಡಿಯಾ ವಿನ್ಸ್ ಅಗೇನ್’ ಎನ್ನುವ ತಲೆಬರಹ ನೀಡಿ ವರದಿ ಪ್ರಕಟಿಸಿದೆ. ಭಾರತದಲ್ಲಿ ಯಾರೇ ಗೆದ್ದರೂ ಹಲವು ಸವಾಲುಗಳು ಅವರ ಮುಂದಿವೆ. ಕುಸಿಯುತ್ತಿರುವ ಜಿಡಿಪಿ, ಕೃಷಿ ಸಮಸ್ಯೆ, ಬಡತನ, ಕುಡಿಯುವ ನೀರು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು, ಶಿಕ್ಷಣಕ್ಕೆ ಕ್ಷೇತ್ರದ ಸಮಸ್ಯೆಗಳು ಇವೆಲ್ಲವೂ ಚುನಾವಣೆ ಫಲಿತಾಂಶದಿಂದ ಬದಲಾಗುವುದಿಲ್ಲ ಎಂದು ವರ್ಣಿಸಲಾಗಿದೆ.

ಚೀನಾ ಮಾಧ್ಯಮದಲ್ಲೂ ಮೋದಿ ಅಲೆ: ಚೀನಾ ಡೈಲಿಯಲ್ಲಿ ಲೋಕಸಭಾ ಚುನಾವಣೆ ಫಲಿತಾಂಶದ ಬಗ್ಗೆ ವಿಸõತ ವರದಿ ಪ್ರಕಟಿಸಲಾಗಿದ್ದು, ಚುನಾವಣೆಯನ್ನು ಮೋದಿ ಮತ್ತು ನೆಹರು-ಗಾಂಧಿ ಕುಟುಂಬದ ನಡುವಿನ ಹಣಾಹಣಿ ಎಂದೇ ಬಣ್ಣಿಸಿದೆ.

Leave a Reply

Your email address will not be published. Required fields are marked *