ವಹಿವಾಟು ಹೆಚ್ಚಿಸಿದ ಚುನಾವಣಾ ಕಾವು

blank

* ಹೋಟೆಲ್​ಗಳಲ್ಲಿ ಜನ ಸಂದಣಿ
* ವ್ಯಾಪಾರಿಗಳಿಗೆ ಹಬ್ಬದ ಅನುಭವ
ಗಂಗಾಧರ್​ ಬೈರಾಪಟ್ಟಣ ರಾಮನಗರ
ವಿಧಾನಸಭೆ ಉಪಚುನಾವಣೆ ದಿನದಿಂದ ದಿನಕ್ಕೆ ರಂಗು ಪಡೆದುಕೊಳ್ಳುತ್ತಿದೆ. ಎಲ್ಲೆಲ್ಲೂ ರಾಜಕೀಯ ಪಕ್ಷಗಳ ಅಬ್ಬರ ಪ್ರಚಾರದ ಭರಾಟೆ ಹೆಚ್ಚಿದ್ದು, ಕಾರ್ಯಕರ್ತರು ಹಬ್ಬದ ಮೂಡ್​ನಲ್ಲಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಕೇವಲ ಕ್ಷೇತ್ರದ ಕಾರ್ಯಕರ್ತರಿಗೆ ಮಾತ್ರ ಸೀಮಿತವಾಗದೆ. ಹೊರ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿರುವುದು ಇಲ್ಲಿನ ವ್ಯಾಪಾರ, ವಹಿವಾಟಿನ ಮೇಲೂ ಸಕಾರಾತ್ಮಕ ಪರಿಣಾಮ ಬೀರಿದೆ.
ಡಾಬಾಗಳಿಗೆ ಸುಗ್ಗಿ.

ಬೆಂಗಳೂರು& ಮೈಸೂರು ಹೆದ್ದಾರಿಯಲ್ಲಿ ಹೋಟೆಲ್​ಗಳು ಡಾಬಾಗಳು ಸಾಕಷ್ಟು ಇವೆ. ಇವುಗಳಿಗೆ ರಜಾದಿನಗಳು ಬಂದರೆ ಮಾತ್ರ ಹೆಚ್ಚಿನ ವ್ಯಾಪಾರ. ಆದರೆ, ವಿಧಾನಸಭೆ ಉಪಚುನಾವಣೆ ಆರಂಭಗೊಂಡ ದಿನದಿಂದಲೂ ಡಾಬಾಗಳ ಗ್ರಾಹಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡಿದೆ. ರಾತ್ರಿ ಆಗುತ್ತಿದ್ದಂತೆ ಕಾರ್ಯಕರ್ತರು ದಂಡು, ಅದರಲ್ಲೂ ಹೊರ ಜಿಲ್ಲೆಗಳಿಂದ ಆಗಮಿಸಿದ ಪಕ್ಷಗಳ ಕಾರ್ಯಕರ್ತರು ಡಾಬಾಗಳಿಗೆ ಲಗ್ಗೆ ಇಡುತ್ತಿದ್ದು, ಇಲ್ಲಿನ ವ್ಯಾಪಾರವೂ ದ್ವಿಗುಣಗೊಂಡಿದೆ.

ಲಾಡ್ಜ್​ಗಳಲ್ಲೂ ರೂಂ ಇಲ್ಲ

ರಾಮನಗರ & ಚನ್ನಪಟ್ಟಣದ ಬಹುತೇಕ ಲಾಡ್ಜ್​ಗಳು ಈಗ ಬಹುತೇಕ ಹೌಸ್​ ಫುಲ್​. ಕ್ಷೇತ್ರದಲ್ಲಿ ಪಂಚಾಯಿತಿ ಹಂತದಲ್ಲಿಯೇ ರಾಜ್ಯಮಟ್ಟದ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಇಂತಹ ನಾಯಕರ ಜತೆಗೆ ಬರುವ ಅವರ ಹಿಂಬಾಲಕರಿಗೆ ರಾಮನಗರ ಮತ್ತು ಚನ್ನಪಟ್ಟಣದಲ್ಲಿಯೇ ವಾತ್ಸವ್ಯ ಹೂಡುತ್ತಿರುವ ಕಾರಣ, ಲಾಡ್ಜ್​ಗಳಲ್ಲಿ ಕೊಠಡಿಗಳು ಇಲ್ಲದಂತೆ ಆಗಿದೆ. ಕೆಲವು ದಿನಗಳು ಈ ಎರಡೂ ರೂಂಗಳಲ್ಲಿ ಕೊಠಡಿಗಳು ಇಲ್ಲದ ಕಾರಣ ಹಲವು ಕಾರ್ಯಕರ್ತರು ಮದ್ದೂರು ಸೇರಿ ಇತರೆ ಕಡೆಗಳಲ್ಲಿಯೂ ರೂಂಗಳನ್ನು ಬಾಡಿಗೆಗೆ ಪಡೆದುಕೊಳ್ಳುತ್ತಿದ್ದಾರೆ.

ಪೊಲೀಸರ ಕಣ್ಗಾವಲು

ಇದರ ನಡುವೆ ಜಿಲ್ಲೆಯ ಪೊಲೀಸರು ಡಾಬಾಗಳು ಮತ್ತು ಇತರೆ ಕಡೆಗಳಲ್ಲಿ ನಡೆಯುತ್ತಿರುವ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಡಾಬಾಗಳಲ್ಲಿ ಮದ್ಯ ಸೇವನೆಗೆ ಅವಕಾಶ ಇಲ್ಲ. ಆದರೂ ಇದು ನಿರಂತರವಾಗಿ ನಡೆಯುತ್ತಿದೆ. ಪೊಲೀಸರು ಬರುವ ಮುನ್ಸೂಚನೆ ಪಡೆದುಕೊಳ್ಳುತ್ತಿರುವ ಡಾಬಾಗಳ ಮಾಲೀಕರು ಅವರು ಬಂದಾಗ ಮದ್ಯ ಸೇವೆನೆಯಂತಹ ಚಟುವಟಿಕೆಗಳು ನಡೆಯುತ್ತಿಲ್ಲ ಎನ್ನುವಂತೆ ಬಿಂಬಿಸುತ್ತಾರೆ ಎನ್ನುತ್ತವೆ ಪೊಲೀಸ್​ ಮೂಲಗಳು.

ಮದ್ಯ ಮಾರಾಟಕ್ಕೆ ಬ್ರೇಕ್​

ಕಳೆದ ವರ್ಷ ಇದೇ ತಿಂಗಳಲ್ಲಿ ಮದ್ಯ ಮಾರಾಟದ ಪ್ರಮಾಣವನ್ನು ಪರಿಗಣಿಸಿ, ಈ ಬಾರಿ ಚನ್ನಪಟ್ಟಣದ ಬಾರ್​ಗಳಿಗೆ ಮದ್ಯ ಪೂರೈಕೆ ಮಾಡಲಾಗುತ್ತಿದೆ. ಬಾರ್​ಗಳಲ್ಲಿಯೂ ವ್ಯಾಪಾರ ಜೋರಾಗಿದೆ. ಆದರೆ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲು ಅವಕಾಶ ಇಲ್ಲದ ಹಿನ್ನೆಲೆಯಲ್ಲಿ ಪಕ್ಕದ ತಾಲೂಕುಗಳಲ್ಲಿಯೂ ಮದ್ಯ ಮಾರಾಟ ತೇಜಿಯಾಗಿದೆ. ನೆರೆಯ ರಾಮನಗರ, ಮಂಡ್ಯ ಜಿಲ್ಲೆಯ ಮದ್ದೂರು, ಪಕ್ಕದ ಹಲಗೂರು, ಸಾತನೂರು ಕೇಂದ್ರಗಳಿಂದಲೂ ಮದ್ಯ ಸದ್ದಿಲ್ಲದೆ ಚನ್ನಪಟ್ಟಣ ಸೇರುತ್ತಿದೆ.

ಪ್ರಚಾರ ಜನರಿಗೆ ಹಬ್ಬ

ಚುನಾವಣಾ ಪ್ರಚಾರದ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸೇರಿಸುವುದು ಮತದಾನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಲೆಕ್ಕಾಚಾರ ಹಿಂದಿನಿಂದಲೂ ನಡೆದುಕೊಂಡಿದೆ. ಆದರೆ, ಕೆಲವು ಕಡೆಗಳಲ್ಲಿ ಜೆಡಿಎಸ್​ನವರು ಪ್ರಚಾರ ಮಾಡಿ ತೆರಳಿದ ತಕ್ಷಣವೇ ಕಾಂಗ್ರೆಸಿಗರೂ ಪ್ರಚಾರಕ್ಕೆ ಬರುತ್ತಿದ್ದು, ಅಭ್ಯರ್ಥಿ ಮತ್ತು ನಾಯಕರ ಭಾಷಣ ಕೇಳುವ ಪ್ರೇಕ್ಷಕರು ಮಾತ್ರ ಅವರೇ ಆಗುತ್ತಿದ್ದಾರೆ.
ಕ್ಷೇತ್ರದಲ್ಲಿ ಬಹುತೇಕ ಗ್ರಾಮೀಣ ಭಾಗದಲ್ಲಿ ಪ್ರಚಾರ ಕಾರ್ಯ ಅಂತಿಮ ಹಂತಕ್ಕೆ ಬಂದಿದ್ದು, ಇನ್ನು ಬಹಿರಂಗ ಸಮಾವೇಶಗಳ ಮೂಲಕ ಮತದಾರರ ಮನಗೆಲ್ಲಲ್ಲು ರಾಜಕೀಯ ಪಕ್ಷಗಳು ಕಸರತ್ತು ಆರಂಭಿಸಲಿವೆ. ಈ ಕಾರ್ಯಕ್ರಮಗಳು ಸಹ ಜನರಿಗೆ ಹಬ್ಬದಂತೆ ಆಗಲಿದೆ.

ಸಾಮಾನ್ಯವಾಗಿ ಚುನಾವಣೆ ಸಂದರ್ಭದಲ್ಲಿ ನಮ್ಮಲ್ಲಿ ಬಿಜಿನೆಸ್​ ಹೆಚ್ಚಳವಾಗುತ್ತದೆ. ಈ ಬಾರಿಯೂ ಹೆಚ್ಚಳ ಕಂಡಿದೆ. >
ಹೆಸರು ಹೇಳಲಿಚ್ಛಿಸದ ಡಾಬಾ ಮಾಲೀಕ

Share This Article

ಈ ಕಾಯಿಲೆಯಿಂದ ಬಳಲುತ್ತಿರುವವರು ಸಿಹಿ ಗೆಣಸಿನಿಂದ ದೂರವಿರಿ; ಇಲ್ಲಿದೆ ಹೆಲ್ತಿ ಮಾಹಿತಿ | Health Tips

ಸಿಹಿ ಗೆಣಸು ಯಾರಿಗೆ ಇಷ್ಟವಿರುವುದಿಲ್ಲ ಹೇಳಿ. ರುಚಿಕರವಾದ ಸಿಹಿಗೆಣಸನ್ನು ಶೀತ ಋತುವಿನಲ್ಲಿ ಕಂಡುಬರುವ ಬೇರು ತರಕಾರಿ…

ಗಿಡಗಳನ್ನು ಹಸಿರಾಗಿಡಲು ಕಡಲೆಕಾಯಿ ಸಿಪ್ಪೆ ಪ್ರಯೋಜನಕಾರಿ; ಇಲ್ಲಿದೆ ಬಳಸುವ ವಿಧಾನ | Tips

ಚಳಿಗಾಲದಲ್ಲಿ ಸಸ್ಯಗಳಿಗೆ ಹೆಚ್ಚಿನ ಕಾಳಜಿ ಬೇಕು. ಏಕೆಂದರೆ ತಂಪಾದ ಗಾಳಿ ಮತ್ತು ಇಬ್ಬನಿಯಿಂದ ತೇವಾಂಶವು ಹೆಚ್ಚಾಗುವುದರಿಂದ…

Kurukshetra | ಕುರುಕ್ಷೇತ್ರ ಯುದ್ಧದ ಕೊನೆಯಲ್ಲಿ ರಣಭೂಮಿಗೆ ದ್ರೌಪದಿಯನ್ನು ಶ್ರೀಕೃಷ್ಣ ಕರೆತಂದಿದ್ದೇಕೆ; ಪರಮಾತ್ಮ ಹೇಳಿದ್ದೇನು?

ಕುರುಕ್ಷೇತ್ರ(Kurukshetra) ಯುದ್ಧದಲ್ಲಿ ಎಲ್ಲಾರೂ ಮರಣ ಹೊಂದಲು ಕಾರಣ ಪಾಂಡವರಲ್ಲ ದ್ರೌಪದಿಯ ಕಣ್ಣೀರು. ಕುರುಕ್ಷೇತ್ರ ಯುದ್ಧ ಮುಗಿದ…