ಚನ್ನಗಿರಿ: ತಾಲೂಕಿನ ತೋಟ ಉತ್ಪನ್ನಗಳ ಮಾರಾಟ ಸಂಸ್ಥೆ ತುಮ್ಕೋಸ್ನ 15 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ಪೊಲೀಸ್ ಬಿಗಿಬಂದೋಬಸ್ತ್ನಲ್ಲಿ ನಡೆದಿದ್ದು ಶೇ.89 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಎಸ್. ಮಂಜುಳಾ ತಿಳಿಸಿದರು.
ಒಟ್ಟು 13,562 ಮತದಾರರಿದ್ದು, ಪ್ರಾರಂಭದಲ್ಲಿ 9,420 ಮತದಾರರಿಗೆ ಮಾತ್ರ ಮತದಾನದ ಹಕ್ಕು ನೀಡಲಾಯಿತು. ಉಳಿದ 4,142 ಮತದಾರರ ಹೆಸರಿನಲ್ಲಿ ತಾಂತ್ರಿಕ ಸಮಸ್ಯೆ ಇರುವ ಕಾರಣ ಮತದಾನವನ್ನು ತಡೆಹಿಡಿದಿದ್ದರು. ಆದರೆ ಈ ವಿಷಯ ಪ್ರಶ್ನಿಸಿ ಎಚ್.ಎಸ್. ಶಿವಕುಮಾರ್ ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕೋರ್ಟಿನ ಆದೇಶದಂತೆ 5940 ಮತದಾರರಿಗೆ ಪ್ರತ್ಯೇಕ ಮತಗಟ್ಟೆಯನ್ನು ಮಾಡಿದ್ದರು. ಒಟ್ಟು 12,111 ಮತದಾರರು ಮತ ಚಲಾಯಿಸಿದರು.
ತರಳಬಾಳು ಜಗದ್ಗುರು ಆಂಗ್ಲ ಮಾಧ್ಯಮ ಶಾಲೆ ಮತ್ತು ತರಳಬಾಳು ಸೆಂಟ್ರಲ್ ಸ್ಕೂಲ್, ಭದ್ರಾವತಿ ರಸ್ತೆ ಅಜ್ಜಿಹಳ್ಳಿಯ ಅನುಭವ ಮಂಟಪದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರಗೆ ಮತದಾನ ನಡೆಯಿತು. ಎರಡು ತಂಡದ ನಾಯಕರಾದ ಎಚ್.ಎಸ್. ಶಿವಕುಮಾರ್ ಹಾಗೂ ಆರ್.ಎಂ.ರವಿ ದಂಪತಿ ಸಮೇತರಾಗಿ ಮತಗಟ್ಟೆಗೆ ಪೂಜೆ ನೆರವೇರಿಸಿದರು.
ಒಟ್ಟು 54 ರಲ್ಲಿ 2 ಮತಗಟ್ಟೆಗಳನ್ನು ಅಂಗವಿಕಲರಿಗೆ ಮೀಸಲಿಡಲಾಗಿತ್ತು. ವಯೋವೃದ್ಧರು ಹಾಗೂ ಅಂಗವಿಕಲರಿಗೆ ಪ್ರತ್ಯೇಕ ದಾರಿಯ ವ್ಯವಸ್ಥೆ ಮಾಡಲಾಗಿತ್ತು.
ಚುನಾವಣೆ ಮುಗಿದ ನಂತರ ಮತ ಎಣಿಕೆ ಮಾಡಲಾಯಿತು. ಆದರೆ ಕೋರ್ಟ್ನ ಮುಂದಿನ ಆದೇಶ ಬರುವರೆಗೆ ಫಲಿತಾಂಶ ಪ್ರಕಟಿಸುವುದಿಲ್ಲ ಎಂದು ಚುನಾವಣಾಧಿಕಾರಿ ತಿಳಿಸಿದರು.
ಸಿಹೆಚ್ಎನ್ಫೆಬ್ರವರಿ 10. ತುಮ್ೋಸ್ ಚುನಾವಣೆ 4,5,6,7
ಚನ್ನಗಿರಿಯ ಅಡಕೆ ಮಾರಾಟ ಸಂಸ್ಥೆ ತುಮ್ೋಸ್ನ 15 ನಿದೇಶಕ ಸ್ಥಾನಗಳಿಗೆ ಭಾನುವಾರ ಚುನಾವಣೆ ಪೊಲೀಸ್ ಬಿಗಿಬಂದೋಬಸ್ತ್ನಲ್ಲಿ, ಶಾಂತಯುತವಾಗಿ ನಡೆಯಿತು.