ಅಮೃತ್​ಸರದ ಮತಗಟ್ಟೆಯೊಂದರಲ್ಲಿ ನಾಳೆ ಮರು ಮತದಾನ ನಡೆಸಲು ಚುನಾವಣಾ ಆಯೋಗದ ಆದೇಶ

ಚಂಡೀಗಢ: ಪಂಜಾಬ್​ನ ಅಮೃತ್​ಸರ ಲೋಕಸಭಾ ಕ್ಷೇತ್ರದ ಮತಕೇಂದ್ರ 123ರಲ್ಲಿ ಮರು ಮತದಾನ ನಡೆಸಲು ಚುನಾವಣಾ ಆಯೋಗ ಆದೇಶ ನೀಡಿದೆ.

ಚುನಾವಣೆ ಪ್ರಕ್ರಿಯೆ ವೇಳೆ ಈ ಮತಗಟ್ಟೆಯಲ್ಲಿ ಅಜಾಗರೂಕತೆ ತೋರಲಾಗಿದ್ದರಿಂದ ಮೇ 22ರಂದು ಮರು ಮತದಾನ ನಡೆಸಲಾಗುವುದು. ಈ ಬಗ್ಗೆ ಸಂಬಂಧಪಟ್ಟ ರಿಟರ್ನಿಂಗ್​ ಆಫೀಸರ್​, ವೀಕ್ಷಕರಿಗೆ ಸೂಚನೆ ನೀಡಲಾಗಿದೆ. ಈ ಕ್ಷೇತ್ರದ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳಿಗೂ ಮರುಮತದಾನದ ಮಾಹಿತಿ ನೀಡಲಾಗಿದೆ ಎಂದು ಪಂಜಾಬ್​ ಮುಖ್ಯಚುನಾವಣಾಧಿಕಾರಿ ಡಾ. ಎಸ್​.ಕರುಣಾ ರಾಜು ತಿಳಿಸಿದ್ದಾರೆ.

ಮರುಮತದಾನಕ್ಕೆ ಎಲ್ಲ ರೀತಿಯ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗುತ್ತಿದ್ದು, ಇವಿಎಂ, ಮತಗಟ್ಟೆ ಸಿಬ್ಬಂದಿ, ಭದ್ರತೆ ಕಡೆಗೆ ಹೆಚ್ಚಿನ ಗಮಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಲೋಕಸಭಾ ಚುನಾವಣೆಯ ಕೊನೇ ಹಂತದಲ್ಲಿ ಅಮೃತ್​ಸರದಲ್ಲಿ ಮತದಾನ ನಡೆದಿತ್ತು.