ಬಾಬ್ರಿ ಮಸೀದಿ ಧ್ವಂಸ ಮಾಡಿದ್ದರ ಬಗ್ಗೆ ಅಪಾರ ಹೆಮ್ಮೆಯಿದೆ ಎಂದ ಸಾಧ್ವಿ ಪ್ರಜ್ಞಾಗೆ ಮತ್ತೊಂದು ನೋಟಿಸ್​ ನೀಡಿದ ಚುನಾವಣಾ ಆಯೋಗ

ನವದೆಹಲಿ: ಉಗ್ರರ ದಾಳಿಯಲ್ಲಿ ಹುತಾತ್ಮರಾಗಿದ್ದ ಅಧಿಕಾರಿ ಹೇಮಂತ್​ ಕರ್ಕರೆ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಚುನಾವಣಾ ಆಯೋಗದಿಂದ ಈಗಾಗಲೇ ಒಂದು ನೋಟಿಸ್​ ಪಡೆದಿರುವ ಬಿಜೆಪಿ ಭೋಪಾಲ್​ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್​ಗೆ ಚುನಾವಣಾ ಆಯೋಗ ಈಗ ಮತ್ತೊಂದು ನೋಟಿಸ್​ ನೀಡಿದೆ.

ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಸಾಧ್ವಿ ಪ್ರಜ್ಞಾ ಸಿಂಗ್, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸಕ್ಕೆ ಸಂಬಂಧಪಟ್ಟಂತೆ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಬಾಬ್ರಿ ಮಸೀದಿ ನಾಶಗೊಳಿಸಿದ್ದಕ್ಕೆ ನಾವೇಕೆ ಬೇಸರಪಡಬೇಕು? ಅದರಲ್ಲಿ ತಪ್ಪು ಏನಿದೆ? ಹೆಮ್ಮೆ ಪಡುವ ವಿಚಾರ ಅದು. ದೇಶಕ್ಕೆ ಅಂಟಿದ್ದ ದೋಷವನ್ನು ನಾವು ಅಲ್ಲಿಂದ ತೊಳೆದಿದ್ದೇವೆ ಅಷ್ಟೇ. ಇದು ನಮ್ಮ ದೇಶದ ಸ್ವಾಭಿಮಾನ ತೋರಿಸುತ್ತದೆ. ಅಲ್ಲಿ ವೈಭವದ ರಾಮ ದೇವಾಲಯವನ್ನು ಕಟ್ಟುತ್ತೇವೆ ಎಂದು ಹೇಳಿದ್ದಾರೆ. ಅವರ ಈ ಹೇಳಿಕೆಯಿಂದ ಮತ್ತೆ ಚುನಾವಣಾ ಆಯೋಗ ಸೇರಿ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಬಾಬ್ರಿ ಮಸೀದಿ ಧ್ವಂಸದಲ್ಲಿ ನನಗೂ ಒಂದು ಅವಕಾಶ ಸಿಕ್ಕಿತ್ತು ಎಂದು ಹೇಳಿಕೊಳ್ಳಲು ತುಂಬ ಹೆಮ್ಮೆಯೆನಿಸುತ್ತದೆ. ಅದೇ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಿಯೇ ತೀರುತ್ತೇವೆ ಎಂದು ಹೇಳಿದ್ದರು.

One Reply to “ಬಾಬ್ರಿ ಮಸೀದಿ ಧ್ವಂಸ ಮಾಡಿದ್ದರ ಬಗ್ಗೆ ಅಪಾರ ಹೆಮ್ಮೆಯಿದೆ ಎಂದ ಸಾಧ್ವಿ ಪ್ರಜ್ಞಾಗೆ ಮತ್ತೊಂದು ನೋಟಿಸ್​ ನೀಡಿದ ಚುನಾವಣಾ ಆಯೋಗ”

  1. ಹುಟ್ಟಿದ್ದು ಏಪ್ರಿಲ್ ೨ ೧೯೮೮, ೪ ವರ್ಷದವಳಿದ್ದಾಗಲೇ ಬಾಬ್ರಿ ಮಸೀದಿ ದ್ವಂಸ ಮಾಡಲು ಹೋಗಿದ್ದೆ ಅಂದ್ರೆ ಗ್ರೇಟ್ ತಾಯಿ. ಆದ್ರೂ ನಾವ್ ನಂಬಬೇಕು 😉

Comments are closed.