ಚುನಾವಣೆ ಕರ್ತವ್ಯಕ್ಕೆಂದು ಉತ್ತರ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಮೈಸೂರಿನ ಮುಖ್ಯಪೇದೆ ಸಾವು

ಮೈಸೂರು: ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಸಿಐಎಸ್‌ಎಫ್‌ ಮುಖ್ಯಪೇದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)ನ ಮುಖ್ಯ ಪೇದೆ ಆರ್.ಕೆ.ಪ್ರಕಾಶ್ (48)ಮೃತರು. ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದಾಗ ಘಟನೆ ನಡೆದಿದ್ದು, ಹೃದಯಾಘಾತದಿಂದಾಗಿ ಕೊನೆಯುಸಿರೆಳೆದಿದ್ದಾರೆ.

ಮೈಸೂರಿನ ಆರ್‌ಬಿಐನಲ್ಲಿ ಸಿಐಎಸ್‌ಎಫ್ ಮುಖ್ಯಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರಕಾಶ್‌ರನ್ನು ಚುನಾವಣೆ ಭದ್ರತೆಗಾಗಿ ಉತ್ತರಪ್ರದೇಶ ರಾಜ್ಯಕ್ಕೆ ನಿಯೋಜನೆ ಮಾಡಲಾಗಿತ್ತು.

ಮೂಲತಃ ಮೈಸೂರು ಜಿಲ್ಲೆಯ ಹುಣಸೂರಿನವರಾದ ಪ್ರಕಾಶ್ ಅವರಿಗೆ ಇಬ್ಬರು ಮಕ್ಕಳು ಹಾಗೂ ಪತ್ನಿ ಇದ್ದಾರೆ.

ಇಂದು ಸಂಜೆ ಪ್ರಕಾಶ್ ಮೃತದೇಹ ಮೈಸೂರಿಗೆ ಆಗಮಿಸಲಿದ್ದು, ನಾಳೆ ಅಂತ್ಯಕ್ರಿಯೆ ನೆರವೇರಲಿದೆ. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *