ಸಿಂಧನೂರು: ಅರಳಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರು ದಿನಗಳ ಓದು, ಹಳ್ಳಿ ಸೊಗಡಿನ ಮೆರುಗು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮುಖ್ಯಶಿಕ್ಷಕ ಟಿ.ಲಿಂಗರಾಜ ಮಾತನಾಡಿ, ನಮ್ಮ ಹಿರಿಯರು ತೋರಿಸಿದ ದಾರಿಯನ್ನು ಮರೆಯಬಾರದು. ಹಿರಿಯರ ಅನುಭವ ದೊಡ್ಡದಾಗಿದೆ. ಈ ಹಿಂದೆ ತಾಯಂದಿರು ಬೀಸೋ ಕಲ್ಲು ಬಳಸಿ ಕಡ್ಲೆ, ತೊಗರಿ, ಬೀಸುತ್ತಿದ್ದರು. ಈಗ ತಂತ್ರಜ್ಞಾನ ಮುಂದುವರಿದಂತೆ ಯಂತ್ರಗಳು ಬಂದು ಶ್ರಮ ಕಡಿಮೆಯಾಗಿದೆ. ಹಳ್ಳಿ ಜೀವನ ಶೈಲಿಯನ್ನು ಹಾಗೂ ಹಿರಿಯರು ಅನುಸರಿಸುತ್ತಿದ್ದ ಪದ್ಧವತಿಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ವಿದ್ಯಾರ್ಥಿನಿ ಸಾವಿತ್ರಿ ಕಾರಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಶಿಕ್ಷಕರಾದ ಅಮರೇಶ ಅರಗಿ, ವಿನಾಯಕ ವಿರೂಪಾಪುರ, ಶ್ರೀಶಾಂತ ನಾಯಕ, ಶಾಂತಿ, ಶಶಿಕಲಾ, ರಾಜೇಶ್ವರಿ, ಚನ್ನಮ್ಮ, ವೀಣಾ, ದೀಪಿಕಾ, ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಕಾರಟಗಿ, ಉಪಾಧ್ಯಕ್ಷ ಬಸವರಾಜ ನಾಯಕ, ಸದಸ್ಯ ತಿಪ್ಪಣ್ಣ ಅನ್ವರಿ, ಪ್ರೌಢಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಸೂಗಪ್ಪ ಬಳೆಗಾರ್, ಮುಖ್ಯಶಿಕ್ಷಕ ಬಸವರಾಜ ಬಿಳೇಕಲ್ ಇದ್ದರು.