ಮುಧೋಳ: ಈಗಿನ ಯುವ ಜನಾಂಗಕ್ಕೆ ಹಿರಿಯರ ಮಾರ್ಗದರ್ಶನ ಅಗತ್ಯವಿದೆ. ಬದುಕಿನ ಭವಿಷ್ಯದ ದಿನಗಳನ್ನು ಸರಳಗೊಳಿಸಲು ಸದಾ ಸಲಹೆ ಸೂಚನೆ ನೀಡಿ ತಿದ್ದಬೇಕಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.
ನಗರದ ರನ್ನ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಮಟ್ಟದ ಸರ್ಕಾರಿ, ಅರೆ ಸರ್ಕಾರಿ ನಿವೃತ್ತ ನೌಕರರ ಒಕ್ಕೂಟದಿಂದ ಮಂಗಳವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಸರ್ಕಾರಿ ನಿವೃತ್ತ ನೌಕರರ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯಾಧ್ಯಕ್ಷ ಡಾ.ಎಲ್. ಭೈರಪ್ಪ, ಡಾ. ಸಿದ್ದು ದಿವಾಣ ಸಂಪಾದಕತ್ವದ ಅನುಭಾವ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ನಮ್ಮ ಎಲ್ಲ ಬೇಡಿಕೆಗಳಿಗೆ ಮಂಜೂರಾತಿ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು.
ತಾಲೂಕು ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಹಾದೇವಪ್ಪ ದಾಸರಡ್ಡಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧ್ಯಕ್ಷ ವಿ.ಬಿ. ಗೋಲಪ್ಪನ್ನವರ, ಡಾ. ಸಿದ್ದು ದಿವಾಣ, ವಿಶ್ರಾಂತ ಉಪನಿರ್ದೇಶಕ ಸಿದ್ದರಾಮ ಮನಹಳ್ಳಿ ಹಾಗೂ ಸಾಹಿತಿ ಶಾರದಾ ಮುಳ್ಳೂರು ಮಾತನಾಡಿದರು.
ಡಾ. ಶಿವಾನಂದ ಕುಬಸದ, ಪಿ. ಶ್ಯಾಮಸುಂದರ, ಎಸ್.ಆರ್. ಪಾಟೀಲ, ಮಹಾದೇವಪ್ಪ ಮಡಿವಾಳರ, ಬಸವರಾಜ ಜಲಗೇರಿ, ಎಸ್.ಜಿ. ಹವಾಲ್ದಾರ್, ಉದಯ ವಾಳ್ವೇಕರ, ಚಂದ್ರಕಾಂತ ರಂಗಣ್ಣವರ, ಶಿಕ್ಷಕ ಸಿ.ಎಲ್. ರೂಗಿ, ಡಾ. ಶಿವಾನಂದ ಕುಬಸದ, ರಾಣಿ ಬರಗಿ ಇತರರಿದ್ದರು.
ಜಿಲ್ಲಾಮಟ್ಟದ ಸರ್ಕಾರಿ, ಅರೆ ಸರ್ಕಾರಿ ನಿವೃತ್ತ ನೌಕರರ ಸಂಘದಲ್ಲಿ 50 ವರ್ಷ ದಾಂಪತ್ಯ ಜೀವನ ಪೂರ್ಣಗೊಳಿಸಿದ ಹತ್ತು ಹಿರಿಯರಿಗೆ ಸನ್ಮಾನಿಸಲಾಯಿತು.