ಪತ್ನಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಂಡ ವೃದ್ಧ; ಮಗ-ಸೊಸೆಯೇ ಕಾರಣವಂತೆ…

ಬೆಂಗಳೂರು: ಗಿರಿನಗರದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊದಲು ಪತ್ನಿಗೆ ವಿಷ ನೀಡಿ ಅವರನ್ನು ಕೊಂದ ಬಳಿಕ ಪತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೃಷ್ಣಮೂರ್ತಿ ಹಾಗೂ ಸ್ವರ್ಣ ಮೃತರಾಗಿದ್ದು ಗಿರಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ವೃದ್ಧ ದಂಪತಿಯ ಸಾವಿಗೆ ಕಾರಣ ಕೇಳಿದರೆ ಮರುಕ ಹುಟ್ಟದೆ ಇರದು.

ವೃದ್ಧಾಪ್ಯದಲ್ಲಿದ್ದ ಇವರನ್ನು ಮಗ-ಸೊಸೆ ಕಡೆಗಣಿಸಿದ್ದರು. ಸ್ವರ್ಣಾ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಅವರನ್ನು ಆರೈಕೆ ಮಾಡಬೇಕಾದ ಮಗ-ಸೊಸೆ ಸದಾ ನಿಂದಿಸುತ್ತಿದ್ದರು. ಇದರಿಂದ ಬೇಸರಗೊಂಡ ದಂಪತಿ ಸಾವಿನ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *