More

  ಹಿರಿಯ ವ್ಯಕ್ತಿತ್ವಕ್ಕೆ ಗೌರವ ನೀಡುವುದು ಸಕ್ರಿಯ ಸಮಾಜದ ಲಕ್ಷಣ

  ದಾವಣಗೆರೆ: ಹಿರಿಯ ವ್ಯಕ್ತಿತ್ವವನ್ನು ಗುರುತಿಸಿ, ಗೌರವಿಸುವುದು ಸಕ್ರಿಯ ಸಮಾಜದ ಲಕ್ಷಣವಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

  ಎಸ್.ಎ. ರವೀಂದ್ರನಾಥ್ ಅಭಿಮಾನಿ ಬಳಗದಿಂದ ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ, ‘ಕೃಷಿ ಕಣ್ಮಣಿ’ ಕೃತಿಯ ಅವಲೋಕನ ಕಾರ್ಯಕ್ರಮದಲ್ಲಿ ಮಾತನಾಡಿದರು.

  ರವೀಂದ್ರನಾಥ್ ಅವರದು ಬಹುಮುಖಿ ವ್ಯಕ್ತಿತ್ವ, ನೋಡಲು ಸೌಮ್ಯವಾಗಿ ಕಂಡರೂ ಅವರ ವಿಚಾರಗಳು ಪ್ರಖರವಾಗಿರುತ್ತವೆ. ಅವರು ಸ್ವಯಂ ಸೇವಕರಾಗಿ ಜನಸಂಘವನ್ನು ಕಟ್ಟಿ, ಹೋರಾಟಗಳನ್ನು ಮಾಡಿ ನಾಯಕರಾದವರೇ ಹೊರತು ಯಾರದೋ ಹಿಂದೆ ಬಿದ್ದು ಬೆಳೆದವರಲ್ಲ. ಅವರೊಬ್ಬ ರೈತ ನಾಯಕರು ಎಂದು ಶ್ಲಾಘಿಸಿದರು.

  ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಮಾತನಾಡಿ, ರವೀಂದ್ರನಾಥ್ ಅವರು ಸರಳತೆ, ಸಜ್ಜನಿಕೆ ಪದಗಳಿಗೆ ಅರ್ಥ ತುಂಬಿದವರು. ಸಂಘಟನೆ ಕಟ್ಟಿದವರು. ಅವರ ಬದ್ಧತೆ ಯುವ ಸಮುದಾಯಕ್ಕೆ ಪ್ರೇರಕ ಎಂದು ತಿಳಿಸಿದರು.

  ಭಾರತೀಯ ರೈತ ಒಕ್ಕೂಟದ ಜಿಲ್ಲಾಧ್ಯಕ್ಷ ಎಚ್.ಆರ್. ಲಿಂಗರಾಜ್ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರವೀಂದ್ರನಾಥ್ ಅವರಿಗೆ ಮತ್ತೆ ಟಿಕೆಟ್ ನೀಡಬೇಕು ಎಂದು ಆಗ್ರಹಿಸಿದರು.

  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿದರು. ಉಪನ್ಯಾಸಕ ಬಸವರಾಜ ಹನುಮಲಿ ಕೃತಿಯ ಅವಲೋಕನ ಮಾಡಿದರು. ಮೇಯರ್ ಆರ್. ಜಯಮ್ಮ, ದೂಡಾ ಅಧ್ಯಕ್ಷ ಕೆ.ಎಂ. ಸುರೇಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ ಹನಗವಾಡಿ ಇದ್ದರು.

  ಸಂಗನಗೌಡರು ಸ್ವಾಗತಿಸಿದರು. ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಪ್ರಾಸ್ತಾವಿಕ ಮಾತನಾಡಿದರು. ಕೃತಿಯನ್ನು ಸಂಪಾದಿಸಿದ ಲೇಖಕ ಬಾ.ಮ. ಬಸವರಾಜ, ಪತ್ರಕರ್ತ ಯಳನಾಡು ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.

  ದಾವಣಗೆರೆಯ ಗಾಂಧಿ
  ಎಸ್.ಎ. ರವೀಂದ್ರನಾಥ್ ಸರಳತೆ, ಸಜ್ಜನಿಕೆಯ ಸ್ವಭಾವದವರಾಗಿದ್ದು ‘ದಾವಣಗೆರೆ ಭಾಗದ ಗಾಂಧೀಜಿ’ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಬಣ್ಣಿಸಿದರು.
  ಅವರಿಗೆ ಕರ್ಮ ಸಿದ್ಧಾಂತದಲ್ಲಿ ನಂಬಿಕೆಯಿದೆ. ಸಮಾಜದ ಕೆಲಸವನ್ನು ಅವರು ಶ್ರದ್ಧೆ, ನಿಷ್ಠರಯಿಂದ ಮಾಡಿದ್ದಾರೆ. ಅವರ ಆದರ್ಶ ವ್ಯಕ್ತಿತ್ವ ಪ್ರೇರಣಾದಾಯಕವಾಗಿದೆ ಎಂದರು.

  ಹಿಂದೆ ಆರ್.ಎಸ್.ಎಸ್, ಜನಸಂಘಕ್ಕಾಗಿ ತಮ್ಮನ್ನು ಸಮರ್ಪಿಸಿಕೊಂಡಿದ್ದ ಸಂಜೀವಣ್ಣ, ಎಸ್. ಮಲ್ಲಿಕಾರ್ಜುನಯ್ಯ ಅವರಂಥ ಹಿರಿಯರ ಒಡನಾಟ, ಮಾರ್ಗದರ್ಶನ ನನಗೆ ಸಿಕ್ಕಿತು. ಅವರೆಲ್ಲ ಒಂದು ಹೊತ್ತು ಊಟ ಇಲ್ಲದೆ ದುಡಿದವರು. ಅವರಿಂದ ಪ್ರೇರಣೆಗೊಂಡು ಒಂದಿಷ್ಟು ಕೆಲಸ ಮಾಡಿದ್ದೇನೆ ಅಷ್ಟೆ.

  ಎಸ್.ಎ. ರವಿಂದ್ರನಾಥ್, ದಾವಣಗೆರೆ ಉತ್ತರ ಶಾಸಕ

  See also  ಸಮಾಜ ಕಲ್ಯಾಣ ಇಲಾಖೆಯಿಂದ ಅನ್ಯಾಯ: ಜಿಪಂ ಉಪ ಕಾರ್ಯದರ್ಶಿಗೆ ಮನವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts