ಕಿರಿಯ ಸೋದರನನ್ನೇ ಬರ್ಬರವಾಗಿ ಹತ್ಯೆ ಮಾಡಿದ ಬಾಲಕ; ಕಾರಣ ಕೇಳಿದರೆ ಅಸಹ್ಯವಾಗುತ್ತದೆ…

ಭೋಪಾಲ್​: ಇಲ್ಲೊಬ್ಬ ಪಾಪಿ ಬಾಲಕ ತನ್ನ ತಮ್ಮನನ್ನು ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದಾನೆ. ಆದರೆ, ಕಾರಣ ಕೇಳಿದರೆ ಶಾಕ್​ ಆಗುವ ಜತೆಗೆ, ಛೇ..ಇಷ್ಟೊಂದು ಪ್ರಕ್ಷುಬ್ಧ ಮನಸ್ಥಿತಿಯ ಬಾಕರೂ ಇರುತ್ತಾರಾ ಎಂದು ಹೇಸಿಗೆ ಹುಟ್ಟುತ್ತದೆ.

ಘಟನೆ ನಡೆದದ್ದು ಮಧ್ಯಪ್ರದೇಶದ ಡಿಂಡೋರಿ ಜಿಲ್ಲೆಯ ಖೈಡ್ರಾ ಗ್ರಾಮದಲ್ಲಿ. ಆ ಬಾಲಕರ ವಯಸ್ಸು ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲ. ಆದರೆ, ಆತ ತನ್ನ ಸ್ವಂತ ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿದ್ದು ಹಣಕ್ಕಾಗಿ, ಅದರಲ್ಲೂ ಬರೀ ಐದು ರೂಪಾಯಿಗಾಗಿ.

ಈ ಇಬ್ಬರು ಬಾಲಕರ ತಂದೆ ತನ್ನ ಕಿರಿಯ ಮಗ ರಾಜುವಿಗೆ 10 ರೂಪಾಯಿ ಕೊಟ್ಟು ಇಬ್ಬರೂ ಹಂಚಿಕೊಳ್ಳಿ ಎಂದಿದ್ದರು. ಆದರೆ, ರಾಜು ತನ್ನ ಅಣ್ಣನಿಗೆ ಕೊಡಲಿಲ್ಲ. ಇದೇ ವಿಚಾರಕ್ಕೆ ಇವರಿಬ್ಬರ ಮಧ್ಯೆ ಜಗಳವಾಗಿದೆ. ಬಳಿಕ ಹಿರಿಯ ಸಹೋದರ ಮುಲಾಜಿಲ್ಲದೆ ತಮ್ಮನನ್ನು ಕಲ್ಲಿನಿಂದ ಜಜ್ಜಿ ಕೊಂದಿದ್ದಾನೆ.
ಅಲ್ಲದೆ, ಮನೆಯಿಂದ ಮೂರು ಕಿ.ಮೀ. ದೂರದ ಒಂದು ಪೊದೆಯಲ್ಲಿ ತಮ್ಮನ ಮೃತದೇಹವನ್ನು ಎಸೆದು ಪರಾರಿಯಾಗಿದ್ದಾನೆ.

ಘಟನೆ ನಡೆದ ಕೆಲವೇ ಕ್ಷಣದಲ್ಲಿ ಸ್ಥಳಕ್ಕೆ ತೆರಳಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಪ್ರಾರಂಭ ಮಾಡಿದ್ದಾರೆ.

Leave a Reply

Your email address will not be published. Required fields are marked *