ಬೆಂಗಳೂರು: ‘ಏಕ್ ಲವ್ ಯಾ’ ಚಿತ್ರದ ಚಿತ್ರೀಕರಣವನ್ನು ಪ್ರೇಮ್ ಮುಗಿಸಿದ್ದು ಗೊತ್ತೇ ಇದೆ. ಲಾಕ್ಡೌನ್ಗೂ ಮುಂಚೆಯೇ ಚಿತ್ರದ ಬಹಳಷ್ಟು ಚಿತ್ರೀಕರಣವನ್ನು ಮುಗಿಸಿದ್ದರು ಪ್ರೇಮ್. ಒಂದೆರೆಡು ಹಾಡು ಮತ್ತು ಕೆಲವು ದೃಶ್ಯಗಳ ಚಿತ್ರೀಕರಣ ಮುಗಿಸಿದ್ದರು. ಲಾಕ್ಡೌನ್ ಮುಗಿದ ಮೇಲೆ ಬೆಂಗಳೂರು, ಊಟಿ, ಕಾಶ್ಮೀರ, ರಾಜಾಸ್ತಾನ ಮತ್ತು ಗುಜರಾತ್ನಲ್ಲಿ ಬಾಕಿ ಇದ್ದ ಭಾಗದ ಚಿತ್ರೀಕರಣವನ್ನು ಸಹ ಮುಗಿಸಿದ್ದಾರೆ.
ಇದನ್ನೂ ಓದಿ: ವರುಣ್ ಧವನ್ ಅಭಿಮಾನಿಗಳಿಗೆ ಗುಡ್ ನ್ಯೂಸ್! ಶುಭ ಸುದ್ದಿ ಕೊಟ್ಟ ಜೋಡಿ
ಈ ಮಧ್ಯೆ, ಸಂಕ್ರಾಂತಿ ಹಬ್ಬದಂದು ಚಿತ್ರದ ಕುರಿತಾಗಿ ಒಂದು ಮಹತ್ವದ ವಿಚಾರವನ್ನು ಹಂಚಿಕೊಳ್ಳುವುದಾಗಿ ಹೇಳಿದ್ದರು. ಏನದು ಸುದ್ದಿ? ಅದನ್ನು ಪ್ರೇಮ್, ಸೋಷಿಯಲ್ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ವಿಷಯವೇನೆಂದರೆ, ‘ಏಕ್ ಲವ್ ಯಾ’ ನಾಲ್ಕು ಭಾಷೆಗಳಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ.
ಹೌದು, ‘ಏಕ್ ಲವ್ ಯಾ’ ಚಿತ್ರವನ್ನು ಕನ್ನಡದಲ್ಲಿ ಚಿತ್ರೀಕರಿಸಿರುವ ಪ್ರೇಮ್, ಅದನ್ನು ತೆಲುಗು, ತಮಿಳು ಮತ್ತು ಮಲಯಾಳಂಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಿದ್ದಾರೆ. ಮೊದಲ ಹಂತವಾಗಿ, ಚಿತ್ರದ ಮೊದಲ ಹಾಡನ್ನು ಅವರು ಫೆಬ್ರವರಿ 14ರಂದು ಬಿಡುಗಡೆ ಮಾಡಲಿದ್ದಾರೆ. ಈ ಹಾಡು ನಾಲ್ಕೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
‘ಏಕ್ ಲವ್ ಯಾ’ ಚಿತ್ರವನ್ನು ರಕ್ಷಿತಾ ಪ್ರೇಮ್ ನಿರ್ಮಿಸಿದ್ದು, ಪ್ರೇಮ್ ಕಥೆ ಮತ್ತು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಕ್ಷಿತಾ ಅವರ ಸಹೋದರ ರಾಣಾ ನಾಯಕನಾಗಿ ನಟಿಸಿದ್ದು, ಅವರಿಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ‘ಶಿಷ್ಯ’ ದೀಪಕ್, ರಚಿತಾ ರಾಮ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ರೈತರ ಕೆಂಗಣ್ಣಿಗೆ ಜಾಹ್ನವಿ ಕಪೂರ್ ಗುರಿಯಾಗಿದ್ದು ಯಾಕೆ?
ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಮಹೇಂದ್ರ ಸಿಂಹ ಛಾಯಾಗ್ರಹಣ ಮಾಡುತ್ತಿದ್ದಾರೆ. ಚಿತ್ರವು ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಏಪ್ರಿಲ್ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.