ಬೆಂಗಳೂರು: ಪ್ರೇಮಿಗಳ ದಿನದಂದು ಬಿಡುಗಡೆ ಆಗಿರುವ ‘ಏಕ್ಲವ್ಯು’ ಸಿನಿಮಾದ ಟೀಸರ್ನಲ್ಲಿ ಡಿಂಪಲ್ ಕ್ವೀನ್ ರಚಿತಾ ರಾಮ್ ಸಿಗರೇಟ್ಗೆ ಬೆಂಕಿ ಹಚ್ಚಿದ್ದಲ್ಲದೆ ಪಡ್ಡೆಗಳಲ್ಲಿ ಪ್ರೇಮ/ವಿರಹದ ಕಿಚ್ಚು ಹೆಚ್ಚಿಸುವಂತೆಯೂ ಕಾಣಿಸಿಕೊಂಡಿದ್ದಾರೆ. ನಾಯಕ ರಾಣಾ ತುಟಿಗೆ ತುಟಿಯ ಹಚ್ಚಿ ರಚಿತಾ ಬೋಲ್ಡ್ ಆಗಿ ನಟಿಸಿರುವ ಕಾರಣಕ್ಕೇ ಟೀಸರ್ ಗಮನ ಸೆಳೆದು ಸದ್ದು ಮಾಡಿತ್ತು. ಅದರ ಬೆನ್ನಿಗೇ, ‘ಇಷ್ಟೇ ಅಲ್ಲ, ಇನ್ನೂ ಇದೆ..’ ಎನ್ನುವ ಮೂಲಕ ಸಿನಿಮಾ ಕುರಿತ ಕುತೂಹಲವನ್ನು ರಚಿತಾ ಮತ್ತಷ್ಟು ಕೆರಳಿಸಿದ್ದಾರೆ.
ಟೀಸರ್ ಬಿಡುಗಡೆ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ ಚಿತ್ರತಂಡ, ಟೀಸರ್ ಹಾಗೂ ಸಿನಿಮಾ ಕುರಿತು ಅನಿಸಿಕೆಗಳನ್ನು ಹಂಚಿಕೊಂಡಿತು. ಈ ಸಂದರ್ಭ ರಚಿತಾ ಕೂಡ ತಮ್ಮ ಅನುಭವಗಳನ್ನು ಹೇಳಿಕೊಂಡರು. ‘ಸಿನಿಮಾದಲ್ಲಿನ ನನ್ನ ಪಾತ್ರದ ಬಗ್ಗೆ ನಾನು ಏನೂ ಹೇಳುವಂತಿಲ್ಲ’ ಎಂದ ಅವರು ಟೀಸರ್ನಲ್ಲಿನ ಅಂಶಗಳ ಬಗ್ಗೆ ಮಾತನಾಡುತ್ತ ಹೋದರು. ‘ಇದರಲ್ಲಿ ಒಂದು ಸ್ಪೆಷಲ್ ಸಾಂಗ್ ಇದೆ, ನನ್ನ ಫೇವರಿಟ್ ಅದು. ‘ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೆ ಭಗವಂತ..’ ಎಂದು ಶುರುವಾಗುವ ಆ ಗೀತೆಗೆ ನಾನು ರಕ್ಷಿತಾ-ರಾಣಾ ಎಲ್ಲ ಜತೆಯಾಗಿ ಹೆಜ್ಜೆ ಹಾಕಿದ್ದೇವೆ’ ಎನ್ನುತ್ತ ‘ಏಕ್ಲವ್ಯು’ ಸಿನಿಮಾದಲ್ಲಿ ‘ಏಕ್ದಮ್ು’ ಎನ್ನುವಂತೆ ಸಿಗರೇಟ್ ಹಿಡಿದು ಕಾಣಿಸಿಕೊಂಡ ಬಗ್ಗೆಯೂ ಮಾತನಾಡಿದರು.
‘ಸಿಗರೇಟ್ ಇಲ್ಲಿ ನನ್ನ ಫ್ರೆಂಡ್ ಇದ್ದಂಗೆ. ಸಿಗರೇಟ್ ಸೇದಿ ಅಭ್ಯಾಸ ಇರದ್ದರಿಂದ ಜಾಸ್ತಿ ಸಿಗರೇಟ್ ಬೇಕಾಯಿತು. ಒಂದೊಂದು ಸೀನ್ಗೂ 2 ಪ್ಯಾಕ್ ಬೇಕಾಯಿತು. ಬಳಿಕ ಕೆಮ್ಮು-ದಮ್ಂದಾಗಿ ಎರಡು ದಿನ ಸಫರ್ ಆದೆ’ ಎಂದ ರಚಿತಾ, ‘ಇದೊಂದು ಝುಲಕ್ ಅಷ್ಟೇ.. ಇನ್ನೂ ಮಸ್ತ್ ಇದೆ ಕಂಟೆಂಟ್ ಈ ಸಿನಿಮಾದಲ್ಲಿ..’ ಎನ್ನುವ ಮೂಲಕ ಅಭಿಮಾನಿಗಳಲ್ಲಿ, ಯುವ ಸಿನಿಪ್ರಿಯರಲ್ಲಿ ಚಿತ್ರದ ಬಗ್ಗೆ, ತಮ್ಮ ಪಾತ್ರದ ಬಗ್ಗೆ ಕೌತುಕ ಕೆರಳುವಂತೆ ಮಾಡಿದ್ದಾರೆ.
ಇನ್ನು ಶುಕ್ರವಾರವಷ್ಟೇ ಬಿಡುಗಡೆ ಆಗಿರುವ ಟೀಸರ್, ಒಂದೇ ದಿನದಲ್ಲಿ 3.9 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ರಕ್ಷಿತಾ ಪ್ರೇಮ್ ನಿರ್ವಣದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಅವರ ಪತಿ, ನಿರ್ದೇಶಕ ಜೋಗಿ ಪ್ರೇಮ್ ಆಕ್ಷನ್-ಕಟ್ ಹೇಳಿದ್ದು, ರಕ್ಷಿತಾ ಸೋದರ ರಾಣಾ ನಾಯಕನಾಗಿ ಅಭಿನಯಿಸಿದ್ದಾರೆ. ಅವರಿಗೆ ಜೋಡಿಯಾಗಿ ರಚಿತಾ ರಾಮ್ ಮಾತ್ರವಲ್ಲದೆ ಹೊಸ ಪ್ರತಿಭೆ ರೀಷ್ಮಾ ಕೂಡ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ.