ಟ್ರಾಲಿ ಬ್ಯಾಗ್‌ನಲ್ಲಿ ಅಪ್ರಾಪ್ತೆಯ ಮೃತದೇಹ ಪತ್ತೆ!

ನವದೆಹಲಿ: ಅಪ್ರಾಪ್ತೆಯ ಮೃತದೇಹ ಟ್ರಾಲಿ ಬ್ಯಾಗ್‌ನಲ್ಲಿ ತುಂಬಿದ ಸ್ಥಿತಿಯಲ್ಲಿ ಯಮುನಾ ಜೀವವೈವಿಧ್ಯ ಪಾರ್ಕ್‌ ಸಮೀಪದ ರಸ್ತೆಯಲ್ಲಿ ಇಂದು ಪತ್ತೆಯಾಗಿದೆ.

ಮುಂಜಾನೆ 07.30ರ ಸುಮಾರಿಗೆ ವಿಷಯ ತಿಳಿದ ಬಳಿಕ ತಿಮಾರ್‌ಪುರ ಪೊಲೀಸ್‌ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬ್ಯಾಗ್‌ನ್ನು ತೆರೆದು ನೋಡಿದಾಗ ಸುಮಾರು 8 ವರ್ಷ ವಯಸ್ಸಿನ ಬಾಲಕಿಯ ದೇಹ ಪತ್ತೆಯಾಗಿದೆ ಎಂದು ಪೊಲೀಸ್‌ ಉಪ ಆಯುಕ್ತ ನೂಪುರ್‌ ಪ್ರಸಾದ್‌ ತಿಳಿಸಿದ್ದಾರೆ.

ಮೃತದೇಹದ ಕುತ್ತಿಗೆ ಬಿಗಿದಿರುವ ಗುರುತು ಪತ್ತೆಯಾಗಿದ್ದು, ಸದ್ಯ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *