ನವದೆಹಲಿ: ಸಾಮಾನ್ಯವಾಗಿ ಕೋಳಿಯ ಮೊಟ್ಟೆಯನ್ನು ಅದರ ಆಕಾರದ ಕಾರಣದಿಂದಾಗಿ ನೇರವಾಗಿ ನಿಲ್ಲಿಸುವುದು ಕಷ್ಟ. ಆದರೆ ಮಲೇಷ್ಯದ ಕೌಲಾಲಂಪುರದಲ್ಲಿರುವ ಯೆಮನ್ ಮೂಲದ ಮೊಹಮ್ಮದ್ ಮಕ್ಬುಲ್ ಎಂಬ ಇಪ್ಪತ್ತು ವರ್ಷದ ಯುವಕ ಒಂದರ ಮೇಲೆ ಒಂದರಂತೆ ಮೂರು ಮೊಟ್ಟೆಗಳನ್ನು ನೇರವಾಗಿ ನಿಲ್ಲಿಸಿದ್ದಲ್ಲದೆ, ಅವು ಐದು ಸೆಕೆಂಡ್ಗಳಷ್ಟು ಕಾಲ ಕೆಳಕ್ಕೆ ಬೀಳದಂತೆ ನೋಡಿಕೊಂಡಿದ್ದಾನೆ.
ಈ ದಾಖಲೆಗಾಗಿ ಗಿನ್ನೆಸ್ ಸಂಸ್ಥೆಯು ಮುರಿಯದ, ಬಿರುಕು ಉಂಟಾಗಿರದಂಥ ಹೊರಕವಚಗಳನ್ನು ಹೊಂದಿರುವ, ತಾಜಾ ಮೊಟ್ಟೆಗಳನ್ನು ಬಳಸಬೇಕು ಎಂಬ ನಿಯಮ ವಿಧಿಸಿತ್ತು. ಈ ವಿಶಿಷ್ಟ ದಾಖಲೆ ಗಿನ್ನೆಸ್ ಪುಟದಲ್ಲಿ ಸೇರ್ಪಡೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.