ಕಿಕ್ಕೇರಿ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ವರ ಪ್ರಗತಿ, ಮುಖ್ಯವಾಹಿನಿಗೆ ಕರೆತರಲು ಹಲವಾರು ಯೋಜನೆ ರೂಪಿಸಿದ್ದು, ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲು ಸಂತಸವಿದೆ ಎಂದು ಯೋಜನಾಧಿಕಾರಿ ಪ್ರಸನ್ನ ಹೇಳಿದರು.

ಯೋಜನೆ ಕಚೇರಿಯಲ್ಲಿ ಯೋಜನಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿ, ಇಲ್ಲಿನ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಬಲವರ್ಧನೆಗೆ ಶ್ರಮಿಸಲಾಗುವುದು. ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಸಮಗ್ರ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.
ಕಿಕ್ಕೇರಿ ಯೋಜನಾ ಕಚೇರಿಯಿಂದ ಬೀದರ್ ಜಿಲ್ಲೆಗೆ ವರ್ಗಾವಣೆಯಾದ ಎಂ. ವೀರೇಶಪ್ಪ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು. ಮಂಜು, ವೈ.ಟಿ.ಅಜಯ್, ಕುಮಾರ್, ಹೇಮಂತ್, ರವಿಕುಮಾರ್, ಶರತ್, ಕಸ್ತೂರಿ, ಶಿವರಾಮ್, ಯೋಗಿತಾ, ನಳಿನಿ, ಶಶಿಪ್ರಭಾ ಇತರರು ಇದ್ದರು.