ಭಾರತದಲ್ಲಿ ಶಿಕ್ಷಣಕ್ಕೆ ಕೋಟ ಉತ್ತಮ ಸ್ಥಳ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ

ಬೆಂಗಳೂರು
ಭಾರತದಲ್ಲಿ ಶಿಕ್ಷಣಕ್ಕೆ ಕೋಟ ಉತ್ತಮ ಸ್ಥಳವಾಗಿದೆ. ಆ ಕಾರಣಕ್ಕೆ ಪ್ರಧಾನಿ ಮೋದಿಯವರು ಕೋಟಾವನ್ನು ಶಿಕ್ಷಣದ ಕಾಶಿ ಎಂದೂ ಕರೆಯುವುದಾಗಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಸ್ಮರಿಸಿದರು.
ಕೋಟಾದಲ್ಲಿ ಅಲೆನ್ ಕರಿಯರ್ ಇನ್‌ಸ್ಟಿಟ್ಯೂಟ್‌ನಿಂದ ಎರಡು ದಿನಗಳ ‘ಅಲೆನ್ ಅಲುಮ್ನಿ ಮೀಟ್-2024 – ಸಮಾನಯನ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾನೂ ಕೋಟಾದವನು ಎಂಬ ಹೆಮ್ಮೆ ನನಗೂ ಇದೆ. ಬೇರೆ ನಗರಗಳಿಗೆ ಅಥವಾ ವಿದೇಶಕ್ಕೆ ಹೋದಾಗ ಈ ಭಾವನೆ ಇನ್ನಷ್ಟೂ ದೊಡ್ಡದಾಗುತ್ತದೆ. ಉತ್ತಮ ಶಿಕ್ಷಣಕ್ಕೆ ಕೋಟಾದಂತಹ ನಗರ ಮತ್ತೊಂದಿಲ್ಲ. ಇಲ್ಲಿನ ಸೌಲಭ್ಯಗಳು, ಕಲಿಸುವ ವಿಧಾನ ತುಂಬಾ ಚೆನ್ನಾಗಿದೆ. ಹಾಗಾಗಿ ಪ್ರತಿ ವರ್ಷ ಭಾರತಾದ್ಯಂತ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ ಎಂದು ಹೇಳಿದರು.
ಇಲ್ಲಿ ಕಲಿತ ವಿದ್ಯಾರ್ಥಿಗಳು ಜೀವನದಲ್ಲಿ ಬಹಳಷ್ಟು ಉತ್ತುಂಗ ಸ್ಥಾನಗಳನ್ನು ತಲುಪಿದ್ದಾರೆ. ಇಲ್ಲಿ ಯಶಸ್ಸುಗಳಿಸುವುದನ್ನು ಕಲಿಸುತ್ತದೆ. ಈ ನಿಟ್ಟಿನಲ್ಲಿ ಕೋಟಾ ವನ್ನು ಮತ್ತಷ್ಟು ಸುಧಾರಿಸುವಲ್ಲಿ ಅಲೆನ್ ಮಹತ್ವದ ಪಾತ್ರ ವಹಿಸಿದೆ. ಇಲ್ಲಿನ ಶಿಕ್ಷಣ ಸಂಸ್ಥೆಗಳು ದೇಶಕ್ಕೆ ಮಾದರಿಯಾಗಿವೆ.ಇಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ, ಬೌದ್ಧಿಕವಾಗಿ ಹಾಗೂ ಮಾನಸಿಕ ಸ್ವಾಸ್ಥವನ್ನು ಉತ್ತಮ ಪಡಿಸುವ ಎಲ್ಲ ಪ್ರಯತ್ನಗಳು ನಡೆಯುತ್ತವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲೆನ್‌ನ 1995 ರ ಬ್ಯಾಚ್‌ನಲ್ಲಿ ವೈದ್ಯಕೀಯ ಪೂರ್ವ ವಿದ್ಯಾರ್ಥಿಯಾಗಿದ್ದ ಜೈಪುರದ ಡಾ. ಜೀವನ್ ಕಂಕಾರಿಯಾ ಅವರು ಮಾತನಾಡಿ, ನಾನು ಕೋಟಾದಲ್ಲಿ ಓದಿದ್ದೇನೆ ಎಂದು ನನಗೆ ಹೆಮ್ಮೆ ಇದೆ. ನಾನು ಅಲೆನ್ ವಿದ್ಯಾರ್ಥಿಯಾಗಿದ್ದೆ. ಇಲ್ಲಿ ನನ್ನ ಕನಸುಗಳು ನನಸಾಗಲು ವೇದಿಕೆ ಒದಗಿತು. ಅಲೆನ್ ನನ್ನ ವೃತ್ತಿಜೀವನಕ್ಕೆ ದೊಡ್ಡ ಕೊಡುಗೆ ನೀಡಿದೆ. ಕೆಲವೇ ವರ್ಷಗಳಲ್ಲಿ ಕೋಟಾ ಸಾಕಷ್ಟು ಬದಲಾಗಿದ್ದು, ಈ ಬದಲಾವಣೆ ನೋಡಲು ಸಂತೋಷವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಅಲೆನ್ ಹಳೆಯ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಅಲೆನ್ ಕುಟುಂಬದ ಮಾತ್ರೋಶ್ರೀ ಕೃಷ್ಣಾದೇವಿ ಮಂಧಾನ, ನಿರ್ದೇಶಕರಾದ ಡಾ.ಗೋವಿಂದ್ ಮಹೇಶ್ವರಿ, ರಾಜೇಶ್ ಮಹೇಶ್ವರಿ, ನವೀನ್ ಮಹೇಶ್ವರಿ, ಡಾ.ಬ್ರಜೇಶ್ ಮಹೇಶ್ವರಿ, ಎಚ್‌ಒಡಿ ಕೆ ಜಿ ವೈಷ್ಣವ್ ಮತ್ತು ಪಿಬಿ ಸಕ್ಸೇನಾ ಉಪಸ್ಥಿತರಿದ್ದರು.

Share This Article

ಈ 3 ರಾಶಿಯ ಪುರುಷರು ಪ್ರೀತಿಗೋಸ್ಕರ ತಮ್ಮ ಪ್ರಾಣ ಕೊಡಲು ಸಿದ್ಧರಾಗಿರುತ್ತಾರೆ! ನಿಮ್ಮದು ಇದೇ ರಾಶಿನಾ? Zodiac Signs

Zodiac Signs : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…

ರುದ್ರಾಕ್ಷಿ ಧರಿಸುವ ಮುನ್ನ ಈ 9 ವಿಷಯಗಳು ನಿಮ್ಮ ಗಮನದಲ್ಲಿರಲಿ! ಇಂತಹ ತಪ್ಪುಗಳು ಆಗದಿರಲಿ… | Rudraksha

Astrology Tips: ರುದ್ರಾಕ್ಷಿ ಎಂಬ ಪದ ಕೇಳಿದೊಡನೆ ನಮ್ಮಲ್ಲಿ ಭಕ್ತಿ ಭವಾನೆ ಮೂಡುತ್ತದೆ. ರುದ್ರಾಕ್ಷಿಗಳಿಂದ (Rudraksha)…

ಬೇಸಿಗೆಯಲ್ಲಿ ಈ ಜ್ಯೂಸ್​ ಕುಡಿದರೆ, ಸುಡುವ ಸೂರ್ಯ ಕೂಡ ನಿಮ್ಮನ್ನು ಏನೂ ಮಾಡಲು ಸಾಧ್ಯವಾಗುವುದಿಲ್ಲ! summer

summer:  ಸಾಮಾನ್ಯವಾಗಿ ಮಾರ್ಚ್ ಅಂತ್ಯದಿಂದ ಏಪ್ರಿಲ್, ಮೇ ಮತ್ತು ಜೂನ್ ವರೆಗೆ ಸೂರ್ಯನು ಪ್ರಕಾಶಮಾನವಾಗಿ ಬೆಳಗುತ್ತಾನೆ. …