More

    ಶೈಕ್ಷಣಿಕ, ಸಾಮಾಜಿಕ ಸೇವೆಗೆ ರಾಯರ ಮಠ ಸದಾ ಸಿದ್ಧ – ಶ್ರೀ ಸುಬುಧೇಂದ್ರ ತೀರ್ಥರ ಹೇಳಿಕೆ

    ರಾಯಚೂರು: ತನ್ನ ಭಕ್ತರ ಉನ್ನತಿಗೆ, ಶೈಕ್ಷಣಿಕ, ಸಾಮಾಜಿಕ ಸೇವೆಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ ಸದಾ ಕಾಲಕ್ಕೂ ಸಿದ್ಧ್ದವಾಗಿರಲಿದೆ ಎಂದು ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಹೇಳಿದರು.

    ಚೆನೈನ ಶಂಕರ ನೇತ್ರಾಲಯ, ಎಲ್‌ಆ್ಯಂಡ್‌ಟಿ, ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಆಶ್ರಯದಲ್ಲಿ ನಗರದ ಜವಾಹರ ಬಡಾವಣೆಯ ರಾಯರ ಶಾಖಾ ಮಠದಲ್ಲಿ ಕಣ್ಣಿನ ಉಚಿತ ಪೊರೆ ಚಿಕಿತ್ಸಾ ಶಿಬಿರದ ಸಮಾರೋಪದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸಮಾಜದಲ್ಲಿ ಜಾತಿ, ಭೇದ, ವರ್ಣ ಎನ್ನದೆ ಜಾತ್ಯತೀತವಾಗಿ ಸಾಮಾಜಿಕ ಬದ್ಧತೆಯಿಂದ ಶ್ರೀಮಠ ತನ್ನ ಸೇವೆಯನ್ನು ಹಲವು ರೂಪದಲ್ಲಿ ಮಾಡುತ್ತಲೆ ಬರುತ್ತಿದೆ. ಕಣ್ಣಿನ ಉಚಿತ ಪೊರೆ ಚಿಕಿತ್ಸಾ ಶಿಬಿರ ಅದರ ಮುಂದುವರಿದ ಭಾಗವಾಗಿದ್ದು, ಪ್ರಪಂಚವನ್ನು ಸ್ಪಷ್ಟವಾಗಿ ಕಾಣುವಂತೆ ಮಾಡುವ ಪೊರೆ ನಿವಾರಣೆ ಚಿಕಿತ್ಸೆ ಸಿಗುವ ಮೂಲಕ ರಾಯರು ಆಶೀರ್ವಾದ ಮಾಡಿದ್ದಾರೆ ಎಂದರು.

    ಶಂಕರ ನೇತ್ರಾಲಯದ ಹಿರಿಯ ವೈದ್ಯ ರಾಜೇಶ್ ಮಾತನಾಡಿದರು. ಪಂ.ರಾಜಾ ಎಸ್.ಗಿರಿರಾಜಾ ಆಚಾರ್, ಡಾ.ಸಿದ್ದೇಶ್, ಡಾ.ರಾಘವೇಂದ್ರ ಕುಲಕರ್ಣಿ, ನೇತ್ರಾಲಯದ ವ್ಯವಸ್ಥಾಪಕ ಅರುಣಕುಮಾರ್ ಮಾತನಾಡಿದರು. ಕಿನ್ನಾಳ ನಾರಾಯಣಾಚಾರ್, ಡಾ.ನಂದಿತಾ, ಶಂಕರ ನೇತ್ರಾಲಯದ ಡಾ.ಕೃಪೇಶ್, ಡಾ.ನಿಶಾ, ಡಾ.ಸೌರವ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts