ಸಿರವಾರ: ಕಲಿಕಾ ಹಬ್ಬ ಮಕ್ಕಳಲ್ಲಿರುವ ಪ್ರತಿಭೆ ಅನಾವರಣಕ್ಕೆ ಪೂರಕವಾಗಿದೆ ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.
ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಲು ಕಲಿಕಾ ಹಬ್ಬ ಸಹಕಾರಿ
ತಾಲೂಕಿನ ಸಣ್ಣ ಹೊಸೂರು ಉನ್ನತೀಕರಿಸಿದ ಸರ್ಕಾರಿ ಮಾಹಿಪ್ರಾ ಶಾಲೆಯಲ್ಲಿ ಆಯೋಜಿಸಿದ್ದ ವಲಯ ಮಟ್ಟದ ಮೂಲಭೂತ ಸಾಕ್ಷಾರತೆ ಸಂಖ್ಯೆ ಜ್ಞಾನ ಆಧಾರಿತ ಕಲಿಕಾ ಹಬ್ಬ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ಸರ್ಕಾರಿ ಶಾಲೆಗಳ ಮಕ್ಕಳ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಈ ರೀತಿಯ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರುತ್ತಿದೆ. ಅದನ್ನು ಮಕ್ಕಳು ಸರಿಯಾಗಿ ಬಳಸಿಕೊಳ್ಳುವ ಮೂಲಕ ಶಿಕ್ಷಣದಲ್ಲಿ ಉನ್ನತ ಮಟ್ಟಕ್ಕೆ ಬೆಳೆಯಬೇಕು.
ಮಕ್ಕಳ ಪ್ರತಿಭೆ ಹೊರತರುವಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದರು. ಕಾನಿಪ ಸಂಘದ ಪ್ರಶಸ್ತಿ ಪುರಸ್ಕೃತ ವಿಜಯವಾಣಿ ಮಾನ್ವಿ ವರದಿಗಾರ ಶರಣಬಸವ ನೀರಮಾನ್ವಿ ಅವರನ್ನು ಸನ್ಮಾನಿಸಲಾಯಿತು. ಗ್ರಾಪಂ ಉಪಾಧ್ಯಕ್ಷ ಲಿಂಗನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್ ದೊಡ್ಮನಿ, ಎಸ್ಡಿಎಂಸಿ ಅಧ್ಯಕ್ಷ ಲಿಂಗರಾಜ ಗೌಡ ಆತ್ತನೂರು, ನಿವೃತ್ತ ಅಧಿಕಾರಿ ಶಿವಪ್ಪಗೌಡ, ಭೂ ದಾನಿ ಬಾಲಪ್ಪ, ಜಯವಂತ, ಸಿಆರ್‌ಪಿ ದಿವಾಕರ್ ಪಿ, ಮುಖ್ಯಶಿಕ್ಷಕ ನಾಗಪ್ಪ ವಲೀಕಾರ್ ಇತರರಿದ್ದರು.