ಕೋಲಾರ: ಬ್ಯಾಲ್ಯದಲ್ಲಿ ಕಲಿತ ವಿದ್ಯೆಯನ್ನು ಜೀವನದ ಉದ್ದಕ್ಕೂ ಶಾಶ್ವತವಾಗಿ ಜ್ಞಾಪಕವಿರುತ್ತದೆ, ಅಸಕ್ತಿಯಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಕ್ರಿಯಾಯೋಜನೆ ರೂಪಿಸಿಕೊಂಡಾಗ ಯಶಸ್ಸು ಕಾಣಲು ಸಾಧ್ಯ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಾಲೂಕು ಅಧ್ಯಕ್ಷ ಕಾಡಹಳ್ಳಿ ಶಶಿಕುಮಾರ್ ತಿಳಿಸಿದರು.
ನಗರದ ಸ್ಕೌಟ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ದೇಶ ಭಕ್ತಿಗೀತೆಗಳ ಗಾಯನ ಸ್ವರ್ಧೆಗಳಿಗೆ ಚಾಲನೆ ನೀಡಿ ಮಾತನಾಡಿ, ಇಂದಿನಿAದಲೇ ದೇಶಪ್ರೇಮ, ದೇಶಭಕ್ತಿ, ಸಹಕಾರ ಮನೋಭಾವವನ್ನು ಬೆಳಸಿಕೊಳ್ಳಲು ಸ್ಕೌಟ್ ಗೈಡ್ ಶಿಕ್ಷಣ ಸಹಕಾರಿ ಎಂದರು.
ಜಿಲ್ಲಾ ಸ್ಕೌಟ್ ಆಯುಕ್ತ ಕೆ.ಆರ್.ಸುರೇಶ್ ಮಾತನಾಡಿ, ಸಂಸ್ಥೆಯಿAದ ಐದು ವರ್ಷಗಳಿಂದ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ದೇಶಭಕ್ತಿಗೀತೆಗಳ ಗಾಯನ ಸ್ವರ್ಧೆಗಳನ್ನು ಆಯೋಜಿಸಲಾಗುತ್ತಿದೆ, ತಾಲೂಕು ಹಂತದಲ್ಲಿ ಪ್ರಥಮ ಸ್ಥಾನಗಳಿಸಿದವರು, ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಬಹುದು, ಅಲ್ಲಿ ಆಯ್ಕೆಯಾದವರು ರಾಜ್ಯದಲ್ಲಿ ಭಾಗವಹಿಸಬಹು ಎಂದರು.
ಕಬ್ ಮತ್ತು ಬುಲ್ ಬುಲ್ ವಿಭಾಗದಲ್ಲಿ ಚಿನ್ಮಯ ಶಾಲೆ ಪ್ರಥಮ ಸ್ಥಾನ, ಸ್ಕೌಟ್ ವಿಭಾಗದಲ್ಲಿ ಮಹಿಳಾ ಸಮಾಜ ಶಾಲೆ, ಗೈಡ್ ವಿಭಾಗದಲ್ಲಿ ಆರ್.ಎಲ್.ಜಾಲಪ್ಪ ಶಾಲೆ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಸಂಸ್ಥೆಯ ಜಿಲ್ಲಾ ಜಂಟಿ ಕಾರ್ಯದರ್ಶಿ ಉಮಾದೇವಿ, ಸಹ ಕಾರ್ಯದರ್ಶಿ ಸ್ಕೌಟ್ ಬಾಬು, ಜಿಲ್ಲಾ ತರಬೇತಿ ಆಯುಕ್ತೆ ಗೌರಾಬಾಯಿ, ಸ್ಥಳೀಯ ಸಂಸ್ಥೆ ಖಚಾಂಚಿ ಮುನಿಸ್ವಾಮಿರೆಡ್ಡಿ, ಸಹಾಯಕ ಜಿಲ್ಲಾ ಆಯುಕ್ತ ವಿಠಲ್ ರಾವ್, ಸ್ಥಾನಿಕ ಆಯುಕ್ತರಾದ ಸುಮಂಗಲಿ ನೋಹ, ದೇವಿ ಜಾವರ್, ರಶ್ಮಿ, ಶಿಕ್ಷಕರಾದ ವೆಂಕಟರಗA, ರಂಜನಿ, ಶಿವಕುಮಾರ್ ಮತಿತರರು ಉಪಸ್ಥಿತರಿದ್ದರು.