More

    ಭವಿಷ್ಯದಲ್ಲಿ ಪ್ರಾಮುಖ್ಯ ಪಡೆಯಲಿದೆ ಶಿಕ್ಷಣ, ಜ್ಞಾನ

    ಮೈಸೂರು: ಮುಂದಿನ ದಿನಗಳಲ್ಲಿ ಶಿಕ್ಷಣ ಹಾಗೂ ಜ್ಞಾನವೇ ಮುಖ್ಯವಾಗಲಿದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಅಭಿಪ್ರಾಯಪಟ್ಟರು.

    ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್, ಶೇಷಾದ್ರಿಪುರಂ ಪದವಿ ಕಾಲೇಜು, ಬಸವ ಅಧ್ಯಯನ ಕೇಂದ್ರ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆ ಕೋಶದ ವತಿಯಿಂದ ನಗರದ ಹೆಬ್ಬಾಳ ವರ್ತುಲ ರಸ್ತೆಯಲ್ಲಿರುವ ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ದತ್ತಿ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ದತ್ತಿ ಉಪನ್ಯಾಸ ಉದ್ಘಾಟಿಸಿ ಮಾತನಾಡಿದರು.

    ನಮ್ಮಲ್ಲಿ ಬಹುತೇಕರು ಶಿಕ್ಷಣ ಮುಗಿಯುತ್ತಿದ್ದಂತೆ ಕೆಲಸದ ಬಗ್ಗೆ ಯೋಚನೆ ಮಾಡುತ್ತಾರೆಯೇ ಹೊರತು ತಮ್ಮ ಮುಂದಿನ ಉನ್ನತ್ತ ಶಿಕ್ಷಣದ ಬಗ್ಗೆ ಚಿಂತಿಸುವವರು ಕಡಿಮೆ ಇದ್ದಾರೆ. ಒಬ್ಬ ಮನುಷ್ಯ ದೊಡ್ಡವನೆಂದು ಗುರುತಿಸಬೇಕಾದರೆ ಆತನ ಶಿಕ್ಷಣದಿಂದ ಮಾತ್ರವೇ ಹೊರತು ಆತನ ಬಳಿಯಿರುವ ಹಣ ಅಥವಾ ಸಂಪತ್ತಿನಿಂದಲ್ಲ. ಅಲ್ಲದೆ ಮುಂದಿನ ದಿನಗಳಲ್ಲಿ ಶಿಕ್ಷಣವೇ ನಿಮ್ಮ ಆಸ್ತಿಯಾಗಲಿದ್ದು, ಕೆಲಸ ಅಥವಾ ಸಂಪತ್ತು ಮುಖ್ಯವಾಗುವುದಿಲ್ಲ. ಜಗತ್ತಿನಲ್ಲಿ ದುಡಿಯಲು ಹೆಚ್ಚಿನ ಅವಕಾಶಗಳಿದ್ದರೂ, ಮುಖ್ಯವಾಗಿ ಜ್ಞಾನದ ಅಗತ್ಯ ಹೆಚ್ಚಾಗಿದೆ. ವಿದ್ಯಾರ್ಥಿಗಳು ಬೇಜವಾಬ್ದಾರಿ ತೋರದೆ, ಏನನ್ನಾದರೂ ಸಾಧಿಸಿ ಎಂದು ಸಲಹೆ ನೀಡಿದರು.

    ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಹೆಳವರಹುಂಡಿ ಸಿದ್ದಪ್ಪ, ವಾಗ್ಮಿ ಪ್ರೊ.ಎಂ.ಕೃಷ್ಣೇಗೌಡ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಎಂ. ಚಂದ್ರಶೇಖರ್, ಅಧ್ಯಕ್ಷ ದೇವರಾಜ ಪಿ.ಚಿಕ್ಕಳ್ಳಿ, ದತ್ತಿದಾಸೋಹಿ ಡಾ.ಎಸ್.ಶಿವರಾಜಪ್ಪ, ಪ್ರಾಂಶುಪಾಲೆ ಡಾ.ಕೆ.ಸೌಮ್ಯಾ ಈರಪ್ಪ, ದತ್ತಿ ಪ್ರಧಾನ ಕಾರ್ಯದರ್ಶಿ ಡಾ ವೂಡೇ ಪಿ. ಕೃಷ್ಣ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts