More

    ಶಿಕ್ಷಣವೇ ದೇಶ ನಿರ್ಮಾಣಕ್ಕೆ ಅಡಿಪಾಯ; ಕವಿ ಅಗಸನಕಟ್ಟೆ

    ಹಿರಿಯೂರು: ಸಶಕ್ತ ದೇಶ ನಿರ್ಮಾಣಕ್ಕೆ ಶಿಕ್ಷಣವೇ ಅಡಿಪಾಯ ಎಂದು ಕವಿ ಡಾ.ಲೋಕೇಶ್ ಅಗಸನಕಟ್ಟೆ ಹೇಳಿದರು.

    ಬುಡಕಟ್ಟು ಸಂಸ್ಕೃತಿ ಅಧ್ಯಯನ- ಅಭಿವೃದ್ಧಿ ಸಂಸ್ಥೆ, ವೀರಲೋಕ ಪ್ರಕಾಶನ ಬೆಂಗಳೂರು, ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ನಗರದ ವಾಣಿ ಸಕ್ಕರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಬುಧವಾಟರ ಏರ್ಪಡಿಸಿದ್ದ ಕೋಟೆನಾಡು ಜಗಲಿ ಕಥಾ ಕಮ್ಮಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಿಕ್ಷಣ ಕಲಿತ ನಾವುಗಳು ಸೃಜನಶೀಲರಾಗಲು ಕಲಾವಂತಿಕೆ ಅಗತ್ಯ. ಆಧುನೀಕರಣದ ಹಾವಳಿಯಿಂದ ಎಲ್ಲವಲೂ ಮಾಯವಾಗಿವೆ. ಆದ್ದರಿಂದ ಕಥೆ, ಕವಿತೆ, ಕಾದಂಬರಿ ಮುಂತಾದ ಕಲಾತ್ಮಕ ಲೋಕವನ್ನು ಸೃಷ್ಠಿ ಮಾಡುವ, ಕಟ್ಟುವ ಅವಶ್ಯಕತೆಯಿದ್ದು, ಇಂತಹ ಕಥಾ ಕಮ್ಮಟ್ಟ ಕಾರ್ಯಕ್ರಮಗಳಿಂದ ಮರು ಸ್ಥಾಪನೆ ಸಾಧ್ಯ ಎಂದರು.

    ಕಥಾ ಕಮ್ಮಟ ನಿರ್ದೇಶಕ ಹಾಗೂ ಜಿಲ್ಲಾ ಸಂಚಾಲಕ ಜಿ.ಡಿ.ಚಿತ್ತಣ್ಣ ಮಾತನಾಡಿ, ಅಧುನೀಕರಣ, ಜಾಗತೀಕರಣ, ಉದಾರೀಕರಣ, ಕಂಪ್ಯೂಟರೀಕರಣ ಮತ್ತು ಮೊಬೈಲ್ ಹಾವಳಿಯಿಂದ ಯುವಜನತೆಯಲ್ಲಿ ಸೃಜನಶೀಲತೆ ಮತ್ತು ಅಭಿವ್ಯಕ್ತಿಯ ಕಲೆ, ಕಥೆ ಕಟ್ಟುವ ಮುಂತಾದ ಕಲಾತ್ಮಕ ಗುಣಗಳು ಬತ್ತಿಹೋಗಿವೆ ಎಂದು ಕಳವಳ ವ್ಯಕ್ತಪಡಿಸಿದರು.

    ಸ್ವಾಭಿಮಾನದ ಸ್ವಾವಲಂಬಿ ಬದುಕು ನಮ್ಮದಾಗಬೇಕಾದರೆ ಸಾಹಿತ್ಯದ ಓದಿನಿಂದ ಸಾಧ್ಯ. ಅನ್ನ ಕೊಡುವ ರೈತನ ಬದುಕು ಕಥೆಯಾಗಿ ಹೊಮ್ಮಿದಾಗ ಹೆಸರಾಂತ ಕಥೆಗಾರರಾಗಲು ಸಾಧ್ಯ ಎಂದರು.

    ಪ್ರಾಚಾರ್ಯ ಡಾ.ಆರ್.ಮಹೇಶ್ ಮಾತನಾಡಿ, ಅನುಭವಗಳೇ ಕಥೆಗಳಿಗೆ ಪ್ರೇರಣೆ. ನಮ್ಮ ಪರಿಸರ ಮತ್ತು ಪ್ರಕೃತಿಯಿಂದ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ದೇಶದ ಇತಿಹಾಸ ಅರಿತು, ನಮ್ಮ ಮೂಲ ಸಂಸ್ಕೃತಿ ಆಚಾರ-ವಿಚಾರ, ಪರಂಪರೆ ರಕ್ಷಣೆ ಮಾಡಬೇಕು ಎಂದು ಹೇಳಿದರು.

    ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಆರನಕಟ್ಟೆ ಶಿವಕುಮಾರ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಧನಂಜಯಕುಮಾರ್, ಡಾ.ಧರಣೇಂದ್ರಯ್ಯ, ಕೆ.ಎಂ.ಜಗನ್ನಾಥ್, ಬಸವರಾಜ್, ವಲಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts