ವಿದ್ಯೆ ಕಳ್ಳತನದಿಂದ ಕಿತ್ತುಕೊಳ್ಳುವ ಸರಕಲ್ಲ

gsb programme

ಶಿವಮೊಗ್ಗ: ಕಲಿತ ವಿದ್ಯೆಯನ್ನು ಯಾರೂ ಕಳ್ಳತನ ಮಾಡಲು ಸಾಧ್ಯವಿಲ್ಲ. ವಿಭಜನೆ ಮಾಡುವುದಕ್ಕೂ ಆಗುವುದಿಲ್ಲ. ಯಾವ ರಾಜ ಅಥವಾ ಅಧಿಕಾರಿಯೂ ದರ್ಪದಿಂದ ಕಿತ್ತುಕೊಳ್ಳಲಾಗುವುದಿಲ್ಲ ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದ ಒಡೆಯರ್ ಸ್ವಾಮೀಜಿ ಹೇಳಿದರು.

ನಗರದ ಬಂಟರ ಭವನದಲ್ಲಿ ಉಡುಪಿ ಜಿಲ್ಲೆಯ ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆಯಿಂದ ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಎಸ್‌ಬಿ ಸಮಾಜ ಬಾಂಧವರ ಸಹಭಾಗಿತ್ವದಲ್ಲಿ ಶಿವಮೊಗ್ಗ ಜಿಎಸ್‌ಬಿ ಸಮಾಜದ ಆಶ್ರಯದಲ್ಲಿ ಭಾನುವಾರ ವಿದ್ಯಾಪೋಷಕ ನಿಧಿ ವಿದ್ಯಾರ್ಥಿವೇತನ ವಿತರಣೆ, ಶೈಕ್ಷಣಿಕ ಮತ್ತು ವೃತ್ತಿ ಪ್ರೇರಣಾ ಕಾರ್ಯಾಗಾರ, ಪ್ರತಿಭಾ ಪುರಸ್ಕಾರ ಹಾಗೂ ಕುಟುಂಬ ಚೈತನ್ಯ ನಿಧಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಎಷ್ಟೇ ಉನ್ನತ ಶಿಕ್ಷಣ ಪಡೆದರೂ ಅದು ಎಂದಿಗೂ ಭಾರ ಅನಿಸುವುದಿಲ್ಲ. ವಿದ್ಯಾಧನಂ ಸರ್ವಧನ ಪ್ರಧಾನಂ ಎಂದು ಶಾಸ್ತ್ರವೇ ಹೇಳಿದೆ. ನಾವು ಪಡೆದ ಶಿಕ್ಷಣವೇ ಹೆಚ್ಚು ಮಹತ್ವದ್ದು ಎಂಬ ಅಹಂ ಇರಬಾರದು. ಮತ್ತೊಬ್ಬರು ಪಡೆದ ಶಿಕ್ಷಣವನ್ನು ಎಂದಿಗೂ ಅವಹೇಳನ ಮಾಡಬಾರದು. ಎಲ್ಲರ ವಿದ್ಯೆಗೂ ಅದರದ್ದೇ ಆದ ಗೌರವವಿರುತ್ತದೆ. ಯಾವುದೇ ವಿದ್ಯೆ ಪಡೆದರೂ ಒಂದಲ್ಲ ಒಂದು ದಿನ ಉಪಯೋಗಕ್ಕೆ ಬರಲಿದೆ. ಹಾಗಾಗಿ ಲೌಖಿಕ ಜಗತ್ತನ್ನು ಎದುರಿಸಲು ಶಿಕ್ಷಣ ಬೇಕೇ ಬೇಕು ಮತ್ತು ನೈತಿಕತೆ ಇರಬೇಕು. ನೈತಿಕತೆ ಇಲ್ಲದ ಶಿಕ್ಷಣ ವ್ಯರ್ಥ ಎಂದರು.
ಆರ್‌ಎನ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಕೆ.ಎಲ್.ಸುಧೀರ್ ಪೈ ವಿದ್ಯಾರ್ಥಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಿದರು. ಉಡುಪಿಯ ತ್ರಿಶಾ ಶೈಕ್ಷಣಿಕ ಸಂಸ್ಥೆಯ ಸಂಸ್ಥಾಪಕ ಸಿ.ಎ.ಗೋಪಾಲಕೃಷ್ಣ ಭಟ್ ಅವರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕ್ಷೇತ್ರದಲ್ಲಿರುವ ಅವಕಾಶಗಳು, ಸವಾಲುಗಳು ಹಾಗೂ ಉದ್ಯಮಶೀಲತೆಯಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ತಿಳಿಸಿದರು.
ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆಯ ಸಂಸ್ಥಾಪಕ ಡಾ. ನರೇಂದ್ರ ಭಟ್, ಸಾಗರದ ಉದ್ಯಮಿ ಶಿವಾನಂದ್ ಭಂಡಾರ್ಕರ್, ಕೊಂಕಣ್ ಎಜುಕೇಷನ್ ಟ್ರಸ್ಟ್‌ನ ಕಾರ್ಯದರ್ಶಿ ಮುರಳೀಧರ ಪ್ರಭು, ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್, ಜಿಎಸ್‌ಬಿ ಶಿವಮೊಗ್ಗ ಸಮಾಜದ ಅಧ್ಯಕ್ಷ ಭಾಸ್ಕರ್ ಜಿ. ಕಾಮತ್, ವಿದ್ಯಾಪೋಷಕ ನಿಧಿ ಶಿವಮೊಗ್ಗ ಸಂಯೋಜಕ ಮಡೂರು ಪ್ರಕಾಶ್ ಪ್ರಭು, ಪ್ರಮುಖರಾದ ಹಾಲಾಡಿ ರಾಜೇಂದ್ರ ಪೈ, ರಾಮು ಕಿಣಿ, ಶಂಕರ್ ದಿವೇಕರ್, ಹಿತರಕ್ಷಣಾ ವೇದಿಕೆ ಸಂಚಾಲಕ ವಿವೇಕಾನಂದ ಶೆಣೈ, ಕಾರ್ಯದರ್ಶಿ ಸಾಣೂರು ನರಸಿಂಹ ಕಾಮತ್, ರವೀಂದ್ರ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.

Share This Article

ಬೆಳಗ್ಗೆ ಹೊತ್ತು ವಾಲ್​ನಟ್ಸ್​​ ಸೇವನೆ ಎಷ್ಟು ಉತ್ತಮ? ಇಲ್ಲಿದೆ ಉಪಯುಕ್ತ ಮಾಹಿತಿ | Walnuts

ಬೆಂಗಳೂರು: ಉತ್ತಮ ಆರೋಗ್ಯಕ್ಕಾಗಿ ಇಂದು ಅನೇಕರು ಹೊಸ ಹೊಸ ರೀತಿಯ ಕಸರತ್ತನ್ನು ಮಾಡುವಲ್ಲಿ ಮುಂಚೂಣಿಯಲ್ಲಿದ್ದಾರೆ. ಕೆಲವರು…

ಆಯುಷ್ಯ ಇರುವಾಗ ಸಾಯುವವರೆಗೆ ಬದುಕಲೇಬೇಕಲ್ಲ!

| ಡಾ.ಕೆ.ಪಿ. ಪುತ್ತೂರಾಯ ಇದು ಸಹಿಸಿಕೊಳ್ಳಲಾಗದ ವೃದ್ಯಾಪಕ್ಕೆ ಒಳಗಾಗಿ ಸಾಯಲಾಗದೆ ಸಾವಿನ ಕ್ಷಣವನ್ನೇ ಎದುರು ನೋಡುತ್ತಿರುವ…

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…