ಸುಶಿಕ್ಷಿತ ಸಮಾಜಕ್ಕೆ ಶಿಕ್ಷಣ ಮುಖ್ಯ

ವಿರಾಜಪೇಟೆ: ಮನುಜ ಶಿಕ್ಷಿತನಾದಲ್ಲಿ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಬಲ್ಲ. ಶಿಕ್ಷಣ ಪಡೆದ ವ್ಯಕ್ತಿ ಉತ್ತಮನಾಗಿ ರೂಪುಗೊಳ್ಳುತ್ತಾನೆ. ಈ ನಿಟ್ಟನಿಲ್ಲಿ ಸರ್ವರೂ ಪ್ರಯತ್ನಿಸಬೇಕು ಎಂದು ವಿರಾಜಪೇಟೆ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರ ಸಲಹೆ ನೀಡಿದರು.

ಜನ ಸೇವಾ ಟ್ರಸ್ಟ್ ವಿರಾಜಪೇಟೆ ವತಿಯಿಂದ ಗುರುವಾರ ಆಯೋಜಿಸಿದ್ದ ವಿದ್ಯಾರ್ಥಿ ವೇತನ, ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರೂ ಶಿಕ್ಷಣ ಪಡೆಯುವುದು ಅನಿವಾರ್ಯವಾಗಿದೆ. ಹಿಂದೆ ಶಿಕ್ಷಣಕ್ಕೆ ಮಹತ್ವವಿದ್ದರೂ ಪ್ರೋತ್ಸಾಹದ ಕೊರತೆ ಇತ್ತು. ಪ್ರಸ್ತುಕ ಯಾವುದೇ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು, ಜಾತಿ, ಧರ್ಮ ಬೇದವಿಲ್ಲದೆ ಸರ್ವರಿಗೂ ಉಚಿತ ಶಿಕ್ಷಣ ನೀಡುವ ಕಾರ್ಯಕ್ಕೆ ಸರ್ಕಾರ ಮುಂದಾಗಿದೆ ಎಂದು ಹೇಳಿದರು.

ಬಾಲ್ಯದಿಂದಲೇ ಸಂಸ್ಕಾರ ಪಡೆಯುವುದು ಉತ್ತಮ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಮೌಲ್ಯಯುತ ಶಿಕ್ಷಣ ಒದಗಿಸುವ ಅನಿವಾರ್ಯವಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳು ಕೆಳಸ್ತರದವರಲ್ಲ. ಇಲ್ಲಿ ಓದಿದ ಹಲವಾರು ಮಂದಿ ಖ್ಯಾತನಾಮರಾಗಿದ್ದಾರೆ. ಉತ್ತಮ ಪದವಿ ಹೊಂದಿದ್ದಾರೆ. ಸರ್ಕಾರಿ ಶಾಲೆಗಳನ್ನು ಕೀಳಾಗಿ ಕಾಣದೆ ಮಕ್ಕಳನ್ನು ದಾಖಲಿಸಬೇಕು ಎಂದು ತಿಳಿಸಿದರು.

ಜನ ಸೇವಾ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎಂ.ಇ.ಶರೀಫ್ ಮಾತನಾಡಿ, ಸಂಸ್ಥೆಯು 2017ರಲ್ಲಿ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ಜತೆಗೆ ಸಾಮಾಜಿಕ ಕಳಕಳಿಯೊಂದಿಗೆ ಆರೋಗ್ಯ, ಸಾಮಾಜಿಕ. ಶಿಕ್ಷಣ ಮತ್ತು ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಎಲ್ಲ ವರ್ಗದ ಬಡ ವಿದ್ಯಾರ್ಥಿಗಳನ್ನು ಗುರಿತಿಸಿ ಪ್ರೋತ್ಸಾಹ ಧನ ನೀಡುತ್ತಿದೆ. ಸಂಸ್ಥೆಯ ಏಳಿಗೆಗಾಗಿ ಮತ್ತು ಜನಪರ ಕಾರ್ಯಕ್ರಮಗಳಿಗಾಗಿ ದಾನಿಗಳು ಉದಾರ ಮನಸ್ಸಿನಿಂದ ದೇಣಿಗೆಯನ್ನು ನೀಡುತ್ತಿದ್ದಾರೆ ಎಂದು ಹೇಳಿದರು.

40 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿರಾಜಪೇಟೆ ಸಂತ ಅನ್ನಮ್ಮ ಶಾಲೆ ದೈಹಿಕ ಶಿಕ್ಷಕ ಶಭರೀಶ್ ಅವರನ್ನು ಸನ್ಮಾನಿಸಲಾಯಿತು. ವಿರಾಜಪೇಟೆ ಪುರಸಭೆ ಸದಸ್ಯ ಮನೆಯಪಂಡ ದೇಚಮ್ಮ ಕಾಳಪ್ಪ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ ಮಾತನಾಡಿದರು. ವಕೀಲರಾದ ರೀಹಾನ, ಸಂಸ್ಥೆಯ ಉಪಾಧ್ಯಕ್ಷ ರಹೀಂ, ಸಮಾಜ ಸೇವಕರಾದ ಅಖೀಲ್, ರಜಾಕ್, ಉದ್ಯಮಿಗಳಾದ ಅಲ್ತಾಫ್ ಇತರರು ಇದ್ದರು.

Share This Article

Skin care: ಕಣ್ಣುಗಳ ಕೆಳಗಿರುವ ಚರ್ಮ ಸುಕ್ಕುಗಟ್ಟಿದೆಯೇ? ಹೀಗೆ ಮಾಡಿ..

ಕಣ್ಣುಗಳು(Skin care) ಸೂಕ್ಷ್ಮ ಅಂಗಗಳಾಗಿದ್ದು, ಅವುಗಳ ಕೆಳಗಿರುವ ಚರ್ಮವು ಸಹ ಸೂಕ್ಷ್ಮವಾಗಿರುತ್ತದೆ. ಬಿಸಿಲು, ಪೌಷ್ಠಿಕ ಆಹಾರದ…

Health Tips : ಮೆಟ್ಟಿಲು ಹತ್ತುವಾಗ ಸುಸ್ತಾಗುತ್ತದಾ..! ಈ ಸಲಹೆಗಳನ್ನು ಅನುಸರಿಸಿ

ಬೆಂಗಳೂರು: ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಸಾಮಾನ್ಯ. ಈ ಸಮಸ್ಯೆಯು ವಯಸ್ಸಾದಂತೆ ಹೆಚ್ಚಾಗುತ್ತಿದೆ, ಆದರೆ ಇತ್ತೀಚಿನ…