ಎಜುಕೇಷನ್​ ಎಕ್ಸ್​ಪೋಗೆ ನಾವ್ ರೆಡಿ, ನೀವು…?

ತ್ತಮ ಶಿಕ್ಷಣದ ಉದ್ದೇಶವೆಂದರೆ ಕೇವಲ ಕಲಿಸುವುದಲ್ಲ. ಕಲಿಯುವ ಆಸಕ್ತಿಯನ್ನು ಹುಟ್ಟಿಸುವುದು… ಹೀಗೆಂದು ಹೇಳಿದವರು ರಾಷ್ಟ್ರಪಿತ ಮಹಾತ್ಮ ಗಾಂಧಿ.

ಶಿಕ್ಷಣ ಪ್ರತಿಯೊಬ್ಬರಿಗೂ ಅವಶ್ಯ. ಶಾಲಾ ಶಿಕ್ಷಣ ಮುಗಿದ ನಂತರ ಮುಂದೇನು ಎಂಬ ಪ್ರಶ್ನೆ ಪಾಲಕರು ಮತ್ತು ವಿದ್ಯಾರ್ಥಿಗಳನ್ನು ಪ್ರಬಲವಾಗಿ ಕಾಡುತ್ತದೆ. ಈ ಪ್ರಶ್ನೆ ವಿದ್ಯಾರ್ಥಿಗಳ ಭವಿಷ್ಯ ನಿರ್ಧರಿಸುವುದರಿಂದ ನಿರ್ಧಾರ ತೆಗೆದು ಕೊಳ್ಳುವಾಗ ಹೆಚ್ಚಿನ ಎಚ್ಚರ ವಹಿಸಬೇಕಾಗುತ್ತದೆ. ಸಾವಿರಾರು ಕಾಲೇಜುಗಳು, ನೂರಾರು ಕೋರ್ಸ್​ಗಳ ಮಧ್ಯೆ ಆಯ್ಕೆ ಎಂಬುದು ಕಷ್ಟವೇ ಸರಿ. ಇಂತಹ ಗೊಂದಲ ದಿಂದ ಮುಕ್ತಿ ನೀಡಲು, ನಿಮ್ಮ ಭವಿಷ್ಯದ ದಾರಿಯನ್ನು ನೀವೇ ಆಯ್ಕೆ ಮಾಡಿಕೊಳ್ಳಲು, ಯಾವ ಕೋರ್ಸ್ ಚೆನ್ನಾಗಿದೆ ಹಾಗೂ ಯಾವ ಕಾಲೇಜು ಹೇಗಿದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿವೆ.

ಹಲವಾರು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಎಲ್ಲರ ಮನ ಗೆದ್ದಿರುವ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಪ್ರತಿ ವರ್ಷವೂ ‘ಎಜುಕೇಷನ್ ಎಕ್ಸ್​ಪೋ’ ಆಯೋಜಿಸಿಕೊಂಡು ಬರುತ್ತಿದೆ. ಇದೀಗ ಮೂರನೇ ಆವೃತ್ತಿ ನಡೆಸುವ ಸಮಯ ಬಂದಿದೆ. ಏ.28 ಮತ್ತು 29ರಂದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಈ ಎಕ್ಸ್​ಪೋ ನಡೆಯಲಿದೆ. ಕಳೆದೆರಡು ವರ್ಷಗಳಿಂದ ಯಶಸ್ವಿಯಾಗಿ ಈ ಪ್ರದರ್ಶನ ನಡೆಸುತ್ತಿರುವ ವಿಜಯವಾಣಿ ಇದೀಗ 3ನೇ ವರ್ಷ ಮತ್ತಷ್ಟು ವಿನೂತನ ಆಲೋಚನೆಗಳೊಂದಿಗೆ ಎಕ್ಸ್​ಪೋ ಆಯೋಜಿಸುತ್ತಿದೆ.

ಭವಿಷ್ಯದ ಆಯ್ಕೆ: ಒಂದೇ ಒಂದು ಆಲೋಚನೆಗೆ ನಿಮ್ಮ ಬದುಕಿನ ದಿಕ್ಕನ್ನೇ ಬದಲಾಯಿಸುವ ಶಕ್ತಿ ಇದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಸಮಾಜದಲ್ಲಿ ಸಾಧಕರು ಎಂದು ಗುರುತಿಸಿಕೊಂ ಡಿರುವವರೆಲ್ಲರ ಹಿಂದೆ ತಾವು ಮಾಡಿಕೊಂಡ ಆಯ್ಕೆ ಮತ್ತು ಆಲೋಚನೆಯ ಶಕ್ತಿ ಇರುತ್ತದೆ.

ಬೇಬಿ ನರ್ಸರಿಯಿಂದ ಎಸ್ಸೆಸ್ಸೆಲ್ಸಿಯವರೆಗೂ ಹೆಚ್ಚಿನ ಆಯ್ಕೆಗಳಿರುವುದಿಲ್ಲ. ಹೀಗಾಗಿ ಪಾಲಕರು ತಮ್ಮ ಮಕ್ಕಳಿಗೆ ಯಾವುದಾದರೂ ಒಂದು ಒಳ್ಳೆಯ ಶಾಲೆಯಲ್ಲಿ ಪ್ರವೇಶ ಕಲ್ಪಿಸಿ ವ್ಯಾಸಂಗ ಮಾಡುವಂತೆ ಹೇಳುತ್ತಾರೆ. ಆದರೆ, ಶಾಲಾ ಹಂತ ಮುಗಿದ ಬಳಿಕ ವಿದ್ಯಾರ್ಥಿಗಳ ಮುಂದೆ ಆಯ್ಕೆಗಳ ಮಹಾಪೂರವೇ ಹರಿದು ಬರುತ್ತದೆ.

ಬಹುಮಾನ ಉಂಟು!

ಈ ಎಜುಕೇಷನ್ ಎಕ್ಸ್​ಪೋನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕುರಿತು ತಿಳಿವಳಿಕೆ ಪಡೆಯುವುದರ ಜತೆಗೆ ಬಹುಮಾನವನ್ನೂ ಪಡೆಯಬಹುದು. ನಿಮಗಾಗಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ವಿಶೇಷ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸುತ್ತಿವೆ. ಈ ಸ್ಪರ್ಧೆಯಲ್ಲಿ ವಿಜೇತರಾಗುವ ವಿದ್ಯಾರ್ಥಿಗಳಿಗೆ ಆಕರ್ಷಕ ಬಹುಮಾನವಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಭಾಗವಹಿಸಿ ಎಕ್ಸ್​ಪೋದ ಪ್ರಯೋಜನ ಪಡೆದುಕೊಳ್ಳಬಹುದು.

ಡಿಪ್ಲೊಮಾ, ಪಿಯು, ವೃತ್ತಿ ತರಬೇತಿ, ಇಂಜಿನಿಯರಿಂಗ್, ಮೆಡಿಕಲ್, ಫ್ಯಾಷನ್ ಹೀಗೆ ನೂರಾರು ಕೋರ್ಸ್​ಗಳು ನಿಮ್ಮ ಮುಂದಿರುತ್ತವೆ. ಕೋರ್ಸ್ ಆಯ್ಕೆ ಮಾಡಿಕೊಂಡ ನಂತರ ಯಾವ ಕಾಲೇಜಿಗೆ ಸೇರಬೇಕು ಎಂಬ ಪ್ರಶ್ನೆ ಎದುರಾಗುತ್ತದೆ. ಶಿಕ್ಷಣದ ಗುಣಮಟ್ಟ ಹೇಗಿದೆ.. ಹೀಗೆ ನೂರಾರು ಪ್ರಶ್ನೆಗಳು ನಿಮ್ಮೆದುರು ಧುತ್ತೆಂದು ನಿಲ್ಲುತ್ತವೆ. ಯಾವುದೇ ವಿಚಾರದಲ್ಲೂ ಆಯ್ಕೆ ಎಂಬುದು ಮಹತ್ವದ ಪಾತ್ರ ವಹಿಸುತ್ತದೆ. ಹೀಗಾಗಿ ನೀವು ಮುಂದೆ ಏನಾಗಬೇಕು ಎಂಬುದರ ಆಯ್ಕೆಯನ್ನು ನೀವೇ ನಿರ್ಧರಿಸುವುದು ನಿಮ್ಮ ಭವಿಷ್ಯದ ದೃಷ್ಟಿಯಿಂದ ಉತ್ತಮ.

ಆಯ್ಕೆಗಳ ಮಹಾಪೂರ: ಈ ಎಜುಕೇಷನ್ ಎಕ್ಸ್​ಪೋನಲ್ಲಿ ರಾಜ್ಯದ ನಾನಾ ಭಾಗಗಳ 50ಕ್ಕೂ ಹೆಚ್ಚು ವಿದ್ಯಾಸಂಸ್ಥೆಗಳು ಭಾಗವಹಿಸಲಿವೆ. ವಿದ್ಯಾರ್ಥಿಗಳಿಗೆ ಲಭ್ಯವಿರುವ ಕೋರ್ಸ್​ಗಳು, ಯಾವ ಕೋರ್ಸ್ ಪ್ರವೇಶಕ್ಕೆ ಯಾವ ಪರೀಕ್ಷೆ ಎದುರಿಸಬೇಕು, ಪರೀಕ್ಷೆ ಸಿದ್ಧತೆ ಹೇಗೆ ಮಾಡಿಕೊಳ್ಳಬೇಕು, ಎಲ್ಲಿ ತರಬೇತಿ ಪಡೆಯಬೇಕು. ವಿದ್ಯಾರ್ಥಿ ವೇತನ ದೊರೆಯುತ್ತದೆಯೇ? ಆನ್​ಲೈನ್ ಕೋರ್ಸ್ ಗಳಲ್ಲಿನ ಅನುಕೂಲ- ಅನನುಕೂಲಗಳು ಏನು ಎಂಬುದು ಸೇರಿದಂತೆ ಹಲವಾರು ವಿಷಯಗಳ ಕುರಿತು ಶಿಕ್ಷಣ ತಜ್ಞರಿಂದಲೇ ಈ ಎಕ್ಸ್​ಪೋನಲ್ಲಿ ಮಾಹಿತಿ ದೊರೆಯಲಿದೆ. ಡಿಪ್ಲೊಮಾ, ಇಂಜಿನಿಯರಿಂಗ್, ಮ್ಯಾನೇಜ್​ವೆುಂಟ್, ವೈದ್ಯಕೀಯ, ದಂತವೈದ್ಯಕೀಯ, ಫ್ಯಾಷನ್, ಆನಿಮೇಷನ್, ಬಾಹ್ಯಾಕಾಶ ಸಂಶೋಧನೆ, ಮಾಹಿತಿ ತಂತ್ರಜ್ಞಾನ, ಬ್ಯಾಂಕಿಂಗ್ ಸೇರಿ ಹತ್ತು ಹಲವು ಕ್ಷೇತ್ರಗಳಲ್ಲಿ ಪರಿಣಿತಿ ಹೊಂದಿರುವ ತಜ್ಞರು ಆಯಾ ಕ್ಷೇತ್ರಗಳಲ್ಲಿರುವ ವಿಪುಲ ಅವಕಾಶಗಳ ಕುರಿತು ಮಾಹಿತಿ ನೀಡಲಿದ್ದಾರೆ. ಅಲ್ಲದೆ, ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ, ವ್ಯಕ್ತಿತ್ವ ವಿಕಸನ, ಒತ್ತಡ ನಿವಾರಣೆ ಕುರಿತು ತಜ್ಞರು ವಿವರಣೆ ನೀಡಲಿದ್ದಾರೆ.

ಪ್ರವೇಶ ಉಚಿತ

ಪ್ರತಿಯೊಂದು ಸಲಹೆ, ಸೂಚನೆಗಳಿಗೂ ಸಾವಿರಾರು ರೂ. ವಸೂಲಿ ಮಾಡುವ ಈ ಕಾಲದಲ್ಲಿ ವಿಜಯವಾಣಿ ಮತ್ತು ದಿಗ್ವಿಜಯ 247 ಸುದ್ದಿವಾಹಿನಿ ಎಜುಕೇಷನ್ ಎಕ್ಸ್​ಪೋ ಆಯೋಜಿಸುವ ಮೂಲಕ ಎಲ್ಲ ಸಲಹೆ, ಸೂಚನೆಗಳನ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶ ಕಲ್ಪಿಸುತ್ತಿದೆ. ಈ ಎಕ್ಸ್​ಪೋಗೆ ಆಗಮಿಸುವ ಪಾಲಕರು ಹಾಗೂ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ.

Leave a Reply

Your email address will not be published. Required fields are marked *