More

    ಆರ್​ಟಿಇ ಅಡಿ ಎಲ್​.ಕೆ.ಜಿ ಹಾಗೂ 1ನೇ ತರಗತಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿ ನಿಗದಿ

    ಬೆಂಗಳೂರು: ಶಿಕ್ಷಣ ಹಕ್ಕು ಕಾಯ್ದೆ ಅಡಿಯಲ್ಲಿ 2020-21ನೇ ಸಾಲಿನ ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಅರ್ಹ ಮಕ್ಕಳ ದಾಖಲಾತಿಗೆ ನೀಡಲಾಗಿರುವ ಮಾರ್ಗಸೂಚಿ ಮತ್ತು ವೇಳಾಪಟ್ಟಿಯ ಸುತ್ತೋಲೆಯ ಪ್ರಕಾರ ಎಲ್​.ಕೆ.ಜಿ ಮತ್ತು 1ನೇ ತರಗತಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿಯನ್ನು ನಿಗದಿಪಡಿಸಲಾಗಿದೆ.

    ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ಸುತ್ತೋಲೆಯನ್ನು ಹೊರಡಿಸಿದೆ. ಇದರನ್ವಯ 1ನೇ ತರಗತಿ ಪ್ರವೇಶ ಬಯಸುವ ಮಕ್ಕಳ ವಯೋಮಿತಿ ಕನಿಷ್ಠ 5 ವರ್ಷ 5 ತಿಂಗಳಿಂದ ಗರಿಷ್ಠ 7 ವರ್ಷ ಆಗಿರಬೇಕು.

    ಎಲ್​.ಕೆ.ಜಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿ ಕನಿಷ್ಠ 3 ವರ್ಷ 5 ತಿಂಗಳಿಂದ ಗರಿಷ್ಠ 5 ವರ್ಷ ಆಗಿರಬೇಕು. ಆರ್​ಟಿಇ ಕಾಯ್ದೆ 2009ರ ಸೆಕ್ಷನ್​ 12(1)(ಬಿ) ಮತ್ತು 12(1)(ಸಿ) ಅಡಿಯಲ್ಲಿ ದಾಖಲಾಗುವ ಮಗುವಿಗೆ ಈ ಮೇಲ್ಕಂಡ ವಯೋಮಿತಿಯನ್ನು ನಿಗದಿಗೊಳಿಸಲಾಗಿದೆ.

    ಆರ್​ಟಿಇ ಅಡಿ ಎಲ್​.ಕೆ.ಜಿ ಹಾಗೂ 1ನೇ ತರಗತಿಗೆ ಪ್ರವೇಶ ಬಯಸುವ ಮಗುವಿನ ವಯೋಮಿತಿ ನಿಗದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts