ಸಂಪಾದಕೀಯ: ಸುರಕ್ಷತೆ ಮುಖ್ಯ

sa

ಹಿಂಸೆ, ಪ್ರತ್ಯೇಕತಾವಾದದ ಉಪಟಳ, ಭಯೋತ್ಪಾದನಾ ದಾಳಿಗಳು, ಉಗ್ರರ ಒಳನುಸುಳುವಿಕೆ ಹೀಗೆ ಹಲವು ಸಮಸ್ಯೆಗಳ ವಿರುದ್ಧ ಜಮ್ಮು-ಕಾಶ್ಮೀರ ಹಲವು ದಶಕಗಳಿಂದ ಹೋರಾಡುತ್ತಲೇ ಬಂದಿದೆ. ಹೋರಾಟದ ಈ ದೀರ್ಘ ಪಯಣದಲ್ಲಿ ಮಹತ್ವದ ತಿರುವು ಸಿಕ್ಕಿದ್ದು 2019ರ ಆಗಸ್ಟ್​ನಲ್ಲಿ, ಕೇಂದ್ರ ಸರ್ಕಾರ ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ಬಳಿಕ. ನಂತರದ ದಿನಗಳಲ್ಲಿ ಈ ಕಣಿವೆ ಪ್ರದೇಶದ ಸ್ಥಿತಿಯಲ್ಲಿ ಸಾಕಷ್ಟು ಸಕಾರಾತ್ಮಕ ಬದಲಾವಣೆ ಕಂಡುಬಂತು. ಪ್ರವಾಸೋದ್ಯಮ ಚಿಗುರೊಡೆಯಿತು. ಆದರೆ, 2024ರ ಲೋಕಸಭೆ ಚುನಾವಣೆಯ ನಂತರ ಚಿತ್ರಣ ಮತ್ತೆ ಬದಲಾಗಿದೆ. ಭಯೋತ್ಪಾದಕರ ದಾಳಿಗಳು ಮತ್ತು ಗಡಿಯಲ್ಲಿ ಒಳನುಸುಳುವಿಕೆಯ ಪ್ರಯತ್ನಗಳು ಹೆಚ್ಚಿವೆ. ದನಿ ಕಳೆದುಕೊಂಡಿದ್ದ ಪ್ರತ್ಯೇಕತಾವಾದಿಗಳು ಈಗ ಮತ್ತೆ ಮಾತಿನ ಸಮರ ಆರಂಭಿಸಿದ್ದಾರೆ. ಈ ಎಲ್ಲ ವಿಚಿತ್ರ ಸನ್ನಿವೇಶಗಳ ನಡುವೆಯೇ ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಗೆ ಸಜ್ಜಾಗಿದೆ. ಸೆಪ್ಟೆಂಬರ್ 18ರಿಂದ ಅಕ್ಟೋಬರ್ 1ರವರೆಗೆ ಮೂರು ಹಂತಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ. ಮತ್ತೆ ಚುನಾಯಿತ ಸರ್ಕಾರ ಸ್ಥಾಪನೆ ನಿಟ್ಟಿನಲ್ಲಿ ಈ ಕ್ರಮ ಸ್ವಾಗತಾರ್ಹ. ಆದರೆ, ಉಗ್ರರು ಹಲವೆಡೆ ಅಭ್ಯರ್ಥಿಗಳಾಗಿ ಸ್ಪರ್ಧೆಗೆ ಇಳಿದಿದ್ದರೆ, ಮತ್ತೆ ಕೆಲವೆಡೆ ಬಹಿರಂಗವಾಗಿ ಚುನಾವಣಾ ಪ್ರಚಾರವನ್ನು ನಡೆಸುತ್ತಿರುವುದು ಆತಂಕಕಾರಿ ವಿದ್ಯಮಾನ. ಪ್ರತ್ಯೇಕತಾವಾದಿ ನಾಯಕರಂತೂ ಪಾಕಿಸ್ತಾನ ಪ್ರೇಮವನ್ನು ವ್ಯಕ್ತಪಡಿಸುತ್ತಿದ್ದು, ಈ ಕೇಂದ್ರಾಡಳಿತ ಪ್ರದೇಶವನ್ನು ಹಿಂದಿನ ಸಂಘರ್ಷ ಮತ್ತು ಬಿಕ್ಕಟ್ಟಿನ ದಿನಗಳತ್ತ ಕೊಂಡೊಯ್ಯುವ ಉದ್ದೇಶ ಹೊಂದಿದ್ದಾರೆ ಎಂಬ ಅನುಮಾನವನ್ನು ಪುಷ್ಟೀಕರಿಸುತ್ತಿದ್ದಾರೆ. ಸಂವಿಧಾನದ 370ನೇ ವಿಧಿಯ ಮರುಸ್ಥಾಪನೆ, ಪಾಕಿಸ್ತಾನದೊಂದಿಗೆ ಮಾತುಕತೆ ಆರಂಭದ ಕುರಿತು ಅವರು ಮಾತನಾಡುತ್ತಿರುವುದು ಕಳವಳ ಮೂಡಿಸಿದೆ. ಹಿಂದೆಲ್ಲ ಚುನಾವಣೆ ನಡೆದಾಗ ಪ್ರತ್ಯೇಕತಾವಾದಿಗಳ ಹಿಂಸೆ ವಿಕೋಪಕ್ಕೆ ತಲುಪುತ್ತಿತ್ತು. ಹೀಗಾಗಿ ಜನರು ಮತದಾನದಿಂದ ಹೆಚ್ಚಿನ ಪ್ರಮಾಣದಲ್ಲಿ ದೂರವೇ ಉಳಿಯುತ್ತಿದ್ದರು. ಸದ್ಯ ಕೇಂದ್ರ ಸರ್ಕಾರದ ಹದ್ದಿನ ಕಣ್ಣಿನ ಭದ್ರತಾ ಕ್ರಮಗಳಿಂದಾಗಿ ಹಿಂದಿನ ಹಿಂಸಾಚಾರ ಮರುಕಳಿಸುವ ಸಾಧ್ಯತೆ ಕಡಿಮೆ ಇದ್ದರೂ, ಮತ್ತೆ ಉಗ್ರರು ಹಾಗೂ ಪ್ರತ್ಯೇಕತಾವಾದಿಗಳು ಸಕ್ರಿಯವಾಗಿರುವುದು ಆತಂಕಕಾರಿ.

ಭದ್ರತೆಯ ದೃಷ್ಟಿಯಿಂದ ಜಮ್ಮು-ಕಾಶ್ಮೀರ ಸೂಕ್ಷ್ಮ ಪ್ರದೇಶ ಎಂಬುದು ಗೊತ್ತಿರುವಂಥದ್ದೇ. ಚುನಾವಣೆ, ಸರ್ಕಾರ ಸ್ಥಾಪನೆ ಮೂಲಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಮತ್ತು ಪ್ರಗತಿಯ ಪರ್ವ ಆರಂಭವಾಗಬೇಕು. ಆಗ ಮಾತ್ರ, ಕಳೆದ ಕೆಲವು ವರ್ಷಗಳಿಂದ ತೆಗೆದುಕೊಂಡಿರುವ ದಿಟ್ಟ ಕ್ರಮಗಳು, ಕಠಿಣ ನಿರ್ಧಾರಗಳು ಸಾರ್ಥಕವಾಗುತ್ತವೆ. ಜಮ್ಮು-ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಗಟ್ಟಿ ಸಂದೇಶ ಈ ಚುನಾವಣೆಯ ಮೂಲಕ ರವಾನೆ ಆಗಬೇಕೆ ಹೊರತು ಉಗ್ರರು, ಪ್ರತ್ಯೇಕತಾವಾದಿ ಶಕ್ತಿಗಳು ಮತ್ತೆ ತಲೆ ಎತ್ತುವಂತಾಗಬಾರದು. ಈ ಹಿನ್ನೆಲೆಯಲ್ಲಿ ಶಾಂತಿಸ್ಥಾಪನೆ ಸೇರಿದಂತೆ ಕಣಿವೆ ಪ್ರದೇಶದ ಹಿತದೃಷ್ಟಿಯಿಂದ ಹಂತಹಂತವಾಗಿ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ವಿಷಯದಲ್ಲಿ ರಾಜಕೀಯ ಮಾಡದೆ, ಜಮ್ಮು-ಕಾಶ್ಮೀರದ ಸುರಕ್ಷತೆ ಮುಖ್ಯ ಎಂಬುದನ್ನು ಅಲ್ಲಿನ ರಾಜಕೀಯ ಪಕ್ಷಗಳು ಅರ್ಥಮಾಡಿಕೊಳ್ಳಬೇಕು.

ಪಿಎಸ್​ಐ ಪರೀಕ್ಷೆ ಮುಂದೂಡಿಕೆ ಇಲ್ಲ, ಸೆ.22ಕ್ಕೆ ಫಿಕ್ಸ್: ಕೆಇಎ ಸ್ಪಷ್ಟನೆ

Share This Article

ಕೇವಲ 7 ತಿಂಗಳಲ್ಲಿ 114 ಕೆಜಿ ತೂಕ ಇಳಿಕೆ ಹೇಗೆ ಸಾಧ್ಯ? ವೈರಲ್​ ಸ್ಟಾರ್​ ಬಿಚ್ಚಿಟ್ಟ ರಹಸ್ಯವಿದು…

ನವದೆಹಲಿ: ಯೂಟ್ಯೂಬರ್ ನಿಕೊಕಾಡೊ ಅವಕಾಡೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಸ್ಟಾರ್ ಎಂದೇ ಪ್ರಸಿದ್ಧಿ ಪಡೆದಿದ್ದಾರೆ. ನಿಕೋಲಸ್…

ದಿನಕ್ಕೊಂದು ಬಾಳೆಹಣ್ಣು ಎನ್ನುವ ಹಾಗೆ 30 ದಿನ ಈ ಹಣ್ಣು ತಿಂದರೆ ಏನಾಗುತ್ತೆ ಗೊತ್ತಾ..?

 ಬೆಂಗಳೂರು: ಪ್ರತಿದಿನ ಬಾಳೆಹಣ್ಣು ತಿನ್ನಬೇಕು. ಇದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಮಾವು ಹಣ್ಣುಗಳ ರಾಜನಾಗಿರಬಹುದು ಆದರೆ…

ತಲೆಯಲ್ಲಿ ಎರಡು ಸುಳಿ ಇದ್ರೆ ಎರಡು ಮದ್ವೆ ಆಗ್ತಾರೆ! ನಿಜಕ್ಕೂ ಇದು ಸತ್ಯಾನಾ?

ಬೆಂಗಳೂರು:  ಪ್ರತಿಯೊಬ್ಬರ ತಲೆಯ ಮೇಲೆ ಸುಳಿಗಳಿರುವುದು ಸಾಮಾನ್ಯ. ಈ ಸುರುಳಿಗಳು ಹುಟ್ಟಿನಿಂದಲೇ ತಲೆಯ ಮೇಲೆ ಇರುತ್ತವೆ.…