ಸಂಪಾದಕೀಯ: ತಾರತಮ್ಯ ಸಲ್ಲದು

s

ಗಣೇಶ ಹಬ್ಬದ ಸಂದರ್ಭದಲ್ಲಿ ಧ್ವನಿವರ್ಧಕಗಳನ್ನು ಬಳಸುವುದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯಕಾರಿ ಎನ್ನುವುದಾದರೆ ಈದ್ ಮಿಲಾದ್ ಉನ್ನಬಿ ಮೆರವಣಿಗೆಯ ವೇಳೆಯಲ್ಲಿ ಬಳಸುವ ಧ್ವನಿವರ್ಧಕಗಳೂ ಅಪಾಯಕಾರಿಯಲ್ಲವೇ ಎಂದು ಬಾಂಬೆ ಹೈಕೋರ್ಟ್ ನೇರವಾಗಿ ಪ್ರಶ್ನಿಸಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಡಿಜೆ ಸೌಂಡ್ ಸಿಸ್ಟೆಮ್ ಬಳಕೆ, ಡಾನ್ಸ್, ಲೇಸರ್ ಲೈಟ್ ಪ್ರದರ್ಶನ ನಿಷೇಧಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ (ಪಿಐಎಲ್) ವಿಚಾರಣೆಯ ವೇಳೆ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರಿದ್ದ ಪೀಠ ಈ ಪ್ರಶ್ನೆಯನ್ನು ಮುಂದಿಟ್ಟಿದೆ. ಅನುಮತಿಸಲಾದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದ ಸದ್ದು ಮಾಡುವ ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡಬಾರದೆಂದು ಪೊಲೀಸರಿಗೆ ಮತ್ತು ಮಹಾನಗರಪಾಲಿಕೆಗೆ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಕಳೆದ ತಿಂಗಳಷ್ಟೇ ತಾವು ಗಣೇಶ ಹಬ್ಬದ ಪ್ರಯುಕ್ತ ಹೊರಡಿಸಿದ್ದ ಆದೇಶವನ್ನು ಗಮನಿಸುವಂತೆ ತಿಳಿಸಿತು. ‘ಶಬ್ದಮಾಲಿನ್ಯ ನಿಯಂತ್ರಣ ನಿಯಮಾವಳಿ 2000’ದಡಿ ಹಬ್ಬಗಳಲ್ಲಿ ಎಷ್ಟು ಡೆಸಿಬೆಲ್ ಸಾಮರ್ಥ್ಯದ ಧ್ವನಿವರ್ಧಕಗಳನ್ನು ಬಳಸಬೇಕೆಂಬುದಕ್ಕೆ ಸ್ಪಷ್ಟವಾದ ಮಾರ್ಗಸೂಚಿಗಳಿವೆ. ಅದಕ್ಕಿಂತ ಹೆಚ್ಚು ಡೆಸಿಬೆಲ್ ಶಬ್ದ ಹೊರಡಿಸುವ ಧ್ವನಿವರ್ಧಕಗಳನ್ನು ಮುಲಾಜಿಲ್ಲದೆ ನಿಷೇಧಿಸಬೇಕೆಂದು ಹೇಳಿದ್ದನ್ನು ನ್ಯಾಯಪೀಠ ನೆನಪಿಸಿತು. ಈ ಸಂದರ್ಭದಲ್ಲಿ ವಕೀಲ ಓವೈಸ್ ಪೇಚ್ಕರ್ ಅವರು ‘‘ಆ ಆದೇಶದಲ್ಲಿ ಹಬ್ಬಗಳು ಎಂಬ ಪದದ ಜತೆ ಈದ್ ಎಂಬ ಪದವನ್ನೂ ಸೇರಿಸಬೇಕು’ ಎಂದು ನ್ಯಾಯಪೀಠಕ್ಕೆ ಸಲಹೆ ನೀಡಿದರು. ‘‘ಗಣೇಶ ಚತುರ್ಥಿಗೆ ಅಪಾಯಕಾರಿಯಾದದ್ದು ಈದ್​ಗೂ ಅಪಾಯಕಾರಿಯೇ ಅಲ್ಲವೇ’ ಎಂದು ನ್ಯಾಯಾಧೀಶರು ಪ್ರಶ್ನಿಸಿದರು.

ಪ್ರತಿ ಬಾರಿ ಹಬ್ಬ ಬಂದಾಗಲೂ ಧ್ವನಿವರ್ಧಕಗಳ ಬಳಕೆಯ ಪ್ರಶ್ನೆ ಎದುರಾಗುತ್ತದೆ. ಹಲವಾರು ಜನ ನ್ಯಾಯಾಲಯದ ಮೊರೆ ಹೋಗುತ್ತಾರೆ. ಇದು ಮುಂಬೈಗೆ ಸೀಮಿತವಾದ ಸಮಸ್ಯೆ ಅಲ್ಲ. ಬೆಂಗಳೂರು ಸೇರಿದಂತೆ ದೇಶದ ಎಲ್ಲ ನಗರ-ಪಟ್ಟಣ ಪ್ರದೇಶಗಳಲ್ಲಿಯೂ ಈ ಸಮಸ್ಯೆ ಇದೆ. ಬಹುತೇಕ ಎಲ್ಲ ಸ್ಥಳೀಯ ಸಂಸ್ಥೆಗಳೂ ಈಗಾಗಲೇ ಧ್ವನಿವರ್ಧಕಗಳ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಕಾನೂನು-ನಿಯಮಗಳನ್ನು ರೂಪಿಸಿ ಜಾರಿಗೊಳಿಸಿವೆ. ಆದರೆ ಅವುಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಎಡವಟ್ಟುಗಳಾಗುತ್ತಿವೆ. ಕೆಲವರಿಗೆ ಅನುಮತಿಸುವುದು, ಇನ್ನು ಕೆಲವರಿಗೆ ಅನುಮತಿ ನೀಡದಿರುವುದು ಕಂಡುಬಂದಾಗ ವಿನಾಕಾರಣ ಜಗಳ-ಗಲಭೆಗಳಿಗೆ ಅವಕಾಶವಾಗುತ್ತಿದೆ. ಅದರ ಬದಲು, ಇಡೀ ದೇಶಕ್ಕೆ ಅನ್ವಯವಾಗುವಂತೆ ಒಂದು ನಿಯಮಾವಳಿ ರೂಪಿಸಬೇಕು. ಅದನ್ನು ಎಲ್ಲ ರಾಜ್ಯ ಸರ್ಕಾರಗಳೂ ಒಪ್ಪಿಕೊಂಡು ಅನುಷ್ಠಾನಕ್ಕೆ ತರಬೇಕು. ತಳಮಟ್ಟದಲ್ಲಿ ಇದನ್ನು ಜಾರಿಗೊಳಿಸುವಲ್ಲಿ ಪೊಲೀಸರು ಮತ್ತು ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ನಿರ್ಲಕ್ಷ್ಯ ಅಥವಾ ತಾರತಮ್ಯ ತೋರಿದರೆ ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾಯ್ದೆಯಲ್ಲಿ ಅವಕಾಶ ಮಾಡಬೇಕು. ಸಾರ್ವಜನಿಕರು ಕೂಡ, ಜಾತಿ-ಧರ್ಮ ಭೇದ ಮೀರಿ, ಎಲ್ಲರೂ ಈ ಸಂಬಂಧದ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು. ಇಲ್ಲದಿದ್ದರೆ ವಿನಾಕಾರಣ ವಯೋವೃದ್ಧರಿಗೆ, ರೋಗಿಗಳಿಗೆ, ಮಕ್ಕಳಿಗೆ, ಪರೀಕ್ಷೆ ಬರೆಯುವ ವಿದ್ಯಾರ್ಥಿ ಸಮುದಾಯಕ್ಕೆ ತೊಂದರೆಯಾಗುತ್ತದೆ.

ಲೈಂಗಿಕ ಕಿರುಕುಳ ಪ್ರಕರಣ: ನಿರ್ದೇಶಕ ವಿ.ಕೆ ಪ್ರಕಾಶ್​ಗೆ ಜಾಮೀನು ಮಂಜೂರು

Share This Article

Bathing : ನೀರಿನಲ್ಲಿ ಇವುಗಳನ್ನು ಬೆರೆಸಿ ಸ್ನಾನ ಮಾಡಿದ್ರೆ ಸಾಕು ಅದೃಷ್ಟ ಖುಲಾಯಿಸುತ್ತದೆ…

ಬೆಂಗಳೂರು: ಪ್ರತಿದಿನ ಸ್ನಾನ ( Bathing ) ಮಾಡುವ ಅಭ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ರೂಢಿಸಿಕೊಂಡಿರುತ್ತಾರೆ. ನೀವು…

ದೀಪಾವಳಿಗೆ ಮನೆ ಸ್ವಚ್ಛ ಮಾಡ್ತಾ ಇದ್ದೀರಾ? ಮನೆಯಲ್ಲಿ cockroach ಇದ್ರೆ ಹೀಗೆ ಮಾಡಿ…

ಬೆಂಗಳೂರು: ಅನೇಕ ಜನರು ತಮ್ಮ ಮನೆಯಲ್ಲಿ ಜಿರಳೆಗಳ ( cockroach )  ಸಮಸ್ಯೆಯನ್ನು ಎದುರಿಸುತ್ತಾರೆ. ಅವುಗಳನ್ನು…

Crab Sukka : ಭಾನುವಾರದ ಬಾಡೂಟಕ್ಕೆ ಮಾಡಿ ರುಚಿಯಾದ ಏಡಿ ಸುಕ್ಕ..

ಬೆಂಗಳೂರು: ವಾರದ ಕೊನೆಯಲ್ಲಿ ಮಧ್ಯಾಹ್ನದ ಸಮಯಕ್ಕೆ ರುಚಿಯಾದ ಅಡುಗೆ ಏನಾದರು ಮಾಡುವ ಪ್ಲಾನ್ (Plan)​ ಹಾಕಿಕೊಂಡಿದ್ದೀರಾ?ಆದಿತ್ಯವಾರದಂದು…