More

    ಸರ್ಕಾರ ಎಚ್ಚೆತ್ತುಕೊಳ್ಳಲಿ: ಬರ ಪರಿಹಾರದ ನಿಟ್ಟಿನಲ್ಲಿ ಸೂಕ್ತ ಕ್ರಮ ಅಗತ್ಯ

    ಭೀಕರ ಬರದ ಸಂಕಷ್ಟ ಈ ಬಾರಿ ರಾಜ್ಯವನ್ನು ತೀವ್ರವಾಗಿ ಕಾಡುತ್ತಿದೆ. ರೈತರ ಸ್ಥಿತಿ ಶೋಚನೀಯವಾಗಿದೆ. ನದಿಗಳು ಬಹುತೇಕ ಬತ್ತಿ ಹೋಗಿದ್ದು, ಜಲಾಶಯಗಳ ನೀರಿನಮಟ್ಟ ಕುಸಿಯಲಾರಂಭಿಸಿದೆ. ಅಳಿದುಳಿದ ಬೆಳೆ ರಕ್ಷಿಸಿಕೊಳ್ಳಲು ವಿದ್ಯುತ್ತಿಲ್ಲ್ಲ ಕುಡಿಯಲು ನೀರಿಲ್ಲ, ಕೃಷಿ ಕೂಲಿಕಾರರ ಕೈಗೆ ಕೆಲಸವಿಲ್ಲ. ದನ-ಕರಗಳುಗಳಿಗೆ ಮೇವಿನ ಅಭಾವ ತಲೆದೋರಿದೆ. ಬೆಲೆಗಳು ದುಬಾರಿಯಾಗಿವೆ. ಇಂಥ ಸ್ಥಿತಿಯಲ್ಲಿ, ಬರ ಪರಿಹಾರದ ಕ್ರಮಗಳನ್ನು ಕೈಗೊಳ್ಳಬೇಕಾದ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಆರೋಪ ಹೊರಿಸುತ್ತ, ಕೇಂದ್ರದ ನೆರವಿಗೆ ಕಾಯುತ್ತ ಕುಳಿತಿದೆ. ಇದರಿಂದ, ಸಮಸ್ಯೆಯ ತೀವ್ರತೆ ಮತ್ತಷ್ಟು ಹೆಚ್ಚಿದೆ. ಹಾಗಾಗಿ, ಬರ ಪರಿಸ್ಥಿತಿಯ ಸಮೀಕ್ಷೆ ನಡೆಸಲು ಪ್ರತಿಪಕ್ಷ ಬಿಜೆಪಿಯ 17 ತಂಡಗಳು ನವೆಂಬರ್ 3ರಿಂದ 10ರವರೆಗೆ ರಾಜ್ಯದ 33 ಸಂಘಟನಾ ಜಿಲ್ಲೆಗಳಲ್ಲೂ ಪ್ರವಾಸ ಕೈಗೊಳ್ಳಲಿವೆ. ಇದರಿಂದ ವಾಸ್ತವ ಸ್ಥಿತಿ ಅರಿಯಲು ಸಹಾಯವಾಗಬಲ್ಲದು.

    ಈ ಅಧ್ಯಯನ ಕಾಲದಲ್ಲಿ ಬೆಳೆನಷ್ಟ, ರೈತರ ಸಂಕಷ್ಟ, ಕೃಷಿ ಕೂಲಿಕಾರರ ತಾಪತ್ರಯ, ಜನಸಾಮಾನ್ಯರ ಬವಣೆಯನ್ನು ಆಲಿಸಲಿರುವ ತಂಡಗಳು, ರಾಜ್ಯ ಸರ್ಕಾರದ ಪರಿಹಾರ ಕ್ರಮಗಳನ್ನು ಪರಾಮಶಿಸಿ, ವಿಸõತ ಮಾಹಿತಿ ಸಂಗ್ರಹಿಸಲಿವೆ. ಆದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರು ಈಗಾಗಲೇ ತಮ್ಮ ಕ್ಷೇತ್ರಗಳಲ್ಲಿ, ಸ್ವಂತ ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ, ಸರ್ಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಇದನ್ನು ಬಿಟ್ಟು, ವಿದೇಶ ಪ್ರವಾಸ, ಬಣಗಳ ಜಗಳ, ಮತ್ತಿತರ ರಾಜಕೀಯ ಚಟುವಟಿಕೆಗಳಲ್ಲೇ ಅವರು ವ್ಯಸ್ತವಾಗಿರುವುದು ವಿಪರ್ಯಾಸ.

    ಎಲ್ಲ ಜನಪ್ರತಿನಿಧಿಗಳಿಗೂ ಅವರದ್ದೇ ಆದ ಜವಾಬ್ದಾರಿ ಇರುತ್ತದೆ. ಅದರಲ್ಲೂ, ಬರದಂಥ ಸಂಕಷ್ಟದ ಸಮಯದಲ್ಲಿ ಶಾಸಕರು, ಸಂಸದರು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ. ಜನರ ಸಂಕಷ್ಟಗಳಿಗೆ ಸ್ಪಂದಿಸಬೇಕಾದ ಸಮಯದಲ್ಲೂ, ರಾಜಕೀಯ ಚಟುವಟಿಕೆಗಳಲ್ಲೇ ವ್ಯಸ್ತರಾದರೆ ಕ್ಷೇತ್ರ ಮತ್ತು ಅಲ್ಲಿನ ಜನರು ಯಾರ ಬಳಿ ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಬೇಕು? ತಡವಾಗಿಯಾದರೂ, ಬಿಜೆಪಿ ಪ್ರತಿಪಕ್ಷದ ಜವಾಬ್ದಾರಿಯನ್ನು ನಿಭಾಯಿಸಲು ಹೊರಟಿದೆ. ಇನ್ನು ಎಚ್ಚೆತ್ತುಕೊಳ್ಳಬೇಕಾಗಿರುವುದು ಆಡಳಿತ ಪಕ್ಷದ ಶಾಸಕರು. ಎಲ್ಲದಕ್ಕೂ ಕೇಂದ್ರದತ್ತ ಬೊಟ್ಟು ಮಾಡಿ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂಬ ವಾಸ್ತವವನ್ನು ಮನಗಾಣಬೇಕು. ತಾತ್ಕಾಲಿಕವಾಗಿ, ತುರ್ತು ಕ್ರಮವಾಗಿ ಏನೆಲ್ಲ ಮಾಡಬಹುದು, ರೈತರಿಗೆ ಹೇಗೆ ನೆರವಾಗಬಹುದು ಎಂಬುದರ ಬಗ್ಗೆ ಸ್ಪಷ್ಟ ಯೋಜನೆ ರೂಪಿಸಿ, ಅನುಷ್ಠಾನಕ್ಕೆ ತರಬೇಕು. ಪ್ರತಿಪಕ್ಷ ಬಿಜೆಪಿ ಕೂಡ ಕೇಂದ್ರದಿಂದ ಹೆಚ್ಚಿನ ನೆರವು ರಾಜ್ಯಕ್ಕೆ ಸಿಗುವಂತಾಗಲು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು.

    ಇನ್ನೊಂದೆರಡು ವರ್ಷ ಅತಿಯಾಗಿ ಕೆಲಸ ಮಾಡಬೇಡಿ: ಆರೋಗ್ಯ ಸಚಿವರ ಸಲಹೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts