ಸಂಪಾದಕೀಯ: ಮಕ್ಕಳ ಆರೋಗ್ಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಅಗತ್ಯ

ರಾಜ್ಯದಲ್ಲಿ ಕರೊನಾ ಎರಡನೇ ಅಲೆಯ ಅಬ್ಬರ ತಗ್ಗಿದೆ. ಕಳೆದ ಒಂದು ವರ್ಷಕ್ಕೂ ಅಧಿಕ ಅವಧಿಯಿಂದ ಆನ್​ಲೈನ್ ತರಗತಿಗಳಿಗೆ ಸೀಮಿತವಾಗಿರುವ ಮಕ್ಕಳು ಈ ಕಲಿಕಾ ಹಂತದಲ್ಲಿ ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಅಲ್ಲದೆ, ಆನ್​ಲೈನ್ ತರಗತಿಗಳಿಂದ ಕೆಲ ಅಡ್ಡಪರಿಣಾಮಗಳಾಗಿದ್ದು, ಮಕ್ಕಳು ಆರೋಗ್ಯ ಸಮಸ್ಯೆಯನ್ನು ಅನುಭವಿಸಿದ್ದಿದೆ. ಭೌತಿಕ ತರಗತಿಗಳನ್ನು ಆರಂಭಿಸುವಂಥ ಸ್ಥಿತಿ ಇಲ್ಲದ್ದರಿಂದ ಅನಿವಾರ್ಯವಾಗಿ ಆನ್​ಲೈನ್ ಕಲಿಕೆಗೆ ಹೊಂದಿಕೊಳ್ಳಬೇಕಿತ್ತು. ದೀರ್ಘಾವಧಿಯಿಂದ ಶಾಲೆಗಳು ಇಲ್ಲದ್ದರಿಂದ ಬಾಲಕಾರ್ವಿುಕ ಪದ್ಧತಿ, ಬಾಲ್ಯವಿವಾಹದಂಥ ಪಿಡುಗು ಹೆಚ್ಚುತ್ತಿರುವ ಬಗ್ಗೆ ಡಾ.ದೇವಿಶೆಟ್ಟಿ ನೇತೖತ್ವದ ಕಾರ್ಯಪಡೆ ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ಕಳವಳ … Continue reading ಸಂಪಾದಕೀಯ: ಮಕ್ಕಳ ಆರೋಗ್ಯ ರಕ್ಷಣೆಗೆ ಸೂಕ್ತ ವ್ಯವಸ್ಥೆ ಅಗತ್ಯ