21 C
Bengaluru
Thursday, January 23, 2020

ರಾಷ್ಟ್ರಹಿತ ಮುಖ್ಯವಾಗಲಿ

Latest News

ಮೊಕದ್ದಮೆ ಹಿಂಪಡೆಯಲು ಒತ್ತಾಯ

ಮೈಸೂರು: ಮಾನಸಗಂಗೋತ್ರಿಯಲ್ಲಿ ಎನ್‌ಆರ್‌ಸಿ, ಸಿಎಎ ವಿರೋಧಿಸಿ ನಡೆದ ಪ್ರತಿಭಟನೆ ಸಂದರ್ಭ ‘ಫ್ರೀ ಕಾಶ್ಮೀರ’ ಫಲಕ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೇಲೆ ಹೂಡಿರುವ ಮೊಕದ್ದಮೆ...

ವಿದ್ಯಾಭ್ಯಾಸದ ಸಂದರ್ಭ ಪ್ರತಿಭಟನೆ ಬೇಡ

ಮೈಸೂರು: ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ವಿಶ್ವವಿದ್ಯಾಲಯಗಳ ಒಳಗೆ ಬಗೆಹರಿಸಿಕೊಳ್ಳಬೇಕೇ ಹೊರತು, ವಿದ್ಯಾಭ್ಯಾಸದ ಸಂದರ್ಭದಲ್ಲಿ ಪ್ರತಿಭಟನೆಗಳಿಗೆ ಮುಂದಾಗಬಾರದು ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್...

ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಗೊಳಿಸಿ

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರಿಗೆ ಶೇ. 50ರಷ್ಟು ಮೀಸಲಾತಿ ಜಾರಿಗೊಳಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಕರ್ನಾಟಕ ಪ್ರದೇಶ ಮಹಿಳಾ...

ಕೇಂದ್ರದ ಬಿಜೆಪಿ ಸರ್ಕಾರ ಬಿದ್ದ ದಿನ ಪೌರತ್ವ ತಿದ್ದುಪಡಿ ಕಾಯ್ದೆಯೂ ರದ್ದಾಗುತ್ತದೆ: ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​ ಗೋಪಿನಾಥನ್​

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಇಡೀ ರಾಷ್ಟ್ರಕ್ಕೆ ಸಂಬಂಧಿಸಿದ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಹೋರಾಟ ತೀವ್ರಗೊಂಡಿದೆ ಎಂದು ನಿವೃತ್ತ ಐಎಎಸ್​ ಅಧಿಕಾರಿ ಕಣ್ಣನ್​...

ಕಾಲೇಜ್ ವಿದ್ಯಾರ್ಥಿಗಳ ಮೇಲೆ ಹೆಜ್ಜೇನು ದಾಳಿ

ಹಾವೇರಿ: ಇಲ್ಲಿನ ಪಿಬಿ ರಸ್ತೆಯಲ್ಲಿರುವ ಜಿಎಚ್ ಕಾಲೇಜ್​ನಲ್ಲಿ ಹೆಜ್ಜೇನು ದಾಳಿಯಿಂದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯಾಹ್ನ ಸಂಭವಿಸಿದೆ.

ಸಂಸತ್ತಿನಲ್ಲಿ ಯಾವುದೇ ಮಸೂದೆ ಬಂದರೂ, ಅವುಗಳ ಬಗ್ಗೆ ವಿಸ್ತೃ, ಆರೋಗ್ಯಕರ ಚರ್ಚೆ ನಡೆಯಬೇಕು, ಆ ಮೂಲಕ ಸುಧಾರಣೆಯ ಅಂಶಗಳು ಪ್ರಜಾತಂತ್ರದ ಬೇರುಗಳನ್ನು ಗಟ್ಟಿಗೊಳಿಸಬೇಕು. ಅದರಲ್ಲೂ, ಆಂತರಿಕ ಭದ್ರತೆ, ಸುರಕ್ಷೆಯ ವಿಚಾರ ಬಂದಾಗ ಹೆಚ್ಚಿನ ಜಾಗ್ರತೆ ಅಗತ್ಯ. ಆದರೆ, ಪ್ರತೀ ವಿಷಯವನ್ನೂ ರಾಜಕೀಯದ ಕನ್ನಡಕದಿಂದ, ಮತಬ್ಯಾಂಕಿನ ಲಾಭದಿಂದ ಅಳೆದು ತೂಗುವ ಪ್ರವೃತ್ತಿ ಸರಿಯಲ್ಲ.

ಇದು ದೇಶದ ಸಾಮಾಜಿಕ ಸ್ವಾಸ್ಥ್ಯಕ್ಕೆ ಪೂರಕವಾದುದ್ದಲ್ಲ. ವಿರೋಧಗಳು ವಿಷಯಾಧಾರಿತವಾಗಿ ಇರಬೇಕು ಮತ್ತು ಅವು ಪ್ರಭುತ್ವದ ಕೊರತೆಗಳನ್ನು ಸಮರ್ಥವಾಗಿ ಗುರುತಿಸಿ, ಮಸೂದೆ ಶಕ್ತಿಶಾಲಿಯಾಗುವಂತೆ ಮಾಡಬೇಕು. ಈ ವಿವೇಚನೆ ಮತ್ತು ವಿವೇಕ ಎಲ್ಲ ರಾಜಕೀಯ ಪಕ್ಷಗಳಲ್ಲಿ ಅಗತ್ಯ. ಪ್ರಸಕ್ತ ದೇಶಾದ್ಯಂತ ‘ಪೌರತ್ವ ತಿದ್ದುಪಡಿ ವಿಧೇಯಕ-2019’ ಕುರಿತ ಚರ್ಚೆ ಜೋರಾಗಿ ಸಾಗಿದೆ. ಪ್ರತಿಪಕ್ಷಗಳ ತೀವ್ರ ವಿರೋಧದ ಮಧ್ಯೆ ಲೋಕಸಭೆ ಸೋಮವಾರ ಮಸೂದೆಯನ್ನು ಅಂಗೀಕರಿಸಿದ್ದು, ಬುಧವಾರ ರಾಜ್ಯಸಭೆಯಲ್ಲಿ ಮಂಡನೆ ಆಗಲಿದೆ.

2014 ಡಿಸೆಂಬರ್ 31ರ ಮುನ್ನ ಪಾಕಿಸ್ತಾನ, ಬಾಂಗ್ಲಾ ದೇಶ, ಅಫ್ಘಾನಿಸ್ತಾನದಲ್ಲಿ ಧಾರ್ವಿುಕ ಶೋಷಣೆಗೆ ಒಳಗಾಗಿ ಭಾರತಕ್ಕೆ ವಲಸೆ ಬಂದಿರುವ ಹಿಂದೂ, ಸಿಖ್, ಜೈನ್, ಬೌದ್ಧ, ಪಾರ್ಸಿ ಮತ್ತು ಕ್ರೖೆಸ್ತರಿಗೆ ಭಾರತದ ಪೌರತ್ವ ಪಡೆಯಲು ಈ ಮಸೂದೆ ಅವಕಾಶ ನೀಡುತ್ತದೆ. ದೇಶದ ಎಲ್ಲ ರಾಜ್ಯಗಳ ಆಂತರಿಕ ಪರಿಸ್ಥಿತಿ ಮತ್ತು ಧಾರ್ವಿುಕ ಶೋಷಣೆಗೆ ಒಳಗಾಗಿ ಭಾರತಕ್ಕೆ ಬಂದ ವಲಸಿಗರ ಪಾಡು ಇದನ್ನೆಲ್ಲ ಅವಲೋಕಿಸಿಯೇ ಪ್ರಸಕ್ತ ಮಸೂದೆ ರೂಪಿಸಲಾಗಿದೆ. ಇದನ್ನು ಕೆಲ ಪಕ್ಷಗಳು ರಾಷ್ಟ್ರೀಯ ಪೌರತ್ವ ನೋಂದಣಿಗೆ (ಎನ್​ಆರ್​ಸಿ) ಜೋಡಿಸಿ, ಮಾತನಾಡುತ್ತಿವೆ. ಆದರೆ, ಎರಡೂ ಪ್ರಕ್ರಿಯೆ ಬೇರೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ರೋಹಿಂಗ್ಯಾಗಳಿಗೆ ಭಾರತದಲ್ಲಿ ಜಾಗ ನೀಡದಿರುವುದಕ್ಕೆ ಪ್ರತಿಪಕ್ಷಗಳು ಆಕ್ಷೇಪ ಎತ್ತಿವೆ. ದೇಶದ ಆಂತರಿಕ ಭದ್ರತೆಗೆ ಕುತ್ತು ತರುವಂಥ ವಲಸಿಗರನ್ನು ಯಾವುದೇ ರಾಷ್ಟ್ರ ಸಹಿಸಿಕೊಳ್ಳುವುದಿಲ್ಲ. ಇದು ವಾಸ್ತವಿಕ ಮತ್ತು ಅತ್ಯಂತ ಸರಳ ಸತ್ಯ. ಜಗತ್ತಿನ ಹಲವಾರು ದೇಶಗಳು ಇದೇ ಹಾದಿಯಲ್ಲಿ ಸಾಗಿವೆ. ಅಲ್ಲಿನ ಬೆಳವಣಿಗೆಗಳನ್ನು ಪ್ರತಿಪಕ್ಷಗಳು ಸೂಕ್ಷ್ಮವಾಗಿ ಗಮನಿಸಿದರೆ ವಾಸ್ತವ ಗೋಚರಿಸಬಹುದೇನೋ.

ರೋಹಿಂಗ್ಯಾಗಳಿಗೆ ನಾಗರಿಕತ್ವ ನೀಡದೆ ಇರಲು ನಿಖರ ಕಾರಣಗಳಿವೆ ಮತ್ತು ಭದ್ರತೆಗೆ ಧಕ್ಕೆ ಆಗಬಾರದೆಂಬ ಕಳಕಳಿಯಿದೆ. ಈ ಮೂಲೋದ್ದೇಶವನ್ನು ಮರೆತು ಇಡೀ ಪ್ರಕರಣಕ್ಕೆ ಧರ್ಮದ ಆಯಾಮ ನೀಡುವುದು, ತಾರತಮ್ಯದ ಆರೋಪ ಮಾಡುವುದು ಸೂಕ್ತವಲ್ಲ. ರಚನಾತ್ಮಕವಾಗಿ ಸಲಹೆ ನೀಡಲು ಖಂಡಿತವಾಗಿಯೂ ಪ್ರತಿಪಕ್ಷಗಳಿಗೆ ಅಧಿಕಾರವಿದೆ. ಮಸೂದೆಯಲ್ಲಿ ನ್ಯೂನತೆಗಳಿದ್ದರೆ ಅವುಗಳನ್ನು ತೋರಿಸಿ, ಸುಧಾರಣೆಗೆ ಆಗ್ರಹಿಸಲಿ. ಆದರೆ, ಭಾವೋದ್ವೇಗಕ್ಕೆ ಒಳಗಾಗಿ ಮಸೂದೆಯನ್ನೇ ಹರಿದು ಹಾಕುವ, ದೇಶವಿರೋಧಿ ಎಂದು ಹೀಗಳೆಯುವ ಪ್ರವೃತ್ತಿ ಯಾರಿಗೂ ಶೋಭೆ ತರುವಂಥದ್ದಲ್ಲ.

ಎಲ್ಲ ಪ್ರಕರಣ, ಮಸೂದೆಗಳನ್ನು ಒಂದೇ ತಕ್ಕಡಿಯಲ್ಲಿಟ್ಟು ನೋಡಲಾಗದು. ಭದ್ರತೆ ವಿಷಯದಲ್ಲಿ ರಾಜಿಗೆ ಅವಕಾಶವಿಲ್ಲ. ಹಾಗಾಗಿ, ಕೇವಲ ವಿರೋಧಕ್ಕಾಗಿ ವಿರೋಧ ಮಾಡಬೇಕು ಎಂಬ ಭಾವನೆ ಬದಿಗಿಟ್ಟು, ಪ್ರತಿಪಕ್ಷಗಳು ವಾಸ್ತವ ಅರಿತುಕೊಂಡು ಕಾರ್ಯನಿರ್ವಹಿಸಲಿ. ಮುಖ್ಯವಾಗಿ, ಪ್ರಸಕ್ತ ಮಸೂದೆಯ ಅನುಕೂಲಗಳು ಏನು ಎಂದು ತಿಳಿದುಕೊಂಡರೆ ವಿರೋಧ ಮಾಡಲು ಕಾರಣಗಳಿಲ್ಲ ಎಂಬುದು ತಿಳಿಯಬಹುದು.

ವಿಡಿಯೋ ನ್ಯೂಸ್

VIDEO: ಮಾವುತನ ಊಟದ ಎಲೆಯಿಂದ ತುತ್ತು ಅನ್ನ ತಿಂದು, ನೆಟ್ಟಿಗರ...

ತಿರುವನಂತಪುರ: ಆನೆಗಳ ಆಟ, ದಾಳಿ, ಮರ ಹತ್ತುವುದು ಹೀಗೆ ಹಲವು ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಆದರೆ ಈಗ ವೈರಲ್​ ಆಗಿರುವ ಆನೆಯ ವಿಡಿಯೋ ಸಾಮಾಜಿಕ ಬಳಕೆದಾರರ ಮನಸ್ಸು ಗೆದ್ದಿದೆ. ಹಸಿದ...

VIDEO| ರಾಷ್ಟ್ರಪತಿ ರಾಮನಾಥ್​ ಕೋವಿಂದ್​ರಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ...

ನವದೆಹಲಿ: ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಇಂದು ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ...

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...