ಚಂದನವನಕ್ಕೆ ಬಂದ ಎಡಿನ್ ರೋಸ್: ತೆಲುಗಿನ ‘ರಾವಣಾಸುರ’ ಖ್ಯಾತಿಯ ನಟಿ

ಬೆಂಗಳೂರು: ಕನ್ನಡ ಸಿನಿಮಾಗಳಿಗೆ ಬೇರೆ ಭಾಷೆಯ ನಟಿಯರು ಆಯ್ಕೆಯಾಗುವುದು ಇದೇ ಮೊದಲಲ್ಲ. ಪ್ಯಾನ್ ಇಂಡಿಯಾ ಟ್ರೆಂಡ್ ಶುರುವಾದಾಗಿನಿಂದ ಹೆಚ್ಚು ಬೇರೆ ಭಾಷೆಗಳ ಹಿರೋಯಿನ್‌ಗಳ ಆಯ್ಕೆಗೆ ಮುಂದಾಗುತ್ತಾರೆ. ಈ ಸಾಲಿಗೆ ದುಬೈ ಮೂಲದ ನಟಿ ಎಡಿನ್ ರೋಸ್ ಹೊಸ ಸೇರ್ಪಡೆ. ಕನ್ನಡದ ಇನ್ನೂ ಹೆಸರಿಡದ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ಎಡಿನ್ ರೋಸ್ ಆಯ್ಕೆಯಾಗಿದ್ದಾರೆ. ಈ ಮೂಲಕ ಚಂದನವನಕ್ಕೆ ಡೆಬ್ಯೂ ಆಗಿರುವ ತಮ್ಮ ಜರ್ನಿ ಕುರಿತು ಖುಷಿ ಹಂಚಿಕೊಂಡಿದ್ದಾರೆ. ತೆಲುಗಿನ ‘ರಾವಣಾಸುರ’ ಬಳಿಕ ತಮಿಳಿನ ವ್ನಿೇಶ್ ಶಿವನ್ ನಿರ್ದೇಶನದ ‘ಲವ್ ಇನ್ಶೂರೆನ್ಸ್ ಕಂಪನಿ’ (ಎಲ್‌ಐಕೆ) ಎಂಬ ಚಿತ್ರದಲ್ಲಿ ಎರಡನೇ ನಟಿಯಾಗಿದ್ದೇನೆ. ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ನನ್ನ ಮೂರನೇ ಪ್ರಾಜೆಕ್ಟ್ ಕನ್ನಡ ಸಿನಿಮಾವಾಗಿದೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ.

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ: ನಿರ್ದೇಶಕ ಆರ್ಯನ್ ಆ್ಯಕ್ಷನ್-ಕಟ್ ಹೇಳುತ್ತಿರುವ ಇನ್ನು ಹೆಸರಡಿದ ಕನ್ನಡದ ಪ್ಯಾನ್ ಇಂಡಿಯಾ ಚಿತ್ರಕ್ಕೆ ಎಡಿನ್ ರೋಸ್ ನಾಯಕಿಯಾಗಿದ್ದಾರೆ. ಚಿತ್ರದ ಟೈಟಲ್ ಹಾಗೂ ತಾರಾಗಣದ ಬಗ್ಗೆ ಯಾವುದೇ ರಿವೀಲ್ ಮಾಡುವಂತಿಲ್ಲ ಎನ್ನುವ ಎಡಿನ್, ‘ಆಕ್ಟೋಬರ್-ನವೆಂಬರ್‌ನಿಂದ ಶೂಟಿಂಗ್ ಆರಂಭವಾಗಲಿದೆ. ಬಹುನಿರೀಕ್ಷಿತ ಪ್ರಾಜೆಕ್ಟ್ ಇದಾಗಲಿದೆ’ ಎನ್ನುತ್ತಾರೆ. ಜತೆಗೆ ತೆಲುಗು, ತಮಿಳು ಸಿನಿಮಾಗಳು ಲೈನಪ್‌ನಲ್ಲಿವೆ. ಶ್ರೀಲಂಕಾ ಅಂತಾರಾಷ್ಟ್ರೀಯ ಸಿನಿಮಾವೊಂದರಲ್ಲಿ ಎಡಿನ್ ನಟಿಸುತ್ತಿದ್ದು, ಮುಂದಿನ ತಿಂಗಳಿನಿಂದ ಆ ಚಿತ್ರದಲ್ಲಿ ಬಿಜಿಯಾಗಲಿದ್ದಾರೆ.

ಚಂದನವನಕ್ಕೆ ಬಂದ ಎಡಿನ್ ರೋಸ್: ತೆಲುಗಿನ ‘ರಾವಣಾಸುರ’ ಖ್ಯಾತಿಯ ನಟಿ

ಕನ್ನಡದ ನಂಟು: ನಟಿ ಎಡಿನ್ ರೋಸ್ ಹುಟ್ಟಿ, ಬೆಳೆದಿದ್ದು ದುಬೈನಲ್ಲಾದರೂ ಇವರಿಗೆ ಕನ್ನಡದ ನಂಟಿದೆ. ಎಡಿನ್ ತಾಯಿ ಮೂಲತಃ ಮಂಗಳೂರಿನವರು. ತಂದೆ ತಮಿಳುನಾಡಿನವರು. ಈ ಬಗ್ಗೆ ಎಡಿನ್, ‘ನಾನು ಹುಟ್ಟಿದ್ದು ದುಬೈನಲ್ಲಾದರೂ, ನಂಗೆ ದಕ್ಷಿಣ ಭಾರತದ ನಂಟಿದೆ. ತಾಯಿ ಮಂಗಳೂರಿನವರು. ಹೀಗಾಗಿ ಕನ್ನಡದಲ್ಲಿ ಅಭಿನಯಿಸಲು ನಾನು ಉತ್ಸುಕಳಾಗಿದ್ದೇನೆ. ‘ಕೆಜಿಎ್’, ‘ಕಾಂತಾರ’ ಅಭೂತಪೂರ್ವ ಯಶಸ್ಸಿನ ಬಳಿಕ ಕನ್ನಡದತ್ತ ಬೇರೆ ಭಾಷೆಯವರು ತಿರುಗಿ ನೋಡುತ್ತಿದ್ದಾರೆ. ಈಗ ನಾನು ಈ ಚಿತ್ರರಂಗದ ಭಾಗವಾಗುತ್ತಿರುವುದು ಖುಷಿ ನೀಡಿದೆ. ಸದ್ಯ ನಾನು ಕನ್ನಡ ಕಲಿಯುತ್ತೇನೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲೇ ಮಾತನಾಡುವೆ’ ಎಂದು ಭರವಸೆ ವ್ಯಕ್ತಪಡಿಸುತ್ತಾರೆ.

Share This Article

ಬಿಕ್ಕಳಿಕೆ ಏಕೆ ಬರುತ್ತದೆ? ಕಿರಿಕಿರಿ ಉಂಟುಮಾಡುವ ಅದನ್ನು ನಿಯಂತ್ರಿಸುವುದು ಹೇಗೆ?

 ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…

ಈ ದಿನಾಂಕದಂದು ಜನಿಸಿದವರು ದಾನದಲ್ಲಿ ಕರ್ಣನನ್ನು ಮೀರಿಸುತ್ತಾರೆ! ನೀವೂ ಹುಟ್ಟಿದ್ದು ಇದೇ ದಿನಾನಾ?

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಗೋಲ್ಡನ್ ಅವರ್ ರಹಸ್ಯ: ಮುಂಜಾನೆ ಬೇಗ ಏಳುವುದರಿಂದ ಇದೆ 6 ಪ್ರಯೋಜನಗಳು

 ಬೆಂಗಳೂರು: ಮನೆಯಲ್ಲಿ ಕೆಲವರು ಸೂರ್ಯೋದಯಕ್ಕೂ ಮೊದಲೇ ಏಳುವ ಅಭ್ಯಾಸ ಇಟ್ಟುಕೊಂಡಿರುತ್ತಾರೆ. ಮುಂಜಾನೆ ಬೇಗ ಏಳುವುದನ್ನು ರೂಢಿ…