ವಿಜಯವಾಣಿ ಸುದ್ದಿಜಾಲ ಮಂಗಳೂರು
ತೀವ್ರ ಪ್ರತಿಕೂಲ ಹವಾಮಾನ ನಡುವೆ ಕರ್ನಾಟಕ ಕರಾವಳಿಯಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಸುಲಭ ಸಂಪರ್ಕ ಒದಗಿಸುವ ಎಡಕುಮೇರಿ- ಕಡಗರವಳ್ಳಿ ನಡುವೆ ಭೂಕುಸಿತದಿಂದ ಹಾನಿಗೊಳಗಾದ ರೈಲ್ವೆ ಹಳಿ ದುರಸ್ತಿ ಪ್ರಗತಿಯಲ್ಲಿದೆ.
ಪೂರ್ಣ ಪ್ರಮಾಣದ ತಂತ್ರಜ್ಞರು, ಯಂತ್ರೋಪಕರಣಗಳು ಹಾಗೂ ದೊಡ್ಡ ಪ್ರಮಾಣದ ಕಾರ್ಮಿಕರ ಬಲವಿದ್ದರೂ, ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಸತತ ಸುರಿಯುತ್ತಿರುವ ಮಳೆ ಕಾಮಗಾರಿ ವೇಗಗೊಳಿಸಲು ಅಡ್ಡಿಯಾಗಿದೆ.
ಜುಲೈ 26 ರಿಂದ ಇಲ್ಲಿ ಸರಾಸರಿ 140- 253 ಮಿಮೀ ಮಳೆ ದಾಖಲಾಗಿದೆ.
ರೈಲು ಹಳಿಯನ್ನು ಬಲಪಡಿಸಲು ಇಲ್ಲಿಯ ತನಕ 171 ಬೋಗಿ ಬಂಡೆಗಳನ್ನು ಕಾಮಗಾರಿ ನಡೆಯುವ ಈ ಪ್ರದೇಶದಲ್ಲಿ ಇಳಿಸಲಾಗಿದೆ. ಸುಮಾರು 300 ಕಾರ್ಮಿಕರು ಕೆಲಸದಲ್ಲಿ ತೊಡಗಿದ್ದಾರೆ.
ಮಳೆ ಅವಲಂಬಿಸಿ ಫಲಿತಾಂಶ:
ಕಾಮಗಾರಿ ಯಾವಾಗ ಮುಗಿಯುತ್ತದೆ ಎನ್ನುವುದು ಮಳೆಯ ತೀವ್ರತೆಯನ್ನು ಅವಲಂಬಿಸಿದೆ. ಅನುಕೂಲಕರ ಪರಿಸ್ಥಿತಿ ದೊರೆತರೆ ಆಗಸ್ಟ್ 4 ಒಳಗೆ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಹಿರಿಯ ಅಧಿಕಾರಯೋರ್ವರು ‘ವಿಜಯವಾಣಿ’ ಗೆ ತಿಳಿಸಿದರು.