ಅಕ್ರಮ ಹಣ ಬದಲಾವಣೆ, 7 ಜನರನ್ನು ಬಂಧಿಸಿದ ಇಡಿ

ಬೆಂಗಳೂರು: ಅಕ್ರಮವಾಗಿ ಹಣ ಬದಲಾವಣೆ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬೆಂಗಳೂರಿನಲ್ಲಿ 7 ಜನರನ್ನು ಬಂಧಿಸಿದ್ದು, 93 ಲಕ್ಷ ರೂ. ಹೊಸ ನೋಟುಗಳನ್ನು ವಶಪಡಿಸಿಕೊಂಡಿದೆ.

ಹಣ ಬದಲಿಸಿಕೊಳ್ಳುವ ನೆಪದಲ್ಲಿ ಮಧ್ಯವರ್ತಿಗಳನ್ನು ಸಂರ್ಪಸಿದ ಅಧಿಕಾರಿಗಳು ನಂತರ ಅವರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಸರ್ಕಾರಿ ಅಧಿಕಾರಿಯ ಸಂಬಂಧಿ ಸಹ ಸೇರಿದ್ದಾರೆ. ಹಣ ಬದಲಾವಣೆ ಮಾಡಿಕೊಡುವ ಹಲವು ಜಾಲಗಳು ಕಾರ್ಯ ನಿರ್ವಹಿಸುತ್ತಿವೆ. ಈ ಜಾಲಗಳು ಬ್ಯಾಂಕ್ ಅಧಿಕಾರಿಗಳೊಂದಿಗೆ ಸಂಪರ್ಕ ಹೊಂದಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಮಧ್ಯವರ್ತಿಗಳು ಶೇ. 15 ರಿಂದ ಶೇ. 35 ರಷ್ಟು ಕಮಿಷನ್ ಪಡೆದು ಹಣ ಬದಲಾಯಿಸಿ ಕೊಡುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರನ್ನು ಮಂಗಳವಾರ ಕೋರ್ಟ್​ಗೆ ಹಾಜರು ಪಡಿಸುವ ಸಾಧ್ಯತೆ ಇದೆ.

ಈ ಮುನ್ನ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ 5.7 ಕೋಟಿ ರೂ. ವಶಪಡಿಸಿಕೊಂಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತು ಭೀಮಾನಾಯ್್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

– ಪಿಟಿಐ

(ವೈವಿಧ್ಯಮಯ ಸುದ್ದಿಗಳಿಗೆ ವಿಜಯವಾಣಿ ಪತ್ರಿಕೆ ಓದಿರಿ)

Leave a Reply

Your email address will not be published. Required fields are marked *