ಕೂಡ್ಲಿಗಿ: ಅನಕ್ಷರಸ್ಥರಿಗೆ ಅಕ್ಷರದ ಅರಿವು ಹಾಗೂ ವಿಶೇಷ ಚೇತನರ, ನಿರ್ಗತಿಕರ, ಮಹಿಳೆಯರ ಬದುಕು ಹಸನಾಗಲು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ ದಿಟ್ಟ ನಿರ್ಧಾರ ಕೈಗೊಂಡಿದೆ ಎಂದು ಗ್ರಾಪಂ ಅಧ್ಯಕ್ಷ ಎನ್.ಕೃಷ್ಣ ತಿಳಿಸಿದರು.
ಇದನ್ನೂ ಓದಿ:ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸದುಪಯೋಗಪಡಿಸಿಕೊಳ್ಳಿ
ತಾಲೂಕಿನ ಗುಡೇಕೋಟೆ ಗ್ರಾಮದ ಚಿನ್ನಕ್ಕ ಮತ್ತು ಹೊನ್ನೂರಮ್ಮ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆಯಿಂದ ಭಾನುವಾರ ಮಾಸಾಶನ ವಿತರಿಸಿ ಮಾತನಾಡಿದರು. ರಾಜ್ಯದ ಸಾವಿರಾರು ನಿರ್ಗತಕರಿಗೆ ಮಾಶಾಸನ, ಬಡ ವಿದ್ಯಾರ್ಥಿಗಳಿಗೆ ಶಿಶ್ಯವೇತನ ವಿತರಿಸುವ ಜತೆಗೆ ದೇವಸ್ಥಾನ, ಶ್ರದ್ಧಾ ಕೇಂದ್ರ, ಕೆರೆಗಳ ಪುನಶ್ಚೇತನಕ್ಕೆ ಸಂಘ ಒತ್ತುಕೋಟ್ಟಿದೆ. ಪರಂಪರೆ ಉಳಿಸಿ ಬೆಳೆಸು ಕಾರ್ಯಕ್ರಮಗಳನ್ನು ಕೈಗೊಂಡಿದೆ. ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಸ್ವ-ಸಹಾಯ ಸಂಘಗಳು ಸಹಾಕಾರಿಯಾಗಿವೆ. ಇದರಿಂದ ಗುಡಿ ಕೈಗಾರಿಕೆ, ಸಣ್ಣಪುಟ್ಟ ವ್ಯವಹಾರ ನಡೆಸುವವರಿಗೆ ಆರ್ಥಿಕ ಬಲ ದೊರೆತಿದೆ. ಕೃಷಿಕರಿಗೆ ಪೂರಕ ತಂತ್ರಜ್ಞಾನ ಆಧಾರಿತ ಯಂತ್ರಗಳನ್ನು ವಿತರಿಸಲಾಗಿದೆ ಎಂದರು.
ಗುಡೇಕೋಟೆ ವಲಯ ಮೇಲ್ವಿಚಾರಕರಾದ ಉಮೇಶ್, ಕರಿಯಪ್ಪ, ಸೇವಾ ಪ್ರತಿನಿಧಿ ಸುನೀತಾ, ಪ್ರಮುಖರಾದ ಮಹೇಶ್,ನೇತ್ರಾವತಿ, ಕವಿತಾ, ಲಕ್ಷ್ಮೀ, ನವೀನ್ ತಾಜ್ ಇತರರಿದ್ದರು.