ಮೈಸೂರು: ಮಿಡಿತಾ ಲೈಫ್‌ಕೇರ್, ಸಿಎಸ್‌ಐ ಕಾರ್ಡಿಯಾಲಜಿ ಮೈಸೂರು, ಐಎಸ್‌ಸಿಸಿಎಂ ಮೈಸೂರು, ರೇಮಿಡಿ ಇಂಟರ್‌ನ್ಯಾಶನಲ್ ಮತ್ತು ಮೇಧಾ ಎಜುಕೇಷನಲ್ ಗಳ ಸಹಯೋಗದೊಂದಿಗೆ ನಗರದಲ್ಲಿ ಭಾನುವಾರ ಆರೋಗ್ಯ ವೃತ್ತಿಪರರಿಗಾಗಿ ಸಮಗ್ರ ಇಸಿಎಂಒ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಎಕ್ಸ್‌ಟ್ರಾಕಾರ್ಪೋರಿಯಲ್ ಮೆಂಬರೇನ್ ಆಕ್ಸಿಜನೇಷನ್ (ಇಸಿಎಂಒ) ಚಿಕಿತ್ಸೆಯ ಬಗ್ಗೆ ವೈದ್ಯರ ಜಾಗೃತಿ ಮೂಡಿಸಿದರು. ಮೈಸೂರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಶಿವರಾಜು, ಹಿರಿಯ ವೈದ್ಯರಾದ ಮಹಾನ್ ಮೈಸೂರು ಅಧ್ಯಕ್ಷ ಡಾ.ಜಾವೀದ್ ನಯೀಮ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಇಸಿಎಂಒ ಮಹತ್ವ ಮತ್ತು ಅಗತ್ಯವನ್ನು ತಿಳಿಸಿದರು.
ತೀವ್ರವಾದ ಶ್ವಾಸಕೋಶ ಮತ್ತು ಹೃದಯ ವೈಫಲ್ಯದ ರೋಗಿಗಳಿಗೆ ಇಸಿಎಂಒ ಜೀವನ-ಬೆಂಬಲದ ಚಿಕಿತ್ಸೆಯಾಗಿದೆ. ಸಾಂಪ್ರದಾಯಿಕ ಚಿಕಿತ್ಸೆಗಳು ಸಾಕಷ್ಟಿಲ್ಲದಿದ್ದಾಗ ಚೇತರಿಕೆಗೆ ಅವಕಾಶವನ್ನು ನೀಡುತ್ತದೆ. ಮಿಡಿತಾ ಲೈಫ್‌ಕೇರ್ ಮೈಸೂರಿನ ವಿವಿಧ ಆಸ್ಪತ್ರೆಗಳಿಗೆ ಇಸಿಎಂಒ ಬೆಂಬಲವನ್ನು ಒದಗಿಸುತ್ತದೆ ಎಂದರು.
ಕಾರ್ಯಾಗಾರದಲ್ಲಿ ಬೆಂಗಳೂರಿನ ಪರಿಣಿತ ಭಾಷಣಕಾರರು ಭಾಗವಹಿಸಿದ್ದರು, ಇಸಿಎಂಒ ಚಿಕಿತ್ಸೆಯಲ್ಲಿ ಮೌಲ್ಯಯುತ ಒಳನೋಟಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಂಡರು. ಕ್ಷೇತ್ರದ ಹೆಸರಾಂತ ಪರಿಣತರಿಂದ ಕಲಿಯುವ ಅವಕಾಶ ಸಿಕ್ಕಿರುವುದಕ್ಕೆ ಸಭಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಆರೋಗ್ಯ ವೃತ್ತಿಪರರಿಗಾಗಿ ಇಸಿಎಂಒ ಸಮ್ಮೇಳನ

You Might Also Like
ರಾತ್ರಿ ವೇಳೆ ಮಾವಿನ ಹಣ್ಣು ತಿನ್ನಬಾರದು! ಯಾಕೆ ಗೊತ್ತಾ? mango
mango: ಬೇಸಿಗೆಯಲ್ಲಿ ಹೆಚ್ಚು ಇಷ್ಟವಾಗುವ ಹಣ್ಣು ಮಾವಿಹಣ್ಣು. ಇದು ವಿಟಮಿನ್ ಎ, ಸಿ, ಫೈಬರ್, ಉತ್ಕರ್ಷಣ…
ಅಕ್ಷಯ ತೃತೀಯ ಹಬ್ಬಕ್ಕೂ ಮುನ್ನ ನಿಮ್ಮ ಮನೆಯಿಂದ ಈ ವಸ್ತುಗಳನ್ನು ತೆಗೆದುಹಾಕಿ.. Akshaya Tritiya
Akshaya Tritiya: ಅಕ್ಷಯ ತೃತೀಯ ಹಬ್ಬವನ್ನು ಲಕ್ಷ್ಮಿ ದೇವಿಯ ಹಬ್ಬವೆಂದು ಪರಿಗಣಿಸಲಾಗುತ್ತದೆ. ಚಿನ್ನದ ಅಂಗಡಿಗಳು ವ್ಯಾಪಾರದಿಂದ…
ಕಬ್ಬಿನ ರಸವನ್ನು ಎಷ್ಟು ದಿನ ಸಂಗ್ರಹಿಸಬಹುದು..ಈ ಜ್ಯೂಸ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳಿವು..Sugarcane Juice
Sugarcane Juice: ಕಬ್ಬಿನ ಜ್ಯೂಸ್ ಬೇಸಿಗೆಯಲ್ಲಿ ಎಲ್ಲರೂ ಹೆಚ್ಚು ಇಷ್ಟಪಡುವ ಆರೋಗ್ಯಕರ ಪಾನೀಯಗಳಲ್ಲಿ ಒಂದಾಗಿದೆ.…