ಮೆಟ್ಟಿಲು ನಿರ್ಮಾಣಕ್ಕೆ ಗ್ರಹಣ !

ಯಳಂದೂರು: ತಾಲೂಕಿನ ಸುಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ಕ್ಷೇತ್ರದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಮೂಲ ಸೌಕರ್ಯ ಹಾಗೂ ಮೆಟ್ಟಿಲು ಅಭಿವೃದ್ಧಿಪಡಿಸುವ ಕಾಮಗಾರಿ ಪ್ರಾರಂಭವಾಗದೆ ಕಡತಗಳಿಗೆ ಸೀಮಿತಗೊಂಡಿದೆ.

ವೈಷ್ಣವ ಪರಂಪರೆಯ ರಂಗನಾಥಸ್ವಾಮಿ ನೆಲೆಸಿರುವ ಬಿಳಿಗಿರಿರಂಗನಬೆಟ್ಟ ಹುಲಿ ಯೋಜನೆ ಪ್ರದೇಶಕ್ಕೆ ಒಳಪಟ್ಟಿದೆ. ಅಮೂಲ್ಯ ಪ್ರಾಣಿ ಮತ್ತು ಸಸ್ಯ ಸಂಕುಲಗಳ ಜತೆಗೆ ಹಸಿರಿನಿಂದ ಕಂಗೊಳಿಸುವ ಈ ಬೆಟ್ಟ ಪ್ರವಾಸಿ ತಾಣವೂ ಹೌದು.

ಜಿಲ್ಲೆಯ ಬಂಡಿಪುರ ಹುಲಿ ಸಂರಕ್ಷಿತಾರಣ್ಯ, ಮಲೆ ಮಹದೇಶ್ವರಬೆಟ್ಟಕ್ಕೆ ಹೋಲಿಕೆ ಮಾಡಿದರೆ ಬಿಳಿಗಿರಿರಂಗನಾಥಸ್ವಾಮಿ ಕ್ಷೇತ್ರದಲ್ಲಿ ಅಗತ್ಯ ಪ್ರವಾಸಿ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲ. 2018-19ನೇ ಸಾಲಿನಲ್ಲಿ ಪ್ರವಾಸ್ಯೋದಮ ಇಲಾಖೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ರಾಜಗೋಪುರದಿಂದ ಕಲ್ಯಾಣಿ ಕೊಳದವರೆಗೆ ಮೆಟ್ಟಿಲುಗಳ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸಲಾಗಿದೆ.

ಆದರೆ, ಈ ಮೆಟ್ಟಿಲು ನಿರ್ಮಾಣ ಕಾಮಗಾರಿ ಪ್ರಾರಂಭವಾಗದೆ ಕಡತಗಳಿಗೆ ಸೀಮಿತವಾಗಿದೆ. ಈ ಅನುದಾನವನ್ನು ಬೇರೆ ಕಾಮ ಗಾರಿಗೆ ಬಳಸಿಕೊಳ್ಳುವ ಯೋಜನೆಯನ್ನು ರೂಪಿಸುತ್ತಿರುವುದರಿಂದ ಕಾಮಗಾರಿಗೆ ಗ್ರಹಣ ಹಿಡಿದಿದೆ. ಬೆಟ್ಟದಲ್ಲಿ ಸುಮಾರು 500 ವರ್ಷಗಳ ಹಳೆಯದಾದ ಬಿಳಿಗಿರಿರಂಗನಾಥಸ್ವಾಮಿ ಹಾಗೂ ಅಲಮೇಲಮ್ಮನವರ ದೇವಸ್ಥಾನವಿದ್ದು ಶಿಥಿಲಾವಸ್ಥೆಯನ್ನು ತಲುಪಿತ್ತು. ಈ ಹಿಂದೆ ದೇವಸ್ಥಾನದ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ದೇವಸ್ಥಾನದ ಮೇಲೆಲ್ಲಾ ಗಿಡಗಳು ಸಹ ಬೆಳೆದಿದ್ದರಿಂದ ಆದಷ್ಟು ಬೇಗ ದೇವಸ್ಥಾನದ ಜೀರ್ಣೋದ್ಧಾರ ಆಗಬೇಕೆಂಬುದು ಭಕ್ತರು ಹಾಗೂ ಪ್ರವಾಸಿಗರ ಒತ್ತಾಸೆಯಾಗಿತ್ತು.
ಅದರಂತೆ ಪುರಾತತ್ವ ಇಲಾಖೆ 2017ರ ಮಾರ್ಚ್‌ನಲ್ಲಿ 2.40 ಕೋಟಿ ರೂ. ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಯಿತು. ಶಿವಮೊಗ್ಗದ ಪರಂಪರಾ ಕನ್‌ಸ್ಟ್ರಕ್ಷನ್ ವತಿಯಿಂದ ಕಾಮಗಾರಿ ಪ್ರಾರಂಭಗೊಂಡಿತ್ತು. ಈಗಾಗಲೇ ದೇವಸ್ಥಾನದ ಛಾವಣಿಗೆ ಕಲ್ಲು ಗಳನ್ನು ಅಳವಡಿಸುವ ಕಾರ್ಯಭರದಿಂದ ಸಾಗಿದ್ದು ಶೇ.80 ರಷ್ಟು ಕಾಮಗಾರಿ ಪೂರ್ಣಗೊಂಡಿದೆ.

ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಸಾಗುತ್ತಿರುವುದರಿಂದ ದೇವಸ್ಥಾನದ ಆವರಣದ ಸುತ್ತಲ ನೆಲಹಾಸು ಕಾಮಗಾರಿ ಅರೆ ಬರೆಯಾಗಿ ಸ್ಥಗಿತಗೊಂಡಿದೆ. ಸುಮಾರು 600 ಮೀಟರ್ ದೂರದ ಮೆಟ್ಟಿಲುಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸಾಕಾ ಗುವುದಿಲ್ಲ ಎಂಬ ನೆಪವೊಡ್ಡಿ ದೇವಾಲಯದ ಸುತ್ತಲು ಅಪೂರ್ಣಗೊಂಡಿರುವ ನೆಲಹಾಸು ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಸೂಚನೆಯಂತೆ 1 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿ ಸಾಗುತ್ತಿರುವುದರಿಂದ ದೇವಸ್ಥಾನದ ಆವರಣದ ಸುತ್ತಲ ನೆಲಹಾಸು ಕಾಮಗಾರಿ ಅರೆ ಬರೆಯಾಗಿ ಸ್ಥಗಿತಗೊಂಡಿದೆ. ಸುಮಾರು 600 ಮೀಟರ್ ದೂರದ ಮೆಟ್ಟಿಲುಗಳ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸಾಕಾ ಗುವುದಿಲ್ಲ ಎಂಬ ನೆಪವೊಡ್ಡಿ ದೇವಾಲಯದ ಸುತ್ತಲು ಅಪೂರ್ಣಗೊಂಡಿರುವ ನೆಲಹಾಸು ಕಾಮಗಾರಿಯನ್ನು ಪೂರ್ಣಗೊಳಿಸಲು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ಸೂಚನೆಯಂತೆ 1 ಕೋಟಿ ರೂ. ಅನುದಾನವನ್ನು ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ.

ಮೂಲ ಸೌಲಭ್ಯಗಳ ಮರೀಚಿಕೆ : ನಿತ್ಯ ಇಲ್ಲಿಗೆ ರಾಜ್ಯದ ವಿವಿಧ ಮೂಲೆಗಳು, ದೇಶ, ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ. ಆದರೂ ಪ್ರವಾಸಿ ತಾಣವಾಗಿ ಅಷ್ಟೊಂದು ಪ್ರಗತಿ ಕಂಡಿಲ್ಲ. ಅಲ್ಲದೇ ಬೆಟ್ಟದಲ್ಲಿ ದೇವಸ್ಥಾನದ ಜೀರ್ಣೋದ್ಧಾರ, ದಾಸೋಹ ಭವನ ನಿರ್ಮಾಣ, ಇತರೆ ಕಾಮಗಾರಿಗಳು ವಿಳಂಬ ಗತಿಯಲ್ಲಿ ಸಾಗಿವೆ.

3 ವರ್ಷಗಳಿಂದ ಸಾರಿಗೆ ಬಸ್ ನಿಲ್ದಾಣ ನಿರ್ಮಾಣ ಮಾಡಲು ಸಾಧ್ಯವಾಗಿಲ್ಲ. ಹಾಗಾಗಿ ಬೆಟ್ಟ ಪ್ರವಾಸಿಗರನ್ನು ಹೆಚ್ಚು ಹೆಚ್ಚು ಆಕರ್ಷಿಸಲು ಹಿಂದೆ ಬಿದ್ದಿದೆ. ಇದಕ್ಕೆ ಅರಣ್ಯ ಅಧಿಕಾರಿಗಳ ತೊಡರುಗಾಲು ಹಾಗೂ ಜನಪ್ರತಿನಿಧಿಯ ಇಚ್ಚಾಶಕ್ತಿ ಕೊರತೆಯೇ ಕಾರಣವಾಗಿದೆ ಎಂದು ಬಿಳಿಗಿರಿರಂಗನಾಥಸ್ವಾಮಿ ಭಕ್ತರು ಆರೋಪಿಸಿದ್ದಾರೆ.

ಬೆಟ್ಟಕ್ಕೆ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಬೆಟ್ಟದ ತಪ್ಪಲಿನಲ್ಲಿ ನಿರ್ಮಿಸಿರುವ ಶೌಚಗೃಹದ ಬಾಗಿಲು ಮುಚ್ಚಿದ್ದು ಉಪಯೋಗಕ್ಕೆ ಬಾರದೆ ನಿರುಪಯುಕ್ತವಾಗಿದೆ. ಇದರಿಂದಾಗಿ ಮಹಿಳೆಯರು ಹಾಗೂ ಮಕ್ಕಳು ಶೌಚಕ್ಕೆ ಪೊದೆಗಳ ಮರೆಯನ್ನು ಆಶ್ರಯಿಸಬೇಕಾಗಿದೆ.

ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಾಗಿ ಆಗಮಿಸುವ ಸ್ಥಳಗಳಲ್ಲಿ ಉತ್ತಮ ಗುಣಮಟ್ಟದ ಹೈಟೆಕ್ ಸ್ನಾನಗೃಹ ಮತ್ತು ಶೌಚಗೃಹಗಳನ್ನು ನಿರ್ಮಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಾಗಿದೆ.

ಭರದಿಂದ ಸಾಗಿದೆ : ತಾಲೂಕಿನ ಹೊನ್ನೂರು ಗ್ರಾಮದ ಶ್ರೀಬಸವೇಶ್ವರ ದೇವಸ್ಥಾನದ ಹತ್ತಿರ ಯಾತ್ರಿ ನಿವಾಸ್ ನಿರ್ಮಾಣಕ್ಕೆ ಪ್ರವಾ ಸೋದ್ಯಮ ಇಲಾಖೆಯಿಂದ 2017-18 ನೇ ಸಾಲಿನಲ್ಲಿ 50 ಲಕ್ಷ ರೂ. ಮಂಜೂರಾಗಿದೆ. ಡಿಸೆಂಬರ್ 1ರಂದು ಶಾಸಕ ಎನ್. ಮಹೇಶ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಚಾಲನೆ ನೀಡಿದ್ದರು.

ಚಾಲನೆ ನೀಡಿ 2 ತಿಂಗಳಿಗೆ ಅಡಿಪಾಯದ ಕಾಮಗಾರಿ ಪೂರ್ಣವಾಗಿ ಗೋಡೆಗಳ ನಿರ್ಮಾಣವು ಸಾಗುತ್ತಿದೆ. ಇನು 5 ತಿಂಗಳಲ್ಲಿ ಕಟ್ಟಡವನ್ನು ಪೂರ್ಣಪ್ರಮಾಣದಲ್ಲಿ ನಿರ್ಮಾಣ ಮಾಡಲಾಗುವುದು ಎಂದು ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮದ (ಕೆಆರ್‌ಐಡಿಎಲ್) ಕಿರಿಯ ಇಂಜಿನಿಯರ್ ಪ್ರಶಾಂತಕುಮಾರ್ ತಿಳಿಸಿದ್ದಾರೆ.

ಬಿಳಿಗಿರಂಗನಬೆಟ್ಟದ ರಾಜಗೋಪುರದಿಂದ ಕಲ್ಯಾಣಿಕೊಳಕ್ಕೆ ಹೋಗುವ ಮೆಟ್ಟಲುಗಳ ಅಭಿವೃದ್ಧಿಗೆ ಪ್ರವಾಸ್ಯೋದಮ ಇಲಾಖೆ ಯಿಂದ ಬಿಡುಗಡೆಯಾಗಿರುವ 1 ಕೋಟಿ ರೂ. ಅನುದಾನ ಸಾಲುವುದಿಲ್ಲ. ಇನ್ನೂ ಹೆಚ್ಚಿನ ಅನುದಾನ ಬೇಕಾಗುತ್ತದೆ. ಆದ್ದರಿಂದ ದೇವ ಸ್ಥಾನದ ಆವರಣದಲ್ಲಿ ಅರೆಬರೆಯಾಗಿರುವ ನೆಲಹಾಸು ಕಾಮಗಾರಿಗೆ ಈ ಅನುದಾನವನ್ನು ಬಳಸುವಂತೆ ಶಾಸಕರ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ವೆಂಕಟೇಶ್‌ಪ್ರಸಾದ್. ಕಾರ್ಯನಿರ್ವಾಹಕ ಅಧಿಕಾರಿ, ಬಿಳಿಗಿರಿರಂಗನಬೆಟ್ಟ