ಲಿವರ್​ ಆರೋಗ್ಯ ಕಾಪಾಡಲು ಈ ಆಹಾರಗಳನ್ನು ತಿನ್ನಬೇಕು!

ಬೆಂಗಳೂರು: ಲಿವರ್​ (ಯಕೃತ್ತು) ನಮ್ಮ ದೇಹದ ಅತ್ಯಂತ ಮುಖ್ಯ ಅಂಗವಾಗಿದ್ದು, ವ್ಯಕ್ತಿಯ ಜೀರ್ಣಾಂಗ ವ್ಯವಸ್ಥೆ ಸುಸೂತ್ರವಾಗಿ ಕೆಲಸ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಯಕೃತ್ತು ನಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ರಕ್ತದಿಂದ ಬೇರ್ಪಡಿಸಿ ದೇಹದ ಹೊರಗೆ ಕಳುಹಿಸುತ್ತದೆ. ನಮ್ಮ ದೇಶದಲ್ಲಿ ಯಕೃತ್ತು ಸಮಸ್ಯೆಯಿಂದಾಗಿ ಬಹಳಷ್ಟು ಜನರು ಮೃತಪಡುತ್ತಿದ್ದಾರೆ. ಹಾಗಾಗಿ ಯಕೃತ್ತಿನ ಆರೋಗ್ಯವನ್ನು ಕಾಪಾಡಬೇಕಾದುದು ಅತೀ ಮುಖ್ಯ. ಪಿತ್ತಕೋಶದ ಆರೋಗ್ಯವನ್ನು ಕಾಪಾಡಲು ನಾವು ನಮ್ಮ ಆಹಾರ ಕ್ರಮದಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಂಡರೆ ಸಾಕು. ಹಾಗೆಯೇ ಯಕೃತ್ತಿನ ಆರೋಗ್ಯ ಕಾಪಾಡುವಂತಹ ಆಹಾರಗಳನ್ನು ನಿಯಮಿತವಾಗಿ ಸೇವಿಸಬೇಕು.

ಯಕೃತ್ತಿನ ಆರೋಗ್ಯ ಕಾಪಾಡಲು ಕೆಲವೊಂದು ಆಹಾರಗಳೆಂದರೆ:

ಬೀಟ್​ರೂಟ್​: ಬೀಟ್​ರೂಟ್​ನಲ್ಲಿ ಫ್ಲಾವೊನಾಯ್ಡ್​ಗಳು ಮತ್ತು ಬೀಟಾ ಕ್ಯಾರೊಟೀನ್​ಗಳು ಹೆಚ್ಚಾಗಿದ್ದು, ದಿನನಿತ್ಯದ ನಮ್ಮ ಆಹಾರ ಕ್ರಮದಲ್ಲಿ ಇದನ್ನು ಸೇರಿಸುವುದರಿಂದ ಯಕೃತ್ತು ಆರೋಗ್ಯಯುತವಾಗಿರುತ್ತದೆ.

ಲೆಟ್ಯೂಸ್​, ಸ್ಪಿನಿಚ್​: ಲೆಟ್ಯೂಸ್​ ಮತ್ತು ಸ್ಪಿನಿಚ್​ನಲ್ಲಿ ಕ್ಲೋರೊಫಿಲ್​ ಎಂಬ ಅಂಶವಿದ್ದು, ಇದು ರಕ್ತದಲ್ಲಿರುವ ವಿಷಕಾರಿ ಅಂಶಗಳನ್ನು ದೇಹದಿಂದ ಹೊರಹಾಕಲು ನೆರವಾಗುತ್ತದೆ.

ಅವಕಾಡೋ (ಬೆಣ್ಣೆ ಹಣ್ಣು): ಬೆಣ್ಣೆ ಹಣ್ಣನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿ ಆಂಟಿ ಆಕ್ಸಿಡೆಂಟ್​ಗಳ ಉತ್ಪತ್ತಿ ಹೆಚ್ಚುತ್ತದೆ. ಇದು ಯಕೃತ್ತು ರಕ್ತವನ್ನು ಶುದ್ಧೀಕರಿಸಲು ನೆರವು ನೀಡುತ್ತದೆ.

ವಾಲ್​ನಟ್ಸ್​: ವಾಲ್​ನಟ್ಸ್​ನಲ್ಲಿ ಗ್ಲುಟಾಥಿಯೋನ್ ಮತ್ತು ಒಮೇಗಾ-3 ಫ್ಯಾಟಿ ಆಸಿಡ್ಸ್​ ಹೆಚ್ಚಿನ ಪ್ರಮಾಣದಲ್ಲಿದ್ದು ಯಕೃತ್ತಿನ ಶುದ್ಧೀಕರಣ ಪ್ರಕ್ರಿಯೆಯಲ್ಲಿ ನೆರವು ನೀಡುತ್ತದೆ.

ಕ್ಯಾರೆಟ್​: ಕ್ಯಾರೆಟ್​ನಲ್ಲಿ ಗ್ಲುಟಾಥಿಯೋನ್ ಹೆಚ್ಚಿನ ಪ್ರಮಾಣ ಹೆಚ್ಚಿದೆ ಮತ್ತು ಫ್ಲಾವೊನಾಯ್ಡ್​ಗಳು ಮತ್ತು ಬೀಟಾ ಕ್ಯಾರೊಟೀನ್​ಗಳು ಸಹ ಇದ್ದು ಯಕೃತ್ತಿನ ಆರೋಗ್ಯವನ್ನು ವೃದ್ಧಿಸುತ್ತದೆ.

ಅರಿಶಿನ: ಅರಿಶಿನದಲ್ಲಿ ಕರ್ಕ್ಯುಮಿನ್ ಎಂಬ ರಾಸಾಯನಿಕ ಅಂಶವಿದ್ದು ಯಕೃತ್ತಿನ ಸೋಂಕನ್ನು ವಾಸಿಮಾಡಲು ನೆರವಾಗುತ್ತದೆ.
ಬ್ರೊಕೋಲಿ: ಬ್ರೊಕೋಲಿ ನಾನ್​ ಆಲ್ಕೋಹಾಲಿಕ್​ ಫ್ಯಾಟಿ ಲಿವರ್​ ರೋಗವನ್ನು ತಡೆಗಟ್ಟಲು ನೆರವಾಗುತ್ತದೆ.

Leave a Reply

Your email address will not be published. Required fields are marked *