25.5 C
Bangalore
Monday, December 16, 2019

ಭೂಕಂಪ ಎದುರಿಸಿ ಅಚಲವಾಗಿ ನಿಂತ ಕೊಯ್ನ ಜಲಾಶಯ

Latest News

ರಾಜರಾಜೇಶ್ವರಿ ನಗರದ ಸಮಸ್ಯೆ ಬಗೆಹರಿಸುವಂತೆ ಬಿಜೆಪಿ ನಾಯಕರ ಬೆನ್ನುಹತ್ತಿರುವ ಅನರ್ಹ ಶಾಸಕ ಮುನಿರತ್ನ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಸಮಸ್ಯೆ ಬಗೆ ಹರಿಸಿ ಶೀಘ್ರವೇ ಉಪ ಚುನಾವಣೆ ನಡೆಯುವಂತೆ ಮಾಡಬೇಕು ಎಂದು ಅನರ್ಹ ಶಾಸಕ ಮುನಿರತ್ನ...

ಪೌರತ್ವ ತಿದ್ದುಪಡಿ ಕಾಯ್ದೆ, ಎನ್​ಆರ್​ಸಿ ವಿರುದ್ಧ ಕೋಲ್ಕತ್ತದಲ್ಲಿ ಬೃಹತ್​ ರ‍್ಯಾಲಿ; ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವ

ಕೋಲ್ಕತ್ತ: ಪೌರತ್ವ ತಿದ್ದುಪಡಿ ಕಾಯ್ದೆ ಈಗಾಗಲೇ ದೇಶದ ಕೆಲವು ರಾಜ್ಯಗಳಲ್ಲಿ ಕಿಡಿ ಹೊತ್ತಿಸಿದೆ. ದೇಶದ ಈಶಾನ್ಯ ಭಾಗದಲ್ಲಿ ಪ್ರಾರಂಭವಾದ ಪ್ರತಿಭಟನೆ ಈಗ ದೆಹಲಿ, ಉತ್ತರ ಪ್ರದೇಶ...

ಅಯ್ಯಪ್ಪ ಮಾಲಾಧಾರಿಗಳಿಗೆ ಅನ್ನದಾನ ಮಾಡಿದ : ಸಾಮರಸ್ಯದ ಕಾರ್ಯಕ್ರಮ

ಬಳ್ಳಾರಿ: ನಗರದ ಹೊಸಪೇಟೆ ರಸ್ತೆಯಲ್ಲಿರುವ ಏಳು ಮಕ್ಕಳ ದೇವಸ್ಥಾನದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಗೆ ಸೋಮವಾರ ಮುಸ್ಲಿಂರು ಊಟ ಬಡಿಸುವ ಮೂಲಕ ಸಾಮರಸ್ಯಕ್ಕೆ ಮುನ್ನುಡಿ ಬರೆದರು....

ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಎದೆಗೆ ನಾಟಿದ್ದ ಕಬ್ಬಿಣ ರಾಡ್​ ಹೊರತೆಗೆದ ವೈದ್ಯರು: ಪ್ರಾಣಾಪಾಯದಿಂದ ವ್ಯಕ್ತಿ ಪಾರು

ರಾಯಚೂರು: ಎದೆಗೆ ಕಬ್ಬಿಣದ ರಾಡ್ ತೂರಿದ್ದ ವ್ಯಕ್ತಿಗೆ ರಾಯಚೂರಿನ ಖಾಸಗಿ ಆಸ್ಪತ್ರೆಯ ವೈದ್ಯರು ಸತತ ಒಂದೂವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ ಪ್ರಾಣಾಪಾಯದಿಂದ ಪಾರು...

ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ

ಕೊಡಗು: ಹಿಂದು ರಾಷ್ಟ್ರದಲ್ಲಿ ಹಿಂದುಗಳ ಮೇಲೆ ದೌರ್ಜನ್ಯ ಮಿತಿಮೀರಿದೆ ಎಂದು ವಕೀಲ ಪಿ. ಕೃಷ್ಣಮೂರ್ತಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಹಿಂದು ಜನಜಾಗೃತಿ ಸಮಿತಿಯಿಂದ ಕುಶಾಲನಗರದ ಗಾಯತ್ರಿ ಕಲ್ಯಾಣ...

| ರಾಜೇಶ ವೈದ್ಯ

- Advertisement -

ಬೆಳಗಾವಿ: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಅಲ್ಲಿನ ಜಲಾಶಯಗಳಿಂದ ಹರಿದು ಬರುತ್ತಿರುವ 2 ಲಕ್ಷ ಕ್ಯೂಸೆಕ್‌ನಷ್ಟು ನೀರಿನಿಂದ ಬೆಳಗಾವಿಯ ಚಿಕ್ಕೋಡಿ ಉಪವಿಭಾಗದಲ್ಲಿ ಗ್ರಾಮಗಳು ಜಲಾವೃತಗೊಂಡು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸ್ಥಿತಿಯಲ್ಲಿ ಕೊಯ್ನ ಜಲಾಶಯದ ಸನಿಹದಲ್ಲಿ ಗುರುವಾರ ರಾತ್ರಿ 3.1 ರಿಕ್ಟರ್ ಮಾಪಕದಷ್ಟು ಭೂಕಂಪ ಸಂಭವಿಸಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಒಂದು ವೇಳೆ ಶಕ್ತಿಶಾಲಿ ಭೂಕಂಪ ಸಂಭವಿಸಿ ಕೊಯ್ನ ಜಲಾಶಯಕ್ಕೆ ಧಕ್ಕೆ ಆದರೆ ಮುಂದೇನು ಎಂಬ ಆತಂಕವೂ ಮನೆ ಮಾಡಿದೆ.

ಭೂಕಂಪ ಎದುರಿಸಿ ನಿಂತ ಕೊಯ್ನ ಡ್ಯಾಂ: ಮಹಾರಾಷ್ಟ್ರದ ಅತಿ ದೊಡ್ಡ ಜಲಾಶಯ ಎಂದೇ ಗುರುತಿಸಿಕೊಂಡಿರುವ ಕೊಯ್ನ ಜಲಾಶಯ ಇಲ್ಲಿಯವರೆಗೆ ಸಾಕಷ್ಟು ಸಣ್ಣ ಪ್ರಮಾಣದ ಭೂಕಂಪಗಳನ್ನು ಎದುರಿಸಿ ಅಚಲವಾಗಿ ನಿಂತಿದೆ. ಮಹಾರಾಷ್ಟ್ರದ ಸತಾರ ಜಿಲ್ಲೆಯ ಪಠಾಣ ತಾಲೂಕಿನ ಕೊಯ್ನನಗರದಲ್ಲಿ ಕೊಯ್ನ ಜಲಾಶಯವನ್ನು 1962 ರಲ್ಲಿ ನಿರ್ಮಿಸಲಾಗಿದೆ. ಕೋಯ್ನ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಈ ಜಲಾಶಯ ದೇಶದ ಅತಿ ದೊಡ್ಡ ಹೈಡ್ರೋ ಇಲೆಕ್ಟ್ರಿಕ್ ಪ್ರಾಜೆಕ್ಟ್‌ಗಳಲ್ಲಿ ಒಂದು. ಇಲ್ಲಿ 1960 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲಾಗುತ್ತದೆ. ವಿದ್ಯುತ್ ಉತ್ಪಾದನೆ ಜತೆಗೆ ನೀರಾವರಿ ಹಾಗೂ ಕುಡಿಯುವ ನೀರು ಪೂರೈಕೆಗೆ ನೀರನ್ನು ಬಳಸಲಾಗುತ್ತದೆ. ಇದಲ್ಲದೇ ಕೊಯ್ನ ಡ್ಯಾಂ ಮುಂಗಾರಿನಲ್ಲಿ ಪ್ರವಾಹ ತಡೆಯುವ ಸಾಮರ್ಥ್ಯದ ಕಾರಣಕ್ಕೆ ಪ್ರಸಿದ್ಧಿ ಪಡೆದಿದೆ.

ಕೊಯ್ನ ಜಲಾಶಯ ನಿರ್ಮಾಣಗೊಂಡ ಕೇವಲ ಐದೇ ವರ್ಷದಲ್ಲಿ ಅಂದರೆ 1967 ರ ಡಿಸೆಂಬರ್‌ನಲ್ಲಿ ಕೊಯ್ನನಗರದಲ್ಲಿ ಪ್ರಬಲ ಭೂಕಂಪ ಸಂಭವಿಸಿತ್ತು. 7 ರಿಕ್ಟರ್‌ನಷ್ಟು ಪ್ರಬಲ ಭೂಕಂಪದ ಕಾರಣ ಜಲಾಶಯದ ಜನರೇಟರ್ ಕೊಠಡಿಯ ಗೋಡೆಯಲ್ಲಿ ಸೂಕ್ಷ್ಮ ಬಿರುಕು ಉಂಟಾಗಿತ್ತು. ಟರ್ಬೈನ್ ಹಾಗೂ ಜನರೇಟರ್‌ಗಳು ಅಲುಗಾಡಿ ತಮ್ಮ ಸ್ಥಳದಿಂದ ಕದಲಿದ್ದವು. ಅವುಗಳನ್ನು ಮರು ಸ್ಥಾಪನೆ ಮಾಡಲಾಗಿತ್ತು. ಇದಲ್ಲದೇ ಜಲಾಶಯದ 18 ನೇ ಬ್ಲಾಕ್ ಹಾಗೂ ಇತರ ಕೆಲವೆಡೆ ಧಕ್ಕೆ ಆಗಿತ್ತು.

ಜಲಾಶಯ ನಿರ್ಮಾಣದ ಕಾರಣಕ್ಕೆ ಇಲ್ಲಿ ಭೂಕಂಪ ಸಂಭವಿಸಿದೆ ಎಂಬ ದೊಡ್ಡ ಮಟ್ಟದ ಚರ್ಚೆಗೆ ಈ ಘಟನೆ ಕಾರಣವಾಗಿತ್ತು. ಇದಾದ ನಂತರದಲ್ಲಿ ದೇಶ ಹಾಗೂ ಅಂತಾರಾಷ್ಟ್ರೀಯ ವಿಜ್ಞಾನಿಗಳು ಕೊಯ್ನ ಬಳಿ ಭೂಮಿಯಲ್ಲಿ ರಂಧ್ರ ಕೊರೆದು ಭೂಕಂಪದ ಬಗ್ಗೆ ಅಧ್ಯಯನ ನಡೆಸುತ್ತಿದ್ದಾರೆ. ಭೂಕಂಪದ ಅಧ್ಯಯನಕ್ಕೆ ಈ ಸ್ಥಳ ಅತ್ಯಂತ ಪ್ರಶಸ್ತ ಎಂದು ಪರಿಗಣಿಸಲಾಗುತ್ತಿದೆ. 1973 ಹಾಗೂ 2006 ರಲ್ಲಿಯೂ ಜಲಾಶಯವನ್ನು ಗಟ್ಟಿಗೊಳಿಸಲು ಅಗತ್ಯ ಕಾಮಗಾರಿ ಕೈಗೊಳ್ಳಲಾಗಿದೆ. ಸದ್ಯ ಕೊಯ್ನ ಜಲಾಶಯ ಭದ್ರವಾಗಿದ್ದು, 1967 ರಲ್ಲಿ ಸಂಭವಿಸಿದ 7 ರಿಕ್ಟರ್‌ಗಿಂತ ಪ್ರಬಲ ಭೂಕಂಪವನ್ನೂ ಕೊಯ್ನ ಜಲಾಶಯ ತಾಳಿಕೊಳ್ಳಬಲ್ಲದು ಎಂಬುದು ಅಲ್ಲಿನ ಅಧಿಕಾರಿಗಳ ಅಭಿಪ್ರಾಯ.

ಅವಘಡ ಸಂಭವಿಸಿದರೆ?

ಪ್ರಕೃತಿ ಯಾರ ನಿಯಂತ್ರಣದಲ್ಲೂ ಇಲ್ಲ. ಭವಿಷ್ಯದಲ್ಲಿ ಒಂದು ವೇಳೆ ಪ್ರಬಲ ಭೂಕಂಪ ಸಂಭವಿಸಿ,ಕೊಯ್ನ ಜಲಾಶಯಕ್ಕೆ ಧಕ್ಕೆ ಆದರೆ ಮಹಾರಾಷ್ಟ್ರದಲ್ಲಿ ಹೆಚ್ಚಿನ ಅನಾಹುತ ಸಂಭವಿಸಲಿದೆ. ಕರಾಡ, ಸತಾರ, ಮೀರಜ್ ಮುಂತಾದ ಪ್ರದೇಶ ಸಂಪೂರ್ಣ ಮುಳುಗಡೆಯಾಗಲಿದೆ. ಕೊಯ್ನದಿಂದ ಚಿಕ್ಕೋಡಿ ಉಪವಿಭಾಗಕ್ಕೆ ನೀರು ನುಗ್ಗಲು ಒಂದು ದಿನ ಬೇಕಾಗಿದ್ದು, 24 ಗಂಟೆಗಳಲ್ಲಿ ಇಲ್ಲಿನ ಜಿಲ್ಲಾಡಳಿತ ಕಾರ್ಯಾಚರಣೆ ನಡೆಸಿ, ಸಾವಿರಾರು ಮನೆಗಳಿಂದ ಜನರನ್ನು ತೆರವು ಮಾಡಿ ರಕ್ಷಿಸಬೇಕಾಗುತ್ತದೆ. ಚಿಕ್ಕೊಡಿ, ರಾಯಭಾಗ, ಅಥಣಿ ತಾಲೂಕುಗಳ ಸಾವಿರಾರು ಮನೆಗಳು ಮುಳಗಡೆಯಾಗಿ ಈ ಭಾಗದ ಜನ ಜಾನುವಾರುಗಳು ಅಪಾಯಕ್ಕೆ ಸಿಲುಕುವುದನ್ನು ತಪ್ಪಿಸಲು ಕಾರ್ಯತಂತ್ರ ರೂಪಿಸಬೇಕಾಗುತ್ತದೆ. ಕೊಯ್ನ ಜಲಾಶಯಕ್ಕೆ ಭೂಕಂಪದಿಂದ ಧಕ್ಕೆ ಆದರೆ ಎದುರಾಗುವ ಪರಿಸ್ಥಿತಿ ನಿರ್ವಹಣೆಗೆ ಬೇಕಾದ ವಿಪತ್ತು ನಿರ್ವಹಣಾ ಕಾರ್ಯ ಯೋಜನೆ ಸದ್ಯಕ್ಕೆ ಜಿಲ್ಲಾಡಳಿತದ ಬಳಿ ಸಿದ್ದವಾಗಿಲ್ಲ.

ಕೊಯ್ನ ಜಲಾಶಯಕ್ಕೆ ಭೂಕಂಪದಿಂದ ಅಪಾಯವಾಗುವ ಸಾಧ್ಯತೆ ಇಲ್ಲ. ಭೂಕಂಪಗಳನ್ನು ತಡೆದುಕೊಳ್ಳುವ ರೀತಿಯಲ್ಲಿಯೇ ಜಲಾಶಯಗಳನ್ನು ನಿರ್ಮಿಸಲಾಗಿರುತ್ತದೆ. ಒಂದು ವೇಳೆ ಕೊಯ್ನ ಜಲಾಶಯಕ್ಕೆ ಧಕ್ಕೆ ಆದರೆ ಎನೆಲ್ಲ ಸಮಸ್ಯೆ ಆಗಬಹುದು ಎಂಬ ಬಗ್ಗೆ ನಮ್ಮ ಇಂಜಿನಿಯರ್‌ಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ.
| ಡಾ.ಎಸ್.ಬಿ. ಬೊಮ್ಮನಹಳ್ಳಿ, ಜಿಲ್ಲಾಧಿಕಾರಿ ಬೆಳಗಾವಿ

Stay connected

278,752FansLike
588FollowersFollow
629,000SubscribersSubscribe

ವಿಡಿಯೋ ನ್ಯೂಸ್

VIDEO| ಕ್ರಿಕೆಟ್​​ ಮೈದಾನಕ್ಕೆ ಎಂಟ್ರಿ ಕೊಟ್ಟು ಪಂದ್ಯವನ್ನೇ ಕೆಲಕಾಲ ನಿಲ್ಲಿಸಿದ...

ಹೈದರಾಬಾದ್​: ಮಳೆಯ ಕಾರಣದಿಂದಾಗಿ ಕ್ರಿಕೆಟ್​ ಪಂದ್ಯಗಳು ಕೆಲಕಾಲ ಸ್ಥಗಿತಗೊಳ್ಳುವುದನ್ನು ನಾವು ನೋಡಿದ್ದೇವೆ. ಆದರೆ, ಹಾವಿನಿಂದಾಗಿ ಪಂದ್ಯ ಕೆಲಕಾಲ ನಿಲ್ಲುವುದನ್ನು ಎಂದಾದರೂ ನೋಡಿದ್ದೀರಾ? ಇಲ್ಲ ಎಂದಾದಲ್ಲಿ ನಾವು ತೋರಿಸುತ್ತೇವೆ ನೋಡಿ.... ಡಿಸೆಂಬರ್​ 9ರ...

VIDEO: ನಮಾಮಿ ಗಂಗಾ ಯೋಜನೆ ಪ್ರಗತಿ ಪರಿಶೀಲನೆ ಮುಗಿಸಿ ವಾಪಸ್​...

ಲಖನೌ: ಪ್ರಧಾನಿ ನರೇಂದ್ರ ಮೋದಿಯವರು ನ್ಯಾಷನಲ್ ಗಂಗಾ ಕೌನ್ಸಿಲ್​ನ ಮೊದಲ ಸಭೆಯನ್ನು ಇಂದು ಕಾನ್ಪುರದಲ್ಲಿ ನಡೆಸಿದ್ದಾರೆ. ಸಭೆಯಲ್ಲಿ ನಮಾಮಿ ಗಂಗಾ ಯೋಜನೆಯ ಮುಂದಿನ ಹಂತಗಳು, ನದಿ ಸ್ವಚ್ಛತೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನರೇಂದ್ರ ಮೋದಿ...

ವಿಡಿಯೋ | ಪತ್ನಿಗಾಗಿ ಆತ ಮಾಡಿದ ಆ ಕೆಲಸಕ್ಕೆ ನೆಟ್ಟಿಗರ...

ಈತ ತನ್ನ ಮಡದಿಗಾಗಿ ಮಾಡಿದ ಆ ಕೆಲಸದಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಪ್ರಶಂಸೆ ಪಡೆದಿದ್ದಾನೆ. ಚೀನಾದ ಹೆಗಾಂಗ್​ನ ಪೊಲೀಸರು ಇಂತಹ ವೀಡಿಯೊಂದನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ವೀಕ್ಷಿಸಿದ ಸಾವಿರಾರು ಮಂದಿ ಅದಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಆ...

VIDEO: ಕಾನ್ಪುರದಲ್ಲಿ ನ್ಯಾಷನಲ್​ ಗಂಗಾ ಕೌನ್ಸಿಲ್​ ಮೊದಲ ಸಭೆ: ಅಟಲ್​...

ಕಾನ್ಪುರ: ಪ್ರಧಾನಿ ನರೇಂದ್ರ ಮೋದಿಯವರು ಇಂದು ಕಾನ್ಪುರಕ್ಕೆ ತೆರಳಿದ್ದು ನ್ಯಾಷನಲ್​ ಗಂಗಾ ಕೌನ್ಸಿಲ್​ನ ಮೊದಲ ಸಭೆ ನಡೆಸಿದ್ದಾರೆ. ಉತ್ತರ ಪ್ರದೇಶದ ಕಾನ್ಪುರಕ್ಕೆ ತಲುಪಿದ ಅವರನ್ನು ಅಲ್ಲಿನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರು ಸ್ವಾಗತಿಸಿದರು. ಬಳಿಕ...

ಮನೆಗೆಲಸದ ಯುವತಿ ಮೇಲೆ ಮೌಲ್ವಿಯಿಂದ ಅತ್ಯಾಚಾರ: ಐರನ್​ ಬಾಕ್ಸ್​ನಿಂದ ಮೈಯೆಲ್ಲ...

ಬೆಂಗಳೂರು: ಮನೆಯ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಐರನ್​ ಬಾಕ್ಸ್​ನಿಂದ ಮೈಯೆಲ್ಲಾ ಸುಟ್ಟು ಮೌಲ್ವಿಯೊಬ್ಬ ವಿಕೃತ ಮೆರೆದಿರುವ ಆರೋಪ ರಾಜ್ಯ ರಾಜಧಾನಿಯಲ್ಲಿ ಕೇಳಿಬಂದಿದೆ. ನಗರದ ಕೋರಮಂಗಲದಲ್ಲಿ ಪೈಶಾಚಿಕ ಕೃತ್ಯ ನಡೆದಿದೆ...

ಕಾಂಗ್ರೆಸ್​ನಿಂದ ಭಾರತ್​ ಬಚಾವೋ ಬೃಹತ್​ ರ‍್ಯಾಲಿ: ಬಿಜೆಪಿ ವಿರುದ್ಧ ಹರಿಹಾಯ್ದ...

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಕ್ರಮಗಳು ಹಾಗೂ ದೇಶದಲ್ಲಿ ಕುಸಿಯುತ್ತಿರುವ ಅರ್ಥ ವ್ಯವಸ್ಥೆ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಜನರಿಗೆ ತಿಳಿಸಲು ಕಾಂಗ್ರೆಸ್,​ ರಾಷ್ಟ್ರ ರಾಜಧಾನಿಯಲ್ಲಿ "ಭಾರತ್​ ಬಚಾವೋ"...