Earthquake : ಮತ್ತಿಘಟ್ಟ ಸಮೀಪ 5 ಕಿಮೀ ಆಳದಲ್ಲಿ ಭೂಕಂಪ

earthquake

ಕಾರವಾರ: ಜಿಲ್ಲೆಯ ಶಿರಸಿ ಭಾಗದಲ್ಲಿ ಭಾನುವಾರ ಭೂಕಂಪ (Earthquake) ಆಗಿರುವುದು ಖಚಿತವಾಗಿದೆ.  ಉತ್ತರ ಕನ್ನಡ ಜಿಲ್ಲೆಯ ಸೂಪಾದಲ್ಲಿ ಭೂಕಂಪ ಮಾಪನ ಕೇಂದ್ರವಿದೆ. ಅಲ್ಲಿ ಯಾವುದೇ ಮಾಹಿತಿ ದಾಖಲಾಗಿಲ್ಲ. ಆದರೆ, ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಗ್ರಫಿ ಸಂಸ್ತೆಯ  ಗೋವಾ ಮಡಗಾಂವನಲ್ಲಿರುವ ಭೂಕಂಪ ಮಾಪನ ಕೇಂದ್ರದಲ್ಲಿ ಕಂಪನ ದಾಖಲಾಗಿದೆ.  ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಗ್ರಫಿ ಸಂಸ್ತೆಯು  ದಾಖಲೆಗಳನ್ನು ಬಿಡುಗಡೆ ಮಾಡಿದೆ.

ಭೂಮಿ ಕಂಪಿಸಿದ ಬಗ್ಗೆ ಹಾಗೂ ಭಾರಿ ಶಬ್ದ ಬಂದ ಬಗ್ಗೆ ಸ್ಥಳೀಯರು ಭಾನುವಾರ ತಮ್ಮ ಅನುಭವ ಹಂಚಿಕೊಂಡಿದ್ದರು. ಆದರೆ, ಜಿಲ್ಲಾಡಳಿತ ಅಂಥ ಯಾವುದೇ ಭೂಕಂಪನ ದಾಖಲಾಗಿಲ್ಲ ಎಂದು ವರದಿ ನೀಡಿತ್ತು.

ಎಲ್ಲಿದೆ Earthquake  ಕೇಂದ್ರ

ಮತ್ತಿಘಟ್ಟ ಸಮೀಪದ ಕುಳಿಗದ್ದೆ ಬೀರಂಜಿ ಎಂಬುದು ಭೂಕಂಪ ಕೇಂದ್ರವಾಗಿದ್ದು, ಭಾನವಾರ ಮಧ್ಯಾಹ್ನ 11.59 ಕ್ಕೆ  ರಿಕ್ಟರ್ ಮಾಪಕದಲ್ಲಿ 3.5 ಪ್ರಮಾಣದಲ್ಲಿ ಭೂಮಿ ಕಂಪಿಸಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮಾಗ್ರಫಿ ದಾಖಲಿಸಿದೆ. ಭುಮಿಯ ಮೇಲ್ಮೈಯಿಂದ  ಸುಮಾರು 5 ಕಿಮೀ ಆಳದಲ್ಲಿ ಕಂಪನ ಉಂಟಾಗಿದೆ. ಅದರ ಪರಿಣಾಮವು ಕೇಂದ್ರದಿಂದ ಸುಮಾರು 300 ಕಿಮೀವರೆಗೂ ಆಗಿದೆ ಎಂದು ದಾಖಲಿಸಲಾಗಿದೆ.

ಘಟ್ಟದಲ್ಲಿEarthquake ಗಡಗಡ

ಇದು ಪಶ್ಚಿಮ ಘಟ್ಟದ ನಟ್ಟ ನಡುವಿನ ಭಾಗವಾಗಿದೆ. ಘಟನೆ ಪಶ್ಚಿಮ ಘಟ್ಟದ ನಿವಾಸಿಗಳ ಎದೆ ನಡುಗಿಸಿದೆ. ಘಟನೆ ನಡೆದ ಸ್ಥಳದಿಂದ 30 ಕಿಮೀ ಅಂತದಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರವಿದೆ. ಕೊಡಸಳ್ಳಿ ಅಣೆಕಟ್ಟೆಯಿದೆ. 10 ಕಿಮೀ ಕಡಿಮೆ ದೂರದಲ್ಲಿ ಅತಿ ಅಪರೂಪದ ಯಾಣದ ಭೈರವೇಶ್ವರ ಶಿಖರಗಳಿವೆ. ಮಾತ್ರವಲ್ಲ ಕುಸಿದು ಬೀಳಬಹುದಾದ ಪಶ್ಚಿಮ ಘಟ್ಟದ ಸೂಕ್ಷ÷್ಮ ವಲಯ ಇದಾಗಿದೆ. ಈ ಹಿಂದೆಯೂ ಈ ವ್ಯಾಪ್ತಿಯ ಮತ್ತಿಘಟ್ಟದಲ್ಲಿ, ಯಲ್ಲಾಪುರ ತಾಲೂಕಿನ ಕಳಚೆ, ಅರಬೈಲ್ ಭಾಗದಲ್ಲಿ ಭೂ ಕುಸಿತ ಉಂಟಾಗಿತ್ತು.

ಇದನ್ನೂ ಓದಿ: ಶಿರಸಿ-ಸಿದ್ದಾಪುರ ತಾಲೂಕಿನಲ್ಲಿ ಭೂಕಂಪದ ಅನುಭವhttps://www.vijayavani.net/earthquake-experience-in-shirsi-siddapur-taluk

Share This Article

ಊಟದ ನಂತರ ಸಿಹಿ ತಿನ್ನುವುದು ಒಳ್ಳೆಯದೇ? ವೈದ್ಯರ ಸಲಹೆ..!  sweet

sweet:  ಸಿಹಿ ತಿಂಡಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ... ನಾಲಿಗೆ ಚಪ್ಪರಿಸಿ ಸಿಹಿ ತಿಂಡಿ…

astrology : ಈ ದಿನ ಉಗುರು, ಕೂದಲನ್ನು ಕತ್ತರಿಸಿದ್ರೆ ಕಾದಿದೆ ಸಂಕಷ್ಟ! ಈ ಕೆಲಸಕ್ಕೂ ಇದೆ ಒಳ್ಳೆಯ ದಿನ

astrology: ವಾರದ ಕೆಲವು ದಿನಗಳಲ್ಲಿ ಉಗುರುಗಳನ್ನು ಕತ್ತರಿಸುವುದು ಮತ್ತು ಕೂದಲನ್ನು ಕತ್ತರಿಸುವು ಒಳ್ಳೆಯದಲ್ಲ ಎಂದು ಹೇಳಲಾಗುತ್ತದೆ. …

27 ವರ್ಷದ ನಂತ್ರ ಪೂರ್ವ ಭಾದ್ರಪದ ನಕ್ಷತ್ರದಲ್ಲಿ ಶನಿ ಸಂಚಾರ: ಈ 3 ರಾಶಿಯವರಿಗೆ ಅದೃಷ್ಟವೋ ಅದೃಷ್ಟ | Zodiac Signs

Zodiac Signs : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಅನೇಕ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಆಗಾಗ…