-by Benki Basanna, New York
ವಾಷಿಂಗ್ಟನ್ : ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನವೆಂಬರ್ 5ರಂದು ನಡೆಯಲಿದೆ. ಆದರೆ ಈಗಾಗಲೇ ಕೆಲವು ರಾಜ್ಯಗಳಲ್ಲಿ ಅರ್ಲಿ ವೋಟಿಂಗ್ (Early Voting) ಪ್ರಾರಂಭವಾಗಿದೆ. ನ್ಯೂಯಾರ್ಕ್ ರಾಜ್ಯದಲ್ಲಿ ಶನಿವಾರ (ಅಕ್ಟೋಬರ್ 26) ಬೆಳಗ್ಗೆ 9 ಗಂಟೆಗೆ ಅರ್ಲಿ ವೋಟಿಂಗ್ ಪ್ರಾರಂಭವಾಯಿತು.
ಇದನ್ನು ಓದಿ: ಮೆಕ್ಡೊನಾಲ್ಡ್ನಲ್ಲಿ ಡೊನಾಲ್ಡ್ ಟ್ರಂಪ್; ಕೆಲಸ ಮಾಡುತ್ತಿರುವ ವಿಡಿಯೋ ವೈರಲ್ | Donald Trump
ನಡುಗುವ ಚಳಿಯಲ್ಲಿ ಬಹಳಷ್ಟು ಜನರು ಎಂಟು ಗಂಟೆಗೆ ಬಂದು ಕ್ಯೂನಲ್ಲಿ ನಿಂತಿದ್ದರು. ಬೆಂಕಿ ಬಸಣ್ಣ ಸಹಿತ ಸಾಲಿನಲ್ಲಿ ನಿಂತು ಅರ್ಲಿ ವೋಟಿಂಗ್ ಪ್ರಾರಂಭವಾದ ಮೊದಲ ದಿವಸವೇ ತಮ್ಮ ಮತದಾನ ಮಾಡಿದರು. ಕಮಲ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಮಧ್ಯ ತೀವ್ರ ಸ್ವರೂಪದ ಸ್ಪರ್ಧೆ ಏರ್ಪಟ್ಟಿದೆ. ಮೊದಲು ಟ್ರಂಪ್ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಈಗಿನ ಅಧ್ಯಕ್ಷ ಜೋ ಬೈಡನ್ ವಿರುದ್ಧ ಒಪಿನಿಯನ್ ಪೋಲಿನಲ್ಲಿ ತುಂಬಾ ಮುಂದಿದ್ದರು. ಆದರೆ ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲ ಹ್ಯಾರಿಸ್ ಬಂದ ಮೇಲೆ ರಿಪಬ್ಲಿಕ್ ಪಕ್ಷದ ಟ್ರಂಪ್ 0ನ್ನಡೆ ಸಾಧಿಸಿದ್ದರು. ಕಾರಣ ಪ್ರೆಸಿಡೆನ್ಸಿಯಲ್ ಡಿಬೇಟ್ನಲ್ಲಿ ಕಮಲಾ ವಿರುದ್ಧ ಟ್ರಂಪ್ ಸರಿಯಾಗಿ ಮಾತನಾಡಲಿಲ್ಲ.
ಇತ್ತೀಚಿನ ಕೆಲವು ವಾರಗಳಲ್ಲಿ ಮತ್ತೆ ಟ್ರಂಪ್ ಮುನ್ನಡೆಗೆ ಬರುತ್ತಿದ್ದಾರೆ. ಹೀಗಾಗಿ ಈಗ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಯಾರು ಗೆಲ್ಲುತ್ತಾರೆ ಎಂದು ಹೇಳುವುದು ಕಷ್ಟವಾಗಿದೆ.
ನನಗೆ ಭಾರತದಲ್ಲಿ ಇರಲು ಅವಕಾಶ ಕೊಡಿ; ಲೇಖಕಿ ತಸ್ಲೀಮಾ ನಸ್ರೀನ್ ಮನವಿ | Taslima Nasreen