ಬಸವನಬಾಗೇವಾಡಿ: ಮನೆ, ಅಂಗಡಿ ಇನ್ನಿತರ ಆಸ್ತಿಗಳ ದಾಖಲಾತಿ ಮತ್ತು ಗಣಕೀಕರಣ, ಸುರಕ್ಷತೆಗಾಗಿ ರಾಜ್ಯ ಪಟ್ಟಣದಲ್ಲಿ ಇ-ಆಫೀಸ್ ಸೇವೆ ಪ್ರಾರಂಭಿಸಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ಪಟ್ಟಣದ ಪುರಸಭೆ ಕಚೇರಿಯಲ್ಲಿ ಶನಿವಾರ ಇ-ಆಫೀಸ್ ತಂತ್ರಾಂಶ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಾರ್ವಜನಿಕರು ತಮ್ಮ ದಾಖಲೆಗಳು ಆನ್‌ಲೈನ್‌ನಲ್ಲಿ ಕುಳಿತಲ್ಲೇ ತಿಳಿದುಕೊಳ್ಳಲು ಈ ಯೋಜನೆ ಸಹಕಾರಿಯಾಗಲಿದೆ ಎಂದರು.
ವಿಜಯಪುರ ನಗರಾಭಿವೃದ್ಧಿ ಕೋಶ ಯೋಜನಾಧಿಕಾರಿ ಬಿ.ಎ. ಸೌದಾಗರ್, ಪುರಸಭೆ ಮುಖ್ಯಾಧಿಕಾರಿ ರುದ್ರೇಶ ಚಿತ್ತರಗಿ, ಪುರಸಭೆ ಸದಸ್ಯ ರವಿ ಪಟ್ಟಣಶೆಟ್ಟಿ, ಅಶೋಕ ಗುಳೇದ, ನೀಲಪ್ಪ ನಾಯಕ, ಜಗದೇವಿ ಗುಂಡಳ್ಳಿ, ನಜೀರ್ ಗಣಿ, ಪ್ರವೀಣ ಪೂಜಾರಿ, ಪುರಸಭೆ ಜೆ.ಇ. ಮಹದೇವ ಜಂಬಗಿ, ಸಂತೋಷ ಗಿಡ್ಡಸಣ್ಣವರ, ಸುರೇಶ್ ಬಾಗೇವಾಡಿ, ಗುರು ಮಾಂಗಾವಿ, ಮಹೇಶ ಹಿರೇಮಠ, ವಿಜಯಕುಮಾರ ವಂದಾಲ, ಗೀತಾಜಂಲಿ ದಾಸರ, ರೋಶನ್ ಮುಲ್ಲಾ, ರಾಜು ರಾಠೋಡ, ಸಿದ್ದರಾಮಗೌಡ ಪಾಟೀಲ, ಶ್ರೀಧರ ಕಟ್ಟಿ ಉಪಸ್ಥಿತರಿದ್ದರು.